Monkey Trouble: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ‘ಮಂಗ’ಗಳದ್ದೇ ಕಾರ್ಬಾರ್, ವಾನರರ ಉಪಟಳಕ್ಕೆ ರೋಗಿಗಳ ಪರದಾಟ
ಅದು ಸುಸಜ್ಜಿತ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ. ನುರಿತ ವೈದ್ಯರಿದ್ದಾರೆ, ಉತ್ತಮ ಚಿಕಿತ್ಸೆಯೂ ಸಿಗುತ್ತೆ. ಹೀಗಿದ್ರೂ ರೋಗಿಗಳು ಮಾತ್ರ ಈ ಆಸ್ಪತ್ರೆಗೆ ಹೋಗುವುದಕ್ಕೆ ಹೆದರ್ತಾರೆ. ಹಾಗಾದ್ರೆ ಈ ಹಾಸ್ಪಿಟಲ್ ಬಗ್ಗೆ ಈ ಪರಿ ಭಯ ಏಕೆ?
ಗದಗ: ನಗರದ ಪ್ರಸಿದ್ಧ ಜಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳು ಯಾವಾಗಂದ್ರೆ ಆವಾಗ ರೋಗಿಗಳ ವಾರ್ಡ್ಗೆ ನುಗ್ಗುತ್ತವೆ. ವಾನರ ಹಿಂಡು ಕಂಡು ಮಕ್ಕಳು, ಬಾಣಂತಿಯರು ಬೆಚ್ಚಿ ಬೀಳ್ತಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿನ ಸ್ಥಿತಿಯ ಸ್ಯಾಂಪಲ್ ಸದ್ಯ ಹೀಗಿದೆ. ಅಷ್ಟಕ್ಕೂ ಆಸ್ಪತ್ರೆಗೆ ಈ ರೀತಿ ಕಪಿಗಳ ಹಿಂಡು ಲಗ್ಗೆ ಇಡ್ತಿರೋದು ಇದೇನು ಮೊದಲಲ್ಲ. ಅದೆಷ್ಟೋ ತಿಂಗಳಲ್ಲ, ವರ್ಷಗಳೇ ಕಳೆದುಹೋಗಿವೆ. ಆಸ್ಪತ್ರೆಗೆ ಪ್ರತಿದಿನ ರೋಗಿಗಳು ಬರ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಈ ಕಪಿಸೇನೆ ಮಾತ್ರ ತಪ್ಪದೇ ಇಲ್ಲಿಗೆ ಬರ್ತಾನೆ ಇರುತ್ವೆ.
ಜಿಮ್ಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಾರ್ಡ್ಗಳಲ್ಲಿ ಪುಟ್ಟ ಪುಟ್ಟ ಮಕ್ಕಳು, ಹಸಿ ಬಾಣಂತಿಯರಿರ್ತಾರೆ. ಹೀಗಿರುವಾಗ ಮಾವನ ಮನೆಗೆ ಬಂದು ಹೋದಂತೆ ಈ ಮಂಗಗಳು ಬಂದು ಉಪಟಳ ನೀಡ್ತಾ ಇದ್ರೆ ಆಸ್ಪತ್ರೆಗೆ ದಾಖಲಾದವರ ಕತೆ ಏನು ಅನ್ನೋದು ರೋಗಿಗಳ ಸಂಬಂಧಿಕರ ಪ್ರಶ್ನೆಯಾಗಿದೆ.
ಯಾರ ಭಯವಿಲ್ಲದೆ ಮುಖ್ಯದ್ವಾರದ ಮೂಲಕವೇ ಆಸ್ಪತ್ರೆಗೆ ಎಂಟ್ರಿಕೊಡುವ ಈ ಮಂಗಗಳ ಉಪಟಳ ಎಷ್ಟಿದೆ ಅಂದ್ರೆ, ಕಳೆದ ಐದಾರು ತಿಂಗಳ ಹಿಂದೆ ಮಗುವಿನ ಮೇಲೆ ದಾಳಿ ಮಾಡಿ ಹೊಟ್ಟೆಯನ್ನೇ ಬಗೆದಿದ್ವು. ಹೀಗಿದ್ರೂ ಜಿಮ್ಸ್ ಆಡಳಿತ ಮಾತ್ರ ಇನ್ನೂ ಎಚ್ಚೆತ್ತಂತೆ ಕಾಣ್ತಿಲ್ಲ. ಅದೆಷ್ಟೋ ಬಾರಿ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದ್ರೂ ನೋ ಯೂಸ್ ಅಂತಿದ್ದಾರೆ ಸಾರ್ವಜನಿಕರು.
ಒಟ್ನಲ್ಲಿ ಒಂದು ಕಡೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ರೋಗಿಗಳು ಪರದಾಡ್ತಿದ್ರೆ, ಆಸ್ಪತ್ರೆಗೆ ದಾಖಲಾದವ್ರಿಗೆ ನೆಮ್ಮದಿ ಇಲ್ಲ. ಈ ಮಂಗಗಳು ಎಲ್ಲಿ? ಯಾವಾಗ? ಏನು ಮಾಡುತ್ವೋ ಅನ್ನೋ ಭೀತಿಯಲ್ಲೇ ದಿನ ಕಳೆದು ಬರಬೇಕಿದೆ.
ವರದಿ: ಸಂಜೀವ ಪಾಂಡ್ರೆ ಟಿವಿ9
ಇದನ್ನೂ ಓದಿ: Viral Video: ಸರತಿ ಸಾಲಿನಲ್ಲಿ ಸರಸರನೆ ಕಟ್ಟಡ ಇಳಿಯುತ್ತಿರುವ ಮಂಗಗಳು! ಉದ್ಯಮಿ ಹರ್ಷ ಗೋಯಂಕಾ ಹಂಚಿಕೊಂಡ ವಿಡಿಯೋ ವೈರಲ್
ಮಾನವರಂತೆಯೇ ಅನುಕರಿಸಿ ಮಾಸ್ಕ್ ಧರಿಸಿ ರಸ್ತೆಯಲ್ಲಿ ತಿರುಗಾಡುತ್ತಿರುವ ಕೋತಿ; ವಿಡಿಯೋ ವೈರಲ್