ಏಕಾಏಕಿ ಕುಸಿಯಿತು ರಾಷ್ಟ್ರೀಯ ಹೆದ್ದಾರಿ, ಅರುಣಾಚಲ ಪ್ರದೇಶದ ಇಟಾನಗರದಲ್ಲಿ ದುರಂತ; ಸೆರೆಯಾಯ್ತು ದೃಶ್ಯ
ಇಟಾನಗರದ ಬಳಿ ಇರುವ ಗಾಂಧಿ ಪಾರ್ಕ್ ಬಳಿಯಿಂದ ಘಟನೆಯ ವಿಡಿಯೋ ಸೆರೆಯಾಗಿದೆ. ವಿಡಿಯೋದಲ್ಲಿ ಗಮನಿಸುವಂತೆ ರಸ್ತೆ ಕುಸಿತದ ಮತ್ತೊಂದು ಭಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಘಟನೆಯಿಂದ ಯಾರಿಗೂ ಅಪಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ಇಟಾನಗರ: ಅರುಣಾಚಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-415 ಕುಸಿದು ಬಿದ್ದಿರುವ ಆಘಾತಕಾರಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಕಳೆದ ಎರಡು ದಿನಗಳಿಂದ ಬಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಈ ಘಟನೆ ಸಂಭವಿಸಿದೆ. ರಸ್ತೆ ಕುಸಿತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಇಟಾನಗರದ ಬಳಿ ಇರುವ ಗಾಂಧಿ ಪಾರ್ಕ್ ಬಳಿಯಿಂದ ಘಟನೆಯ ವಿಡಿಯೋ ಸೆರೆಯಾಗಿದೆ. ವಿಡಿಯೋದಲ್ಲಿ ಗಮನಿಸುವಂತೆ ರಸ್ತೆ ಕುಸಿತದ ಮತ್ತೊಂದು ಭಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಘಟನೆಯಿಂದ ಯಾರಿಗೂ ಅಪಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕೆಲಸ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರೀ ಪ್ರಮಾಣದ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದೆ. ಇದರಿಂದ ರಸ್ತೆ ಕುಸಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.
#WATCH | Arunachal Pradesh: A portion of the National Highway-415, collapses after heavy rainfall, near Indira Gandhi Park in Itanagar pic.twitter.com/CoEUOIKB7N
— ANI (@ANI) May 31, 2021
ಇದನ್ನೂ ಓದಿ:
ರಾಷ್ಟ್ರೀಯ ಹೆದ್ದಾರಿ ನಂ 4ರಲ್ಲಿ ವ್ಹೀಲಿಂಗ್ ಮಾಡ್ತಿದ್ದ ಪುಂಡರು ಅಂದರ್
ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಪಾತ್ರವಾದ ವಿಜಯಪುರದ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪತ ಕಾಮಗಾರಿ
Published On - 11:59 am, Wed, 2 June 21