ಬೆಂಗಳೂರಲ್ಲಿ ಮುಂಜಾನೆಯೇ ವೀಲಿಂಗ್ ಹಾವಳಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕೆಟಿಎಂ ಹಾಗೂ ಡಿಯೋ ಬೈಕ್​ನಲ್ಲಿ ಯುವಕರು ವೀಲಿಂಗ್​ ಮಾಡುತಿದ್ದು, ಇದರಿಂದ ಬೇಸತ್ತ ಜನರು ಮೊಬೈಲ್​ನಲ್ಲಿ ವೀಲಿಂಗ್ ದೃಶ್ಯ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ವೀಲಿಂಗ್ ಹಾವಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಲ್ಲಿ ಮುಂಜಾನೆಯೇ ವೀಲಿಂಗ್ ಹಾವಳಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಬೈಕ್ ವೀಲಿಂಗ್

ಬೆಂಗಳೂರು: ಬೆಳ್ಳಂ ಬೆಳಗ್ಗೆ ಬೆಂಗಳೂರಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಾಗರ ಬಾವಿ ರಿಂಗ್ ರೋಡ್​ನಲ್ಲಿ ನೂರಾರು ಬೈಕ್ ಸವಾರರ ಮಧ್ಯೆ ಕೆಲವು ಯುವಕರು ಗುಂಪು ಕಟ್ಟಿಕೊಂಡು ವೀಲಿಂಗ್​ ಮಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಟಿಎಂ ಹಾಗೂ ಡಿಯೋ ಬೈಕ್​ನಲ್ಲಿ ಯುವಕರು ವೀಲಿಂಗ್​ ಮಾಡುತಿದ್ದು, ಇದರಿಂದ ಬೇಸತ್ತ ಜನರು ಮೊಬೈಲ್​ನಲ್ಲಿ ವೀಲಿಂಗ್ ದೃಶ್ಯ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ವೀಲಿಂಗ್ ಹಾವಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ಅನೇಕ ಕಡೆಗಳಲ್ಲಿ ಈ ರೀತಿ ಬೈಕ್​ಗಳಲ್ಲಿ ವೀಲಿಂಗ್​ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಇದರಿಂದ ಅನೇಕ ಅನಾಹುತಗಳು ಕೂಡ ಸಂಭವಿಸಿದೆ.

ಬೈಕ್ ಸ್ಟಂಟ್ ಮಾಡಲು ಹೋಗಿ ನೆರೆಮನೆಯ ಗೋಡೆ ಒಡೆದ ಭೂಪ
ಬೈಕ್ ಸ್ಟಂಟ್ಗಳು ಗೆಳೆಯರ ಗುಂಪಿನಲ್ಲಿ ಮೋಜಿನ ವಿಷಯ. ದ್ವಿಚಕ್ರ ವಾಹನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಪ್ರತಿಯೊಬ್ಬ ಬೈಕ್ ಸವಾರನ ಕನಸಾಗಿರುತ್ತದೆ. ಸುಲಭವಾದ ಬೈಕ್ ಸ್ಟಂಟ್​ಗಳಿಂದ ನೀವು ನಿಮ್ಮ ಸ್ನೇಹಿತ ಗುಂಪಿನಲ್ಲಿ ಎಲ್ಲರ ಗಮನ ಸೆಳೆಯಬಹುದು. ಆದರೆ ಅದನ್ನು ಸಾರ್ವಜನಿಕ ರಸ್ತೆಗಳಲ್ಲಿ ಪ್ರರ್ದಶಿಸಲು ಹೋದರೆ ಅಪಾಯ ತಪ್ಪಿದ್ದಲ್ಲ. ನಿಯಂತ್ರಿತ ಪರಿಸ್ಥಿತಿಯಲ್ಲಿ ಇಂತಹ ಸ್ಟಂಟ್ಗಳ್ಳನ್ನು ಅಭ್ಯಾಸ ಮಾಡುವುದು ಮತ್ತು ನಿರ್ವಹಿಸುವುದರಿಂದ ಅಪಾರ ಅಭಿಮಾನಿಗಳನ್ನು ಆಕರ್ಷಿಸಬಹುದು ಆದರೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅದನ್ನು ಮಾಡಿದರೆ ಅದು ನಿಮ್ಮ ಜೀವಕ್ಕೆ ತುತ್ತಾಗಬಹುದು.  ಹೀಗೆಯೇ  ಬೈಕ್ ಸ್ಟಂಟ್ ಮಾಡಲು ಹೋದ ಈ ಯುವಕನಿಂದ ಕೊನೆಗೆ ಏನಾಯಿತು ಗೊತ್ತಾ?

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ಸ್ಪ್ಲೆಂಡರ್_ಬುಲೆಟ್_ಲವ್’ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ ಮತ್ತು ಕೆಲವೇ ದಿನಗಳಲ್ಲಿಇದು ಸಾವಿರಾರು ಲೈಕ್‌ಗಳನ್ನು ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೊದಲ್ಲಿ, ಯುವಕನೊಬ್ಬ ತನ್ನ ಬೈಕ್‌ನ್ನ ಬ್ಯಾಕ್‌ವೀಲ್‌ನ್ನು ಸ್ವಲ್ಪ ನೀರಿನ ಮೇಲೆ ಇರಿಸಿ ಮತ್ತು ಫ್ರಂಟ್ವೀಲ್ ಅನ್ನ ಮೇಲಿರಿಸಿ ಅಂದರೆ ಗಾಳಿಯಲ್ಲಿ ಇರಿಸಿ ಸವಾರಿ ಮಾಡುವುದನ್ನು ಕಾಣಬಹುದು. ಪುಣ್ಯಕ್ಕೆ, ಬೈಕರ್ ಹೆಲ್ಮೆಟ್ ಧರಿಸಿದ್ದನು. ಆದರೆ ಒಂದು ಸಣಕಲು ರಸ್ತೆಯ ಮೇಲೆ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದನು. ಅವನ ಸ್ಟಂಟ್ ನೋಡುತ್ತಿದ್ದ ಪಕ್ಕದ ಮನೆಯವನು ಮುಂದೆ ಏನಾಗಬಹುದು ಎಂದು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಬೈಕು ಜಾರಿದಾಗ, ಅದು ಪಕ್ಕದ ಮನೆಯ ಗೋಡೆಗೆ ಎಳೆದೊಯ್ದು, ಇಡೀ ಗೋಡೆಯನ್ನು ಪುಡಿ ಮಾಡಿತು. ಅಷ್ಟಾದರೂ ಬೈಕ್​ಗೆ ಏನೂ ಆಗಿಲ್ಲ ಅನ್ನೋದು ಸೋಜಿಗದ ವಿಷಯ!

ಇದನ್ನೂ ಓದಿ:

ಏಕಾಏಕಿ ಕುಸಿಯಿತು ರಾಷ್ಟ್ರೀಯ ಹೆದ್ದಾರಿ, ಅರುಣಾಚಲ ಪ್ರದೇಶದ ಇಟಾನಗರದಲ್ಲಿ ದುರಂತ; ಸೆರೆಯಾಯ್ತು ದೃಶ್ಯ

Viral Video: ಬೈಕ್ ಸ್ಟಂಟ್ ಮಾಡಲು ಹೋಗಿ ನೆರೆಮನೆಯ ಗೋಡೆ ಒಡೆದ ಭೂಪ!