ಖಾಕಿಗೆ ಶುರುವಾಗಿದೆ ಕೊವಿಡ್ ಕಂಟಕ; ಬಾಗಲಕೋಟೆ ಜಿಲ್ಲೆಯ 26 ಪೊಲೀಸರಿಗೆ ಕೊರೊನಾ ಧೃಡ
ಜಿಲ್ಲೆಯ ಒಟ್ಟು 26 ಪೊಲೀಸರಿಗೆ ಕೊರೊನಾ ದೃಢಪಟ್ಟಿದ್ದು, ಪೊಲೀಸರಲ್ಲಿ ನಡುಕ ಶುರುವಾಗಿದೆ. ಆದರೂ ಭಯದ ಮಧ್ಯೆಯೆ ಕೊವಿಡ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಪೊಲೀಸರದ್ದಾಗಿದೆ.
ಬಾಗಲಕೋಟೆ: ಕೊರೊನಾ ಆರಂಭವಾದ ದಿನದಿಂದಲೂ ಪೊಲೀಸರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಇನ್ನು ಕೊರೊನಾದ ಬಗ್ಗೆ ಜಾಗೃತಿ ನೀಡುವುದರಲ್ಲಿಯೂ ಮುಖ್ಯ ಪಾತ್ರವಹಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ಪ್ರಂಟ್ ಲೈನ್ ವಾರಿಯರ್ ಎಂದು ಕರೆಯುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಈಗ ಖಾಕಿ ಪಡೆಗೆ ಕೊವಿಡ್ನ ಭಯ ಉಂಟಾಗಿದೆ.
ಜಿಲ್ಲೆಯ ಒಟ್ಟು 26 ಪೊಲೀಸರಿಗೆ ಕೊರೊನಾ ದೃಢಪಟ್ಟಿದ್ದು, ಪೊಲೀಸರಲ್ಲಿ ನಡುಕ ಶುರುವಾಗಿದೆ. ಆದರೂ ಭಯದ ಮಧ್ಯೆಯೆ ಕೊವಿಡ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಪೊಲೀಸರದ್ದಾಗಿದೆ. 26 ಜನರಿಗೆ ಕೊವಿಡ್ ಸೊಂಕು ತಗುಲಿದ್ದು, 45 ವರ್ಷದ ಡಿಎಆರ್ ಕಾಬಲ್ ಕೋನ್ಸ್ಟೇಬಲ್ ಕೊವಿಡ್ನಿಂದ ಮೃತಪಟ್ಟಿದ್ದಾರೆ.
ಸದ್ಯ ಕಾನ್ಸ್ಟೇಬಲ್ಗಳಿಗೆ ಕರ್ತವ್ಯದ ಮೇಲೆ ಇದ್ದಾಗ ಸೊಂಕು ತಗುಲಿರುವ ಮಾಹಿತಿ ಇದೆ. ಜೊತೆಗೆ ಸೊಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಮುಂದುವರೆದಿದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ದಿನಕ್ಕೆ 200 ರಿಂದ 300 ಗಡಿ ದಾಟಿ ಮುನ್ನುಗ್ಗುತ್ತಿದೆ. ಇದರಿಂದ ಬೆಡ್ ಕೊರತೆ ಕೂಡ ಶುರುವಾಗಿದ್ದು, ಖಾಸಗಿ ವೈದ್ಯಕೀಯ ವಿದ್ಯಾಲಯದಲ್ಲಿ 500 ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ದಿನಬೆಳಗಾದರೆ ತರಕಾರಿ ಮಾರುಕಟ್ಟೆ, ಟ್ರಾಫಿಕ್ ಅಪರಾಧ ಕೃತ್ಯ ತಡೆ ಎಂದು ಜನರ ಮಧ್ಯೆ ಇರುವ ಪೊಲೀಸರಿಗೆ ಕೊರೊನಾ ವಕ್ಕರಿಸಿದ್ದು ಭಯ ಸೃಷ್ಟಿ ಮಾಡಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ಯಾವ ಯಾವ ಠಾಣೆಯಲ್ಲಿ ಎಷ್ಟು ಕಾನ್ಸ್ಟೇಬಲ್ಗಳಿಗೆ ಕೊರೊನಾ ಇದೆ ಎಂದು ಗಮನಿಸುವುದಾದರೆ, ಜಮಖಂಡಿ ಗ್ರಾಮೀಣ ಠಾಣೆಯಲ್ಲಿ 1, ಬನಹಟ್ಟಿ ಠಾಣೆಯಲ್ಲಿ 1, ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ 3, ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ 3, ಲೋಕಾಪುರ ಠಾಣೆಯಲ್ಲಿ 1, ಮುದೋಳ ಠಾಣೆಯಲ್ಲಿ 1, ಡಿಎಆರ್ 1 ಸೇರಿದಂತೆ ಇನ್ನು ವಿವಿಧ ಠಾಣೆಯಲ್ಲಿ ಸೇರಿ ಒಟ್ಟು 26 ಕಾನ್ಸ್ಟೇಬಲ್ಗಳಿಗೆ ಸೊಂಕು ತಗುಲಿದೆ.
ಇಷ್ಟೇಲ್ಲಾ ಕೊರೊನಾ ಸೋಂಕು ಹರಡುತ್ತಿದ್ದರು, ಪೊಲೀಸರಿಗೆ ಸರಿಯಾಗಿ ಕೊವಿಡ್ ಭದ್ರತಾ ಪರಿಕರಗಳಾದ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ಗಳನ್ನು ಸಮರ್ಪಕವಾಗಿ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಪ್ರಂಟ್ ಲೈನ್ ವಾರಿಯರ್ ಆಗಿದ್ದು, ಜನರ ಜೊತೆ ನೇರವಾಗಿ ಬೆರೆಯುವಂತವರು. ಅವರಿಗೆ ಸಾಕಷ್ಟು ತೊಂದರೆ ಇದ್ದು, ನೇರವಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳುವಂತಿಲ್ಲ. ಆದ್ದರಿಂದ ಮೇಲಾಧಿಕಾರಿಗಳು ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿ ಪೊಲೀಸರ ಜೀವ ಕಾಪಾಡಬೇಕಾಗಿದೆ ಎಂದು ಸ್ಥಳೀಯರಾದ ಬಸವರಾಜ ಧರ್ಮಂತಿ ಹೇಳಿದ್ದಾರೆ.
ಇದನ್ನೂ ಓದಿ:
ಟೋಕಿಯೊ ಒಲಿಂಪಿಕ್ಸ್ ಮೇಲೆ ಕೊರೊನಾ ಕರಿಛಾಯೆ! ಫ್ಲ್ಯಾಷ್‌ಲೈಟ್ ರಿಲೇ ನಿರ್ವಹಣಾ ಪೊಲೀಸ್ ಅಧಿಕಾರಿಗೆ ಕೊರೊನಾ ಧೃಡ
ಮೊನ್ನೆ ಪಾಸಿಟಿವ್, ನಿನ್ನೆ ನೆಗೆಟಿವ್ ರಿಪೋರ್ಟ್; ಒಂದೇ ದಿನದಲ್ಲಿ ಕೊರೊನಾ ಹೋಗಿ ಬೀಡ್ತಾ?
(Bagalkot 26 police staff tested positive for Covid and primary contacts panic)