ಗರ್ಭಿಣಿಯರಿಗೂ ಕೋವಿಡ್ ಲಸಿಕೆ ನೀಡುವಂತೆ ಆಗ್ರಹಿಸಿ, ಅರೋಗ್ಯ ಸಚಿವರಿಗೆ ಪತ್ರ ಬರೆದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ

Arun Kumar Belly

| Edited By: Rajesh Duggumane

Updated on: May 29, 2021 | 8:55 PM

ಗರ್ಭಿಣಿ ಮಹಿಳೆಗೆ ಲಸಿಕೆ ನೀಡಿದ ನಂತರ ಅವರ ಮೇಲೆ ಅದು ಮಾಡುವ ಪರಿಣಾಮಗಳನ್ನು ಮಾನಿಟರ್ ಮಾಡುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದಾದರೆ ಅವರಿಗೆ ಲಸಿಕೆ ನೀಡಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಸಹ ಹೇಳಿದೆ.

ಗರ್ಭಿಣಿಯರಿಗೂ ಕೋವಿಡ್ ಲಸಿಕೆ ನೀಡುವಂತೆ ಆಗ್ರಹಿಸಿ, ಅರೋಗ್ಯ ಸಚಿವರಿಗೆ ಪತ್ರ ಬರೆದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ
ಗರ್ಭಿಣಿ ಮಹಿಳೆ

ನವದೆಹಲಿ: ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರಿಗೆ ಪತ್ರವೊಂದನ್ನು ಬರೆದು ಗರ್ಭಿಣಿ ಮಹಿಳೆಯರಿಗೂ ಲಸಿಕಾ ಅಭಿಯಾನದ ವ್ಯಾಪ್ತಿಯೊಳಗೆ ತರಬೇಕೆಂದು ಕೋರಿದ್ದಾರೆ. ಕೊವಿಡ್-19 ಎರಡನೇ ಅಲೆ ಬಹಳ ಅಪಾಯ ಮತ್ತು ಘಾತುಕಕಾರಿ ಆಗಿರುವುದರಿಂದ ಗರ್ಭಿಣಿಯರಿಗೂ ಲಸಿಕೆ ನೀಡುವ ಅವಶ್ಯಕತೆಯಿದೆಯೆಂದು ಅವರು ಪತ್ರದಲ್ಲಿ ಹೇಳಿದ್ದಾರೆ. ‘ಕೋವಿಡ್​ ಎರಡನೇ ಅಲೆಯಲ್ಲಿ ಸಾಮಾನ್ಯ ಮಹಿಳೆಯರಿಗಿಂತ ಗರ್ಭಿಣಿಯರು ಸೋಂಕಿಗೊಳಗಾಗುವ ಅಪಾಯ ಜಾಸ್ತಿಯಿದೆ,’ ಎಂದು ಆವರು ಪತ್ರದಲ್ಲಿ ಬರೆದಿದ್ದಾರೆ.

ಗರ್ಭಿಣಿಯರ ಸ್ವಾಸ್ಥ್ಯದ ಬಗ್ಗೆ ವರದಿಯೊಂದನ್ನು ಉಲ್ಲೇಖಿಸಿರುವ ಪ್ರಿಯಾಂಕಾ ಅವರು ಗರ್ಭಿಣಿ ಮಹಿಳೆಯರು ಸೋಂಕಿಗೊಳಗಾದರೆ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸುವ ಸಾಧ್ಯತೆ ಹೆಚ್ಚಿರುತ್ತದೆ,  ಅಲ್ಲದೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಸಹ ಜರೂರಾಗಿ ಬೇಕಾಗುತ್ತದೆ. ಗರ್ಭಿಣಿಯರಲ್ಲದ ಮಹಿಳೆಯರಗಿಂತಅವರು ಸೋಂಕಿಗೆ ಬಲಿಯಾಗುವ ಸಾಧ್ಯತೆ ಶೇಕಾಡಾ 70ರಷ್ಟು ಹೆಚ್ಚಿರುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವ ಅಪಾಯ ಸಹ ಅವರಲ್ಲಿ ಜಾಸ್ತಿ ಇರುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಮ್ಮ ಪತ್ರದಲ್ಲಿ ಪ್ರಿಯಾಂಕಾ ಅವರು ಮೇ 19, 2021 ರಂದು ಕೇಂದ್ರ ಸರ್ಕಾರವು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶಾಮೀಲು ಮಾಡಲು ಅನುಮತಿ ನೀಡಿರುವುದನ್ನು ತಮ್ಮ ಪತ್ರದಲ್ಲಿ ನೆನಪಿಸಿರುವ ಪ್ರಿಯಾಂಕಾ ಅವರು, ಹೆರಿಗೆ ಮತ್ತು ಸ್ತ್ರೀರೋಗ ತಜ್ಞರ ಒಕ್ಕೂಟವು ಗರ್ಭಿಣಿಯರಿಗೂ ಲಸಿಕೆ ನೀಡಬೇಕೆಂದು ಬಲವಾಗಿ ಶಿಫಾರಸ್ಸು ಮಾಡಿದರೂ ಅವರನ್ನು ಯಾಕೆ ಆ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುತ್ತಿಲ್ಲ ಅನ್ನವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

Priyanka Chaturvedi

ಪ್ರಿಯಾಂಕಾ ಚರ್ತುವೇದಿ

‘ನಮ್ಮ ದೇಶದಲ್ಲಿ ಪ್ರತಿದಿನ 67,000 ಶಿಶುಗಳು ಜನಿಸುತ್ತವೆ ಮತ್ತು ವರ್ಷವೊಂದರಲ್ಲಿ 2.7 ಕೋಟಿ ಮಹಿಳೆಯರು ಗರ್ಭ ಧರಿಸುತ್ತಾರೆ. ಹಾಗಾಗಿ, ಈ ಸಮುದಾಯವನ್ನು ಲಸಿಕೆ ವ್ಯಾಪ್ತಿಯ ಹೊರಗಿಡುವುದು ಸರಿಯೆನಿಸದು. ಈ ಕ್ರಮ ಕೇವಲ ಅವರ ಪ್ರಾಣಕ್ಕೆ ಮಾತ್ರವಲ್ಲ ಹುಟ್ಟಲಿರುವ ಶಿಶುವಿನ ಅರೋಗ್ಯದ ಮೇಲೂ ಪರಿಣಾಮ ಬೀರುತ್ತದ,’. ಎಂದು ಪ್ರಿಯಾಂಕಾ ಪತ್ರದಲ್ಲಿ ಹೇಳಿದ್ದಾರೆ.

‘ಸರ್ಕಾರದ ಪರಿಸ್ಥಿತಿ ಮತ್ತು ಅಸಹಾಯಕತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಗರ್ಭಿಣಿ ಮಹಿಳೆಯರ ಮೇಲೆ ಕೊವಿಡ್-19 ಲಸಿಕೆ ಬೀರುವ ಪರಿಣಾಮ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಕ್ಲಿನಿಕಲ್ ಟ್ರಯಲ್​ಗಳ ಡಾಟಾ ಲಭ್ಯವಿಲ್ಲದಿರುವುದರಿಂದ ರಿಸ್ಕ್ ತೆಗೆದುಕೊಳ್ಳಲಾಗದು. mRNA ಲಸಿಕೆಗಳ ಬಗ್ಗೆ ಮಾಹಿತಿ ಲಭ್ಯವಿದೆಯಾದರೂ ಭಾರತದಲ್ಲಿ ಬೇರೆ ಬಗೆಯ ಲಸಿಕೆಗಳನ್ನು ಉಪಯೋಗಿಸಲಾಗುತ್ತಿದೆ ಎಂಬ ಅಂಶವೂ ನನಗೆ ಗೊತ್ತಿದೆ,’ ಎಂದು ಪ್ರಿಯಾಂಕಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಗರ್ಭಿಣಿ ಮಹಿಳೆಗೆ ಲಸಿಕೆ ನೀಡಿದ ನಂತರ ಅವರ ಮೇಲೆ ಅದು ಮಾಡುವ ಪರಿಣಾಮಗಳನ್ನು ಮಾನಿಟರ್ ಮಾಡುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದಾದರೆ ಅವರಿಗೆ ಲಸಿಕೆ ನೀಡಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಸಹ ಹೇಳಿದೆ.

ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್​ಗೆ ತಾನು ಮಾಡಿರುವ ಮನವಿಯ ಮೇರೆಗೆ ಅಧಿಕಾರಿಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರನ್ನು ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರ ಜೊತೆ ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಅಂತ ತಿಳಿಸಿರುವುದಾಗಿ ಪ್ರಿಯಾಂಕಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಆದರೆ ಕೇಂದ್ರದಿಂದ ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲವಾದ್ದರಿಂದ ಬಿಎಮ್​ಸಿ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಕರ್ತವ್ಯದಲ್ಲಿರುವ ಶಿಕ್ಷಕರಿಗೆ ಲಸಿಕೆ ನೀಡಿ; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಸರ್ಕಾರಕ್ಕೆ ಮನವಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada