ಯೋಗಗುರು ಬಾಬಾ ರಾಮ್ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್ ವೈದ್ಯರ ನಿರ್ಧಾರ
ಅಲೋಪಥಿಕ್ ಬಗ್ಗೆ ಅವಹೇಳನ ಮಾಡಿದ ಬಾಬಾ ರಾಮ್ ದೇವ್ ಅವರು ಬೇಷರತ್ತು ಕ್ಷಮೆ ಕೇಳಬೇಕು ಎಂದೂ ರೆಸಿಡೆಂಟ್ ವೈದ್ಯರ ಸಂಘಗಳ ಒಕ್ಕೂಟ ಒತ್ತಾಯಿಸಿದೆ.
ಅಲೋಪಥಿ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ತಿರುಗಿಬಿದ್ದಿದೆ. ದೆಹಲಿಯ ಠಾಣೆಯೊಂದರಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಅಷ್ಟೇ ಅಲ್ಲ, ಬಾಬಾ ರಾಮ್ ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದೆ.
ಇಷ್ಟೆಲ್ಲ ಆದ ಮೇಲೆ ದೇಶಾದ್ಯಂತ ಎಲ್ಲಕಡೆ ಅಲೋಪಥಿಕ್ ವಿವಿಧ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯರು (Resident doctors) ಜೂ.1ರಂದು ಬಾಬಾ ರಾಮ್ದೇವ್ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಆ ದಿನವನ್ನು ಕರಾಳ ದಿನ ಎಂದು ಪರಿಗಣಿಸುವುದಾಗಿಯೂ ವೈದ್ಯರ ಸಂಘಟನೆಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ.
ಬಾಬಾ ರಾಮ್ ದೇವ್ ಅವರು ಬೇಷರತ್ತು ಕ್ಷಮೆ ಕೇಳಬೇಕು ಎಂದೂ ರೆಸಿಡೆಂಟ್ ವೈದ್ಯರ ಸಂಘಗಳ ಒಕ್ಕೂಟ ಒತ್ತಾಯಿಸಿದೆ. ಈ ವಿವಾದ ಶುರುವಾಗಿದ್ದು ಬಾಬಾ ರಾಮ್ದೇವ್ ಅವರ ವಿಡಿಯೋವೊಂದು ವೈರಲ್ ಆದ ಬಳಿಕ. ಅಲೋಪಥಿಕ್ ವೈದ್ಯಕೀಯ ಪದ್ಧತಿ ಒಂದು ಮೂರ್ಖ ಪದ್ಧತಿ. ಈ ಔಷಧಿ ತೆಗೆದುಕೊಂಡು ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ ಎಂದು ಬಾಬಾ ರಾಮ್ ದೇವ್ ಹೇಳಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪತಂಜಲಿ ಯೋಗ ಟ್ರಸ್ಟ್ ಸ್ಪಷ್ಟನೆ ನೀಡಿದ್ದರೂ ವೈದ್ಯರು ಅದನ್ನು ಒಪ್ಪುತ್ತಿಲ್ಲ. ಜನರಲ್ಲಿ ತಪ್ಪು ಕಲ್ಪನೆ ಬಿತ್ತುತ್ತಿದ್ದಾರೆ. ಅಲೋಪಥಿಕ್ನ್ನು ಅಗೌರವಿಸುತ್ತಿದ್ದಾರೆ ಎಂದು ಐಎಂಎ ಆರೋಪಿಸಿದೆ.
Even after raising objections to statements by Mr. Ram Kishan Yadav (#RamdevBaba), no action has been taken yet. We are hereby declaring Nationwide #BlackDayProtest on 1st June,2021 at workplace, without hampering healthcare services @ANI @ians_india @MoHFW_INDIA @drharshvardhan pic.twitter.com/nyWlguxomL
— FORDA INDIA (@FordaIndia) May 29, 2021
ಇದನ್ನೂ ಓದಿ: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್