AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮುಲ್ ಮತ್ತು ಪೇಟಾ ಇಂಡಿಯಾ ನಡುವೆ ಸಸ್ಯಾಹಾರಿ ಹಾಲಿನ ಮೇಲೆ ನಿಲ್ಲದ ವಾಕ್ಸಮರ

ಪೇಟಾದ ಸಲಹೆಗಳನ್ನು ಬೇರೆಯವರೂ ಪ್ರಶ್ನಿಸುತ್ತಿದ್ದಾರೆ. ಅವರಲ್ಲೊಬ್ಬರು, ‘ಪೇಟಾ ಒಂದು ಹೆಚ್ಚುವರಿ ಹಾಲಿನ ಉತ್ಪಾದನೆಯನ್ನಷ್ಟೇ ಕೇಳಬಹುದು. ಯಾವುದನ್ನು ತಿನ್ನಬೇಕು, ತಿನ್ನಬಾರದು ಅಂತ ಅವರು ಬೇರೆಯವರಿಗೆ ಫರ್ಮಾನು ಹೊರಡಿಸುವಂತಿಲ್ಲ. ಪೇಟಾ ಇಬ್ಬಗೆ ನೀತಿಯ ಒಂದು ಎನ್​ಜಿಒಗಿಂತ ದೊಡ್ಡದೆನಿಸಿಕೊಳ್ಳುತ್ತಿದೆ,’ ಎಂದಿದ್ದಾರೆ.

ಅಮುಲ್ ಮತ್ತು ಪೇಟಾ ಇಂಡಿಯಾ ನಡುವೆ ಸಸ್ಯಾಹಾರಿ ಹಾಲಿನ ಮೇಲೆ ನಿಲ್ಲದ ವಾಕ್ಸಮರ
ಆರ್​ ಎಸ್ ಸೋಧಿ ಮತ್ತು ಪೇಟಾ ಇಂಡಿಯಾ
ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2021 | 1:16 AM

Share

ಡೈರಿ ಹಾಲು ಉತ್ಪಾದನೆಯ ಬೃಹತ್ ಸಹಕಾರಿ ಸಂಸ್ಥೆಯಾಗಿರುವ ಅಮುಲ್ ಮತ್ತು ಪ್ರಾಣಿ ದಯಾ ಸಂಸ್ಥೆ ಪೇಟಾ ನಡುವೆ ಸಸ್ಯಾಹಾರಿ ಆಹಾರ ಪದಾರ್ಥ ಮತ್ತು ಹಾಲು ತಯಾರಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಾಕ್ಸಸಮರ ಶುರವಾಗಿದೆ. ಅಮುಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್​ ಎಸ್​ ಸೋಧಿಗೆ ಪತ್ರವೊಂದನ್ನು ಬರೆದಿರುವ ಪೇಟಾ, ವಿಪುಲವಾಗಿ ಬೆಳೆಯುತ್ತಿರುವ ಸಸ್ಯಾಹಾರಿ ಆಹಾರ ಪದಾರ್ಥ ಮತ್ತು ಹಾಲಿನ ಮಾರ್ಕೆಟ್​ನಿಂದ ಡೈರಿ ಸಹಕಾರಿ ಸಂಘವು ಪ್ರಯೋಜನ ಪಡೆದುಕೊಳ್ಳಬೇಕು ಅಂತ ಹೇಳಿದೆ.

‘ಪೇಟಾ ಪರವಾಗಿ ನಾವು ಈ ಪತ್ರವನ್ನು ಬರೆಯುತ್ತಿದ್ದು ಫೆಬ್ರುವರಿ 17, 2020 ರಂದು ನಮ್ಮ ಸಿಈಓ ಬರೆದ ಪತ್ರಕ್ಕೆ ಇದು ಪೂರಕ ಭಾಗವಾಗಿದೆ. ಬಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರ್ಕೆಟ್​ನಿಂದ ಅಮುಲ್ ಪ್ರಯೋಜನ ಪಡೆದುಕೊಳ್ಳಲಿ ಎಂದು ನಾವು ಆಶಿಸುತ್ತೇವೆ. ಸಸ್ಯ ಆಧಾರಿತ ಆಹಾರ ಪದಾರ್ಥಗಳ ಮಾರ್ಕೆಟ್ ಕೇವಲ ಏರುಮುಖವಾಗಿ ಬೆಳೆಯುತ್ತಿದೆ. ಬೇರೆ ಕಂಪನಿಗಳು ನಮ್ಮಕರೆಗೆ ಸ್ಪಂದಿಸುತ್ತಿವೆ, ಹಾಗೇಯೇ ಅಮುಲ್ ಸಹ ಇದನ್ನು ಮಾಡಲಿ ಅಂತ ನಾವು ಬಯಸುತ್ತೇವೆ,’ ಎಂದು ಪೇಟಾ ಇಂಡಿಯಾ ಪತ್ರದಲ್ಲಿ ಹೇಳಲಾಗಿದೆ.

ಪೇಟಾದ ಪತ್ರಕ್ಕೆ ಟ್ವೀಟ್​ ಮೂಲಕ ಉತ್ತರಿಸಿರುವ ಸೋಧಿ, ‘10ಕೋಟಿ ಬಡ ರೈತರ ದೈನಂದಿನ ಆಹಾರವನ್ನು ಅಮುಲ್ ಕಸಿದೊಕೊಳ್ಳಲಿ ಎನ್ನುವುದು ಪೇಟಾದ ಬಯಕೆಯಾಗಿದೆ. ಕಳೆದ 75 ವರ್ಷಗಳಿಂದ ರೈತರ ಹಣದೊಂದಿಗೆ ಕಟ್ಟಿ ಬೆಳೆಸಿರುವ ಸಹಕಾರಿ ಸಂಸ್ಥೆಯನ್ನು ಸುಧಾರಿತ ಸೋಯಾ ತಳಿಯಿಂದ ಬಹುರಾಷ್ಟ್ರೀಯ ಕಂಪನಿಗಳು ತಯಾರಸುವ ಮತ್ತು ಜನಸಾಮಾನ್ಯರು ಖರೀದಿಸಲಾಗದಷ್ಟು ದುಬಾರಿ ಬೆಲೆಗೆ ಮಾರುವ ಪದಾರ್ಥಗಳ ಮಾರ್ಕೆಟ್ ಮಾಡಲು ಹಸ್ತಾಂತರಿಸುವಂತೆ ಹೇಳುತ್ತಿದೆ,’ ಎಂದಿದ್ದಾರೆ.

ಅವರ ಟ್ವೀಟ್​​ಗೆ ಉತ್ತರಿಸಿರುವ ಪೇಟಾ, ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರ್ಕೆಟ್​ನಲ್ಲಿ ಭಾರತ ವಿಶ್ವನಾಯಕ ಎನಿಸಿಕೊಳ್ಳಲಿದೆ ಎಂದು ಪೋರ್ಬ್ಸ್ ಹೇಳಿದೆ ಅಂತ ತಿಳಿಸಿದೆ. ‘ಪ್ರಾಣಿಗಳಿಗೆ ಬದುಕಲು ಅನುಕೂಲ ಮಾಡಿಕೊಡುತ್ತಿರುವಂತೆಯೇ ಭಾರತದ ರೈತರು ಮತ್ತು ಉದ್ಯಮಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಪೇಟಾ ಹೇಳುತ್ತದೆ,’ ಎಂದು ಉತ್ತರಿಸಿದೆ.

ಶೇಕಡಾ 70 ಕ್ಕಿಂತ ಹೆಚ್ಚು ಭೂರಹಿತರಾಗಿರುವ 10 ಕೋಟಿ ಡೈರಿ ರೈತರಿಗೆ ಪೇಟಾ ಪ್ರತಿದಿನದ ಆಹಾರ ಒದಗಿಸುವುದೇ, ಎಂದು ಕೇಳಿರುವ ಸೋಧಿ, ಲ್ಯಬ್​ಗಳಲ್ಲಿ ರಸಾಯನಿಕ ಮತ್ತು ಸಿಂಥಟಿಕ್ ವಿಟಮಿನ್​ಗಳಿಂದ ತಯಾರಾಗುವ ಫ್ಯಾಕ್ಟರಿ ಆಹಾರವನ್ನು ಎಷ್ಟು ಜನ ತಾನೆ ಕೊಂಡು ತಿನ್ನಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರವಾಗಿ ಪೇಟಾ ವೇಗನ್ (ಸಸ್ಯಾಹಾರಿ) ಹಾಲು ಮತ್ತು ಆಹಾರ ಪದಾರ್ಥಗಳು ಭಾರತದಲ್ಲಿ ಹೇರಳವಾಗಿ ಲಭ್ಯವಿರುವ ಸಸ್ಯಗಳಿಂದ ತಯಾರಿಸಲಾಗುತ್ತದೆ, ರೈತರರಿಗೆ ಇದಕ್ಕಿಂತ ಸಂತಸದ ಸಂಗತಿ ಏನಿದೆ ಅಂತ ಹೇಳಿದೆ.

ಹಾಗೆಯೇ ಪೇಟಾ, ‘ಕ್ಯಾನ್ ಇಂಡಿಯಾ ಲೀಡ್ ದಿ ವೇಗನ್ ಇಕಾನಮಿ ಅಗೇನ್ಸ್ಟ್ ಫ್ಯೂಚರ್ ಪ್ಯಾಂಡೆಮಿಕ್ಸ್ ,’ಎಂದು ಪೋರ್ಬ್ಸ್ ಬರೆದಿರುವ ಲೇಖನವನ್ನು ಶೇರ್ ಮಾಡಿ, ರಾಷ್ಟ್ರೀಯ ಮತ್ತು ಜಾಗತಿಕ ಟ್ರೆಂಡ್​ಗಳಿಗೆ ಸಂಬಂಧಿಸಿದಂತೆ ಭಾರತದ ವ್ಯಾಪಾರಗಳು ವಿಶ್ವನಾಯಕ ಅನಿಸಿಕೊಳ್ಳಲಿವೆ ಅನ್ನವುದನ್ನು ಲೇಖನ ವಿವರಿಸುತ್ತದೆ ಎದು ಹೇಳಿದೆ.

ಪೇಟಾದ ಸಲಹೆಗಳನ್ನು ಬೇರೆಯವರೂ ಪ್ರಶ್ನಿಸುತ್ತಿದ್ದಾರೆ. ಅವರಲ್ಲೊಬ್ಬರು, ‘ಪೇಟಾ ಒಂದು ಹೆಚ್ಚುವರಿ ಹಾಲಿನ ಉತ್ಪಾದನೆಯನ್ನಷ್ಟೇ ಕೇಳಬಹುದು. ಯಾವುದನ್ನು ತಿನ್ನಬೇಕು, ತಿನ್ನಬಾರದು ಅಂತ ಅವರು ಬೇರೆಯವರಿಗೆ ಫರ್ಮಾನು ಹೊರಡಿಸುವಂತಿಲ್ಲ. ಪೇಟಾ ಇಬ್ಬಗೆ ನೀತಿಯ ಒಂದು ಎನ್​ಜಿಒಗಿಂತ ದೊಡ್ಡದೆನಿಸಿಕೊಳ್ಳುತ್ತಿದೆ,’ ಎಂದಿದ್ದಾರೆ.

‘ವೇಗನ್ ಟ್ರೆಂಡ್ ಬಗ್ಗೆ ಅಮುಲ್ ಸಂಸ್ಥೆಗೆ ತಿಳಿದುಕೊಳ್ಳುವಂತೆ ಹೇಳುವುದು ಮತ್ತು ಅದರಿಂದ ಪ್ರಯೋಜನ ಪಡೆದುಕೊಳ್ಳುವಂತೆ ಹೇಳುವುದು ಫರ್ಮಾನು ಹೊರಡಿಸಿದಂತೆ ಹೇಗಾಗುತ್ತದೆ,’ ಎಂದು ಪೇಟಾ ಪ್ರಶ್ನಿಸಿದೆ ಪೇಟಾದ ಟ್ವೀಟ್​ಗಳಿಂದ ಸಿಡಿಮಮಿಡಿಗೊಂಡಿರುವ ಸ್ವದೇಶೀ ಜಾಗ್ರಣ್ ಮಂಚ್​ನ ರಾಷ್ಟ್ರೀಯ ಸಹ-ಅಯೋಜಕ ಆಶ್ವಿನಿ ಮಹಾಜನ್ ಅವರು ಪೇಟಾ ಇಂಡಿಯಾ ಕೆಲ ಆಯ್ದ ಸಂಸ್ಥೆಗಳಗೆ ಲಾಬಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

‘ನೀವು ಕೆಲ ಆಯ್ದ ಸಂಸ್ಥೆಗಳಿಗೆ ಲಾಬಿ ಮಡುತ್ತೀರಿ ಮತ್ತು ಡೈರಿ ರೈತರು ಸಾಯಲು ಬಯಸುತ್ತೀರಿ. ಈ ರೈತರಲ್ಲಿ ಬಹುಪಾಲು ಜನರಿಗೆ ಜಮೀನು ಇಲ್ಲ.ಪ್ರಾಣಿಗಳನ್ನು ಯಾಂತ್ರಿಕ ಕಸಾಯಿಖಾನೆಗಳಲ್ಲಿ ಕೊಲ್ಲುವುದನ್ನು ನಿಲ್ಲಿಸಲು ಅವರಿಗೆ ಪತ್ರಬರೆದಿದ್ದೀರಾ? ಅಥವಾ ಧರ್ಮದ ಹೆಸರಿನಲ್ಲಿ ಪ್ರಾಣಿಗಳ ಹತ್ಯೆ ಮಾಡುವುದನ್ನು ನಿಲ್ಲಿಸಿ ಅಂತ ಯಾವತ್ತಾದರೂ ಪ್ರತಿಭಟನೆ ಮಾಡಿದ್ದೀರಾ? ಜನರ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ,’ ಅಂತ ಮಹಾಜನ್ ಹೇಳಿದ್ದಾರೆ.

ಮಹಾಜನ್ ಅವರ ಟ್ವೀಟ್​ಗೆ ಉತ್ತರಿಸಿರುವ ಪೇಟಾ ಇಂಡಿಯಾ ಪ್ರಾಣಿಗಳನ್ನು ಆಹಾರಕ್ಕೆ, ಅರಿವೆಗೆ, ಪ್ರಯೋಗಾರ್ಥವಾಗಿ, ಮನರಂಜನೆ ಮತ್ತು ಬೇರೆ ರೀತಿಯಲ್ಲಿ ಕೆಟ್ಟದ್ದಾಗಿ ನಡೆಸಿಕೊಳ್ಳುವದನ್ನು ತಡೆಯಲು ಪೇಟಾ ಶ್ರಮಿಸುತ್ತಿದೆ, ಎಂದು ಹೇಳಿದೆ.

ಇದಕ್ಕೆ ಉತ್ತರವಾಗಿ ಮಹಾಜನ್ ಅವರು ಅಮುಲ್​ಗೆ ತೋರಿಸಿರುವಂತೆ ಕಸಯಿಖಾನೆಗಳಿಗೆ ಮತ್ತು ಮಾಧ್ಯಮಗಳಿಗೆ ಬರೆದಿರುವ ಪತ್ರಗಳನ್ನು ಪದರ್ಶಿಸುವಂತೆ ಪೇಟಾಗೆ ಹೇಳಿದ್ದಾರೆ.

ಅಮುಲ್ ಭಾರತದ ಡೈರಿ ಸಹಕಾರಿ ಸಂಘವಾಗಿದ್ದು ಗುಜರಾತ್​ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರಶನ್​ನಿಂದ ನಿರ್ವಹಿಸಲ್ಪಡುತ್ತದೆ.

ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಂದಿನಿ ಆಯುರ್ವೇದಿಕ್​ ಹಾಲು; ಕೆಎಂಎಫ್​ನಿಂದ ಹೊಸ ಉತ್ಪನ್ನಗಳ ಬಿಡುಗಡೆ