AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟಾ ನಿಷೇಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದ ಅಮುಲ್ ಉಪಾಧ್ಯಕ್ಷ

Amul: ಭಾರತೀಯ ಸಂಸ್ಕೃತಿಯು ಜಾನುವಾರುಗಳನ್ನು ತಮ್ಮ ಕುಟುಂಬದ ಭಾಗವಾಗಿ ಇರಿಸುತ್ತದೆ ಮತ್ತು ಅವುಗಳನ್ನು ಕುಟುಂಬದ ಸದಸ್ಯರಾಗಿ ಬೆಳೆಸುತ್ತದೆ. ಆದ್ದರಿಂದ, ಕ್ರೌರ್ಯದ ಪ್ರಶ್ನೆಯು ಎಲ್ಲೂ ಉದ್ಭವಿಸುವುದಿಲ್ಲ ಎಂದ ಅಮುಲ್ ಉಪಾಧ್ಯಕ್ಷ ವಾಲಮಜಿ ಹಂಬಾಲ್.

ಪೇಟಾ ನಿಷೇಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದ ಅಮುಲ್ ಉಪಾಧ್ಯಕ್ಷ
ಅಮುಲ್- ಪೇಟಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 02, 2021 | 12:29 PM

Share

ದೆಹಲಿ: ವೀಗನ್ ಹಾಲು ಮತ್ತು ಆಹಾರಕ್ಕಾಗಿ ಇಡೀ ವಿಶ್ವವೇ ಸಿದ್ಧವಿರುವಾಗ ಭಾರತದಲ್ಲಿಯೂ ಅದನ್ನು ಮಾಡಬಹುದು ಎಂದು ಡೈರಿ ಹಾಲು ಉತ್ಪಾದನೆಯ ಬೃಹತ್ ಸಹಕಾರಿ ಸಂಸ್ಥೆ ಅಮುಲ್ ಗೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ- PETA) ಸಲಹೆ ನೀಡಿದೆ. ಇದರ ಬೆನ್ನಲ್ಲೇ ಅಮುಲ್ ಉಪಾಧ್ಯಕ್ಷ ವಾಲಮಜಿ ಹಂಬಾಲ್  ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಪೇಟಾವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಭಾರತೀಯ ಡೈರಿ ಕ್ಷೇತ್ರದ ವರ್ಚಸ್ಸಿಗೆ ಕಳಂಕ ತರುವ ಮೂಲಕ 10ಕೋಟಿ ಜನರ ಜೀವನೋಪಾಯವನ್ನು ಹಾಳುಮಾಡಲು ಪೇಟಾ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

“ಡೈರಿ ವಲಯವು ಭಾರತದ ಜಿಡಿಪಿಗೆ ಪ್ರಮುಖ ಕೊಡುಗೆಯಾಗಿದೆ. ಆದರೆ ಈ ಎನ್​ಜಿಒದಂತಹ ಅವಕಾಶವಾದಿ ಶಕ್ತಿಗಳು ಹರಡಿರುವ ತಪ್ಪು ಮಾಹಿತಿಯಿಂದ ಜಿಡಿಪಿ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಈ ರೀತಿಯ ಸಂಸ್ಥೆಗಳು ಭಾರತದ ಹಾಲು ಉತ್ಪಾದಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಪಿತೂರಿಯ ಭಾಗವಾಗಿದೆ ”ಎಂದು ಹಂಬಾಲ್  ಮಂಗಳವಾರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂತಹ ಸಂಸ್ಥೆಗಳು ಭಾರತದಲ್ಲಿ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಖಚಿತಪಡಿಸಿಕೊಳ್ಳಲು, ಗುಜರಾತ್‌ನ ಹಾಲು ಉತ್ಪಾದಕರು ಪ್ರಧಾನಿ ನರೇಂದ್ರ ಮೋದಿ ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಸಿಂಥೆಟಿಕ್ ಹಾಲನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳ ಘಟಕಗಳನ್ನು ಪ್ರೋತ್ಸಾಹಿಸುತ್ತಾ,ತಪ್ಪು ಮಾಹಿತಿ ಅಭಿಯಾನದ ಮೂಲಕ ಡೈರಿ ಉದ್ಯಮದ ವರ್ಚಸ್ಸನ್ನು ಕಳಂಕಿತಗೊಳಿಸುವ ಖಂಡನೀಯ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳ ಮೇಲೆ ನಿಷೇಧ ಹೇರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಎಂದು ಅವರು ಹೇಳಿದರು.

ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಜಾಗತಿಕ ಎನ್‌ಜಿಒ ಭಾರತದ ಅತಿದೊಡ್ಡ ಡೈರಿ ಸಂಘಟನೆಯಾದ ಅಮುಲ್ ಅವರನ್ನು ಸಸ್ಯ ಆಧಾರಿತ ಹಾಲು ಮತ್ತು ಆಹಾರಕ್ಕಾಗಿ ಮಾರುಕಟ್ಟೆಯನ್ನು ಬಳಸಿಕೊಳ್ಳುವ ತನ್ನ ಸ್ಥಾನದ ಲಾಭವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದ ಮೂರು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 10 ಕೋಟಿ ಭಾರತೀಯರು ಹಾಲು ನೀಡುವ ಪ್ರಾಣಿಗಳಿಗೆ ಯಾವುದೇ ಕ್ರೌರ್ಯವನ್ನು ನೀಡುವುದಿಲ್ಲ ಎಂದು ಹಂಬಲ್ ಹೇಳಿದ್ದಾರೆ.

“ಭಾರತೀಯ ಸಂಸ್ಕೃತಿಯು ಜಾನುವಾರುಗಳನ್ನು ತಮ್ಮ ಕುಟುಂಬದ ಭಾಗವಾಗಿ ಇರಿಸುತ್ತದೆ ಮತ್ತು ಅವುಗಳನ್ನು ಕುಟುಂಬದ ಸದಸ್ಯರಾಗಿ ಬೆಳೆಸುತ್ತದೆ. ಆದ್ದರಿಂದ, ಕ್ರೌರ್ಯದ ಪ್ರಶ್ನೆಯು ಎಲ್ಲೂ ಉದ್ಭವಿಸುವುದಿಲ್ಲ. ಈ ಸಂಪೂರ್ಣ ಪ್ರಸಂಗವು ತಪ್ಪು ಮಾಹಿತಿ ಅಭಿಯಾನ ಮತ್ತು ಅದು ಸ್ವಾವಲಂಬಿಯಾಗಿರುವ ಭಾರತೀಯ ಡೈರಿ ಉದ್ಯಮವನ್ನು ಒಡೆಯುವ ಪ್ರಯತ್ನವಾಗಿದೆ. ಈ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ತೊಂದರೆಯಿಂದ ದೇಶವನ್ನು ಉಳಿಸುತ್ತದೆ . ಇದನ್ನು ಅವಲಂಬಿಸಿರುವ 10 ಕೋಟಿ ಜನರು ನಿರುದ್ಯೋಗಿಗಳಾಗುತ್ತಾದೆ. ಈ ಕ್ರಮವನ್ನು ವಿವಿಧ ವಿದೇಶಿ ಕಂಪನಿಗಳು ಪ್ರೇರೇಪಿಸಿವೆ ಎಂದು ತೋರುತ್ತದೆ, ”ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್) ಸದಸ್ಯ ಒಕ್ಕೂಟದ ಸರ್ಹಾದ್ ಡೈರಿಯ ಅಧ್ಯಕ್ಷರೂ ಆಗಿರುವ ಹಂಬಾಲ್ ಹೇಳಿದ್ದಾರೆ.

ಜಿಸಿಎಂಎಂಎಫ್ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. “ಅಮುಲ್‌ಗೆ ಸಂಬಂಧಿಸಿದ ಸುಮಾರು 40 ಲಕ್ಷ ಡೈರಿ ರೈತರು ಮತ್ತು ಸುಮಾರು 15 ಲಕ್ಷ ಇತರರು ಪೇಟಾ ನಿಷೇಧವನ್ನು ಕೋರಿ ಪ್ರಧಾನಮಂತ್ರಿಗೆ ಪತ್ರ ಬರೆಯುವಂತೆ ನಾವು ಕೋರುತ್ತೇವೆ. ನಮ್ಮ ಮಟ್ಟದಲ್ಲಿಯೂ ನಾವು ಅದೇ ರೀತಿ ಮಾಡುತ್ತೇವೆ, ”ಎಂದು ಅವರು ಹೇಳಿದರು.

ಹಂಬಲ್‌ಗೆ ಪ್ರತಿಕ್ರಿಯಿಸಿದ ಪೇಟಾ ಇಂಡಿಯಾದ ಸಿಇಒ ಡಾ.ಮಣಿಲಾಲ್ ವಲ್ಲಿಯೇಟ್ ಅವರು ಮಂಗಳವಾರ ತಡವಾಗಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಅಮುಲ್ ತನ್ನನ್ನು ತಾನು ಪೀಡಕನೆಂದು ತೋರಿಸಿಕೊಟ್ಟಿದೆ. ಪ್ರಾಣಿಗಳ ಬಗ್ಗೆ ಸಾರ್ವಜನಿಕರ ಕಾಳಜಿಯನ್ನು ಪ್ರಶಂಸಿಸಲು ಸಾಧ್ಯವಿಲ್ಲ, ಮತ್ತು ಗ್ರಾಹಕರ ಪ್ರವೃತ್ತಿಯನ್ನು ಬದಲಾಯಿಸಿದರೂ ವ್ಯವಹಾರದ ರೀತಿಯಲ್ಲಿ ಬದಲಾವಣೆ ಇರಲಾರದು. ಆದರೆ ಯಾವುದೇ ರೀತಿಯ ಬೆದರಿಸುವಿಕೆಯು ಸತ್ಯವನ್ನು ಬದಲಿಸುವುದಿಲ್ಲ. ವೀಗನ್ ಆಹಾರ ಪದ್ದತಿ ಜಗತ್ತನ್ನೇ ಬದಲಿಸಲಿದೆ.

ಗ್ರಾಹಕರು ಸಸ್ಯ ಹಾಲು ಮತ್ತು ವೀಗನ್ ಆಹಾರಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಮಣಿಲಾಲ್ “ಗಂಡು ಕರುಗಳನ್ನು ವಾಡಿಕೆಯಂತೆ ಕೈಬಿಡಲಾಗುತ್ತದೆ ಅಥವಾ ಹಾಲನ್ನು ಉತ್ಪಾದಿಸಲಾಗದ ಕಾರಣ ಕೊಲ್ಲಲಾಗುತ್ತದೆ, ಉತ್ತಮ ಆರೋಗ್ಯವನ್ನು ಅನುಭವಿಸಲು ಬಯಸುವವರು ಹಸಿರುಮನೆ ಅನಿಲ, ನೀರು ವ್ಯರ್ಥ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುತ್ತಾರೆ. ಭಾರತವು ಪ್ರಾಣಿ ಪ್ರಿಯರ ರಾಷ್ಟ್ರವಾಗಿದೆ, ಮತ್ತು ಈಗ ನಾವು ವೀಗನ್ ಆಹಾರಗಳಲ್ಲಿಯೂ ವಿಶ್ವ ನಾಯಕರಾಗಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮುಲ್ ಮತ್ತು ಪೇಟಾ ಇಂಡಿಯಾ ನಡುವೆ ಸಸ್ಯಾಹಾರಿ ಹಾಲಿನ ಮೇಲೆ ನಿಲ್ಲದ ವಾಕ್ಸಮರ

(Amul vice-chairman Valamji Humbal urged Prime Minister Narendra Modi to ban PETA )

Published On - 12:27 pm, Wed, 2 June 21

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್