ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಲು ವಿನೂತನ ಪ್ರಯೋಗ; ಠಾಣೆಯಲ್ಲೇ ಆಯುರ್ವೇದಿಕ್ ಪದ್ಧತಿಯಲ್ಲಿ ಪೊಲೀಸರಿಗೆ ಸ್ಟೀಮಿಂಗ್

ಇತ್ತಿಚೇಗೆ ಸಿಬ್ಬಂದಿ ಕರ್ತವ್ಯಕ್ಕೆ ತೆರಳಲು ಹಿಂಜರಿಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಿಬ್ಬಂದಿಗೆ ಕೊರೊನಾತಂಕ ದೂರ ಮಾಡಿ ಆತ್ಮಸ್ತೈರ್ಯ ತುಂಬುವ ನಿಟ್ಟಿನಲ್ಲಿ ಠಾಣೆಯಲ್ಲೇ ಆಯುರ್ವೇದಿಕ್​ನಿಂದ ಸ್ಟೀಮಿಂಗ್​ ವ್ಯವಸ್ಥೆ ಮಾಡಿದ್ದಾರೆ.

ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಲು ವಿನೂತನ ಪ್ರಯೋಗ; ಠಾಣೆಯಲ್ಲೇ ಆಯುರ್ವೇದಿಕ್ ಪದ್ಧತಿಯಲ್ಲಿ ಪೊಲೀಸರಿಗೆ ಸ್ಟೀಮಿಂಗ್
ಆಯುರ್ವೇದಿಕ್ ಪದ್ಧತಿಯಲ್ಲಿ ಪೊಲೀಸರಿಗೆ ಸ್ಟೀಮಿಂಗ್

ದೊಡ್ಡಬಳ್ಳಾಪುರ: ಕೊರೊನಾ ಎರಡನೇ ಅಲೆ ರಾಜ್ಯದ್ಯಾಂತ ಮುಂದುವರೆದಿದ್ದು, ಕೊರೊನಾ ವಾರಿಯರ್ಸ್​ ಅಗಿ ಕೆಲಸ ಮಾಡುತ್ತಿರುವ ಪೊಲೀಸರಿಗೂ ಕೂಡ ಕೊರೊನಾ ಭಯ ಶುರುವಾಗಿದೆ. ಹೀಗಾಗಿ ಆತಂಕದಿಂದ ಕೆಲಸಕ್ಕೆ ತೆರಳುವ ಸಿಬ್ಬಂದಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಠಾಣೆಯಲ್ಲಿ ಹೊಸ ಮಾರ್ಗವೊಂದನ್ನ ಕಂಡುಕೊಂಡಿದ್ದು, ಪೊಲೀಸರು ಹೊಸ ಹುಮ್ಮಸಿನಿಂದ ಕರ್ತವ್ಯಕ್ಕೆ ತೆರಳುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೊರೊನಾ 2 ನೇ ಅಲೆಯ ಆತಂಕ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಜತೆಗೆ ನಗರ ಠಾಣೆಯ ಮೂವರು ಸಿಬ್ಬಂದಿಗೆ ಏಪ್ರಿಲ್ 28 ರಂದು ಕೊರೊನಾ ಪಾಸಿಟಿವ್ ಬಂದಿದ್ದು, ಸಿಬ್ಬಂದಿ ಕರ್ತವ್ಯಕ್ಕೆ ತೆರಳಲು ಹಿಂಜರಿಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಿಬ್ಬಂದಿಗೆ ಕೊರೊನಾತಂಕ ದೂರ ಮಾಡಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಠಾಣೆಯಲ್ಲೇ ಆಯುರ್ವೇದಿಕ್​ನಿಂದ ಸ್ಟೀಮಿಂಗ್​ ವ್ಯವಸ್ಥೆ ಮಾಡಿದ್ದಾರೆ.

ಠಾಣೆಯ ವಿಶ್ರಾಂತಿ ಕೊಠಡಿಯಲ್ಲಿ ಒಂದು ಪ್ರೆಷರ್ ಕುಕ್ಕರ್, ಗ್ಯಾಸ್​ ಸ್ಟವ್ ಮತ್ತು ನೀರಿನ ಪೈಪ್​ಗಳಿಂದ ಕುಕ್ಕರ್​ನಲ್ಲಿ ಬೇವಿನ ಎಲೆ, ನಿಂಬೆ ಎಲೆ, ದವಣ, ಪುದೀನ ಸೇರಿದಂತೆ ಆಯುರ್ವೇದಿಕ್ ಔಷಧಿಯ ಗುಣಗಳುಳ್ಳ ಗಿಡಗಳ ಎಲೆಗಳನ್ನ ಹಾಕಿ ಬೇಯಿಸಿ ನಂತರ ಕುದಿಸಿದ ನೀರಿನಿಂದ ಬಂದ ಅಬೆಯಿಂದ ಸಿಬ್ಬಂದಿ ಸ್ಟೀಮ್ ಹಿಡಿದುಕೊಳ್ಳುತ್ತಾರೆ ಎಂದು ದೊಡ್ಡಬಳ್ಳಾಪುರ ಠಾಣೆಯ ಸಬ್ ಇನ್ಸಪೇಕ್ಟರ್ ವೆಂಕಟೇಶ್

ಈ ರೀತಿ ಔಷಧಿಯ ಗುಣಗಳುಳ್ಳ ಗಿಡಗಳ ಎಲೆಗಳಿಂದ ಬೇಯಿಸಿದ ನೀರಿನಿಂದ ಬರುವ ಸ್ಟೀಮ್ ಹಾವಿ ಹಿಡಿಯುವುದರಿಂದ ಉಸಿರಾಟದ ತೊಂದರೆ ಸೇರಿದಂತೆ ದೇಹದ ಒಳಗೆ ಹಲವು ಪ್ರಯೋಜನಗಳಾಗುತ್ತದೆ. ಅಲ್ಲದೆ ಕೊರೊನಾದಿಂದಾಗಿ ಉಸಿರಾಟದ ತೊಂದರೆಗೊಳಗಾಗುವ ಜನರಿಗೆ ಇದು ರಾಮಬಾಣವಾಗಿ ಕೆಲಸ ಮಾಡಲಿದ್ದು, ಪೊಲೀಸರಿಗೂ ಸಹಕಾರಿಯಾಗುತ್ತಿದೆ. ಅಲ್ಲದೆ ಕರ್ತವ್ಯಕ್ಕೆ ಬರುವ ಸಿಬ್ಬಂದಿಗಳು ಬೆಳಗ್ಗೆ ಮತ್ತು ಸಂಜೆ ಸ್ಟಿಮ್ ಹಿಡಿದುಕೊಂಡು ಹೋಗುತ್ತಿದ್ದು, ಕೊರೊನಾತಂಕದಿಂದ ಸ್ವಲ್ಪ ಧೈರ್ಯ ಬಂದಿದೆ ಎಂದು ಸಿಬ್ಬಂದಿ ಪುಟ್ಟ ನರಸಿಂಹ

ಒಟ್ಟಾರೆ ಸದಾ ಒತ್ತಡದ ಜೊತೆಗೆ ಕೊರೊನಾತಂಕದ ನಡುವೆ ಕೆಲಸಕ್ಕೆ ಹೋಗಲು ಅಂಜುತ್ತಿದ್ದ ಸಿಬ್ಬಂದಿಯಲ್ಲಿ ಕೊರೊನಾತಂಕ ದೂರ ಮಾಡಿ ಆತ್ಮಸ್ತೈರ್ಯ ತುಂಬುವ ನಿಟ್ಟಿನಲ್ಲಿ ದೊಡ್ಡಬಳ್ಳಾಫುರ ಪೊಲೀಸರು ಮಾಡಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಇನ್ನು ಇಂತಹ ಪ್ರಯತ್ನಗಳನ್ನ ನೀವು ಮಾಡುವಾಗ ಎಚ್ಚರಿಕೆಯಿಂದ ಮಾಡುವುದು ಉತ್ತಮ ಮತ್ತು ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ.

ಇದನ್ನೂ ಓದಿ:

ಖಾಕಿಗೆ ಶುರುವಾಗಿದೆ ಕೊವಿಡ್ ಕಂಟಕ; ಬಾಗಲಕೋಟೆ ಜಿಲ್ಲೆಯ 26 ಪೊಲೀಸರಿಗೆ ಕೊರೊನಾ ಧೃಡ

ಕೊರೊನಾಗೆ ಭಯ ಬೇಡ.. 4 ಹನಿ ನಿಂಬೆ ರಸ ತೆಗೆದುಕೊಂಡ್ರೆ ಖಂಡಿತ ಒಳ್ಳೆಯದ್ದು ಆಗುತ್ತೆ : ವಿಜಯ್ ಸಂಕೇಶ್ವರ್

(Doddaballapur police officers encourage staff by opening ayurvedic steaming service in police station)

Click on your DTH Provider to Add TV9 Kannada