ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಂದಿನಿ ಆಯುರ್ವೇದಿಕ್ ಹಾಲು; ಕೆಎಂಎಫ್ನಿಂದ ಹೊಸ ಉತ್ಪನ್ನಗಳ ಬಿಡುಗಡೆ
ಕೊವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಔಷಧೀಯ ಉತ್ಪನ್ನಗಳನ್ನು ಬಳಸಿ ಕೆಎಂಎಫ್ ಆಯುರ್ವೇದಿಕ್ ಹಾಲು ತಯಾರಿಸಿದೆ. ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ, ಅರಿಶಿಣದ ಅಂಶಗಳನ್ನು ಹೊಂದಿದ ಹಾಲು 200 ಮಿ.ಲೀ. ಬಾಟಲ್ಗಳಲ್ಲಿ ಲಭ್ಯವಿದೆ.
ಮೈಸೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗಿರುವುದರಿಂದ ಜನರು ಸೋಂಕಿಗೆ ತುತ್ತಾದರೆ ಭಯ ಬೀಳುವಂತಾಗಿದೆ. ಕಳೆದ ಬಾರಿ ಕೊರೊನಾ ಆರಂಭವಾಗುತ್ತಿದ್ದಂತೆಯೇ ಮನೆಮದ್ದಿನ ಮೊರೆ ಹೋಗಿದ್ದ ಜನಸಾಮಾನ್ಯರು ಕಷಾಯ, ಆಯುರ್ವೇದಿಕ್ ಉತ್ಪನ್ನಗಳನ್ನು ಬಳಸುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದರು. ಈ ಬಾರಿಯೂ ಮತ್ತೆ ಅದೇ ತೆರನಾದ ಪರಿಸ್ಥಿತಿ ಮರುಕಳಿಸಿದ್ದು ಇದೀಗ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಎಂಎಫ್ ಆಯುರ್ವೇದಿಕ್ ಹಾಲು ತಯಾರಿಸಿದೆ.
ಕೊವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಔಷಧೀಯ ಉತ್ಪನ್ನಗಳನ್ನು ಬಳಸಿ ಕೆಎಂಎಫ್ ಆಯುರ್ವೇದಿಕ್ ಹಾಲು ತಯಾರಿಸಿದೆ. ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ, ಅರಿಶಿಣದ ಅಂಶಗಳನ್ನು ಹೊಂದಿದ ಹಾಲು 200 ಮಿ.ಲೀ. ಬಾಟಲ್ಗಳಲ್ಲಿ ಲಭ್ಯವಿದೆ ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ಮೈಸೂರಿನಲ್ಲಿ ಮಾಹಿತಿ ನೀಡಿದ್ದಾರೆ. ಇದು ಆರೋಗ್ಯಕರವಾದ ಉತ್ಪನ್ನವಾಗಿರುವುದರಿಂದ ಜನರಿಗೆ ಸುಲಭವಾಗಿ ಸಿಗಬೇಕು. ಈ ಕಾರಣದಿಂದ 200 ಮಿ.ಲೀ. ಬಾಟಲ್ಗೆ 20 ರೂಪಾಯಿ ನಿಗದಿಪಡಿಸಲಾಗಿದ್ದು, ನಂದಿನಿ ಬೂತ್ಗಳಲ್ಲಿ ಆಯುರ್ವೇದಿಕ್ ಗುಣ ಹೊಂದಿದ ಹಾಲು ಸಿಗಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕು ಹರಡುವಿಕೆ ಎಲ್ಲೆಡೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಜನರ ಆರೋಗ್ಯದ ದೃಷ್ಟಿಯಿಂದ ಅರೋಗ್ಯಕರವಾದ ಉತ್ಪನ್ನಗಳನ್ನ ನೀಡುವ ಸಲುವಾಗಿ ಆಯುರ್ವೇದ ಗುಣಗಳ್ಳುಳ್ಳ ಪ್ರೊಟೀನ್ ಮಿಲ್ಕ್ ಹೊರತಂದಿದ್ದೇವೆ. ಇದು 6 ತಿಂಗಳ ತನಕ ಬಳಕೆಗೆ ಯೋಗ್ಯವಾಗಿರಲಿದೆ. ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ, ಅರಿಶಿಣದ ಮಹತ್ವ ಎಲ್ಲರಿಗೂ ಗೊತ್ತು. ಈಗ ನಂದಿನಿಯ ಹೊಸ ಉತ್ಪನ್ನದಿಂದಾಗಿ ಇದು ಇನ್ನಷ್ಟು ಸುಲಭವಾಗಿ ಜನರ ಕೈಸೇರಲಿದೆ. ಆರೋಗ್ಯಕರ ನಂದಿನಿ ಉತ್ಪನ್ನಗಳ ಬಳಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಈ ಕೆಳಗಿನ ಆಹಾರ ಪದ್ಧತಿಯನ್ನು ನಿತ್ಯವು ಅನುಸರಿಸಿ
ಕರ್ಫ್ಯೂ ಮಾರ್ಗಸೂಚಿ ಮತ್ತೆ ಪರಿಷ್ಕರಣೆ: ಕಟ್ಟಡ ಕಾಮಗಾರಿಗೆ ಕಡಿವಾಣ, ಹಾಲು ಮಾರಾಟಕ್ಕೆ ಅವಕಾಶ