ದೆಹಲಿ: ಕಳೆದ ಮೇ ತಿಂಗಳಿನಲ್ಲಿ ದೆಹಲಿಯಲ್ಲಿ ಒಟ್ಟು ಶೇ.2.9ರಷ್ಟು ಕೊವಿಡ್ ಸೋಂಕಿನ ಸಾವಿನ ಪ್ರಮಾಣ(ಸಿಎಫ್ಆರ್) ದಾಖಲಾಗಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. ಹಾಗೂ ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಬಹುತೇಕ ಎರಡು ಪಟ್ಟು ಹೆಚ್ಚು ಕೊವಿಡ್ ಪ್ರಕರಣಗಳು ದಾಖಲಾಗಿದೆ.
ಪಂಜಾಬ್ ಶೇ 2.8 ಹಾಗೂ ಉತ್ತರಾಖಂಡ ಶೇ.2.7ರಷ್ಟು ಸಾವುಗಳನ್ನು ದಾಖಲಿಸಿದೆ. ಇದೇ ವೇಳೆ ಭಾರತದಾದ್ಯಂತ 1,19,183 ಕೊವಿಡ್ ಸಾವಿನ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಕೊವಿಡ್ ಸಾಂಕ್ರಾಮಿಕ ಪ್ರಾರಂಭವಾದ ನಂತರ ಒಂದೇ ತಿಂಗಳಿನಲ್ಲಿ ದೇಶ ವರದಿ ಮಾಡಿದ ಗರಿಷ್ಠ ಸಂಖ್ಯೆ ಇದು.
ಮೇ ತಿಂಗಳಿನಲ್ಲಿ ಕೊವಿಡ್ ಸೋಂಕಿನ ಪ್ರಮಾಣವು ಅಸ್ಸಾಂನಲ್ಲಿ ಶೇ.61, ಉತ್ತರಾಖಂಡ ಶೇ.59, ಗೋವಾ ಶೇ.56, ಹಿಮಾಚಲ ಪ್ರದೇಶ ಶೇ.53 ಹಾಗೂ ಬಿಹಾರವು ಶೇ.50ರಷ್ಟು ಕೊವಿಡ್ ಸಾವಿನ ಪ್ರಕರಣವನ್ನು ದಾಖಲಿಸಿದೆ.
ಮಹಾರಾಷ್ಟ್ರ ಮೇ ತಿಂಗಳಿನಲ್ಲಿ ಅತಿ ಹೆಚ್ಚು ಸಾವಿನ ಪ್ರಮಾಣವನ್ನು ದಾಖಲಿಸಿದೆ. ದೆಹಲಿಯು ನಾಲ್ಕನೇ ಸ್ಥಾನದಲ್ಲಿದೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ಕೊವಿಡ್ನಿಂದ 13,632 ಸಾವಿನ ಪ್ರಕರಣ(ಶೇ.47) ದಾಖಲಾಗಿದೆ. ಹಾಗೆಯೇ ತಮಿಳುನಾಡಿನಲ್ಲಿ 10,186 ಸಾವಿನ ಪ್ರಕರಣ(ಶೇ.42) ದಾಖಲಾಗಿದೆ. ಒಡಿಶಾ ರಾಜ್ಯವು 3.2ಲಕ್ಷ ಕೊವಿಡ್ ಪ್ರಕರಣಗಳನ್ನು ದಾಖಲಿಸಿದ್ದು, 711 ಸಾವು ಸಂಭವಿಸಿದೆ. ಜೂನ್ ತಿಂಗಳ ಮೊದಲ ದಿನದಂದು ಭಾರತವು 1,33,212 ಹೊಸ ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ:
ಆಕ್ಸಿಜನ್ ಕಾನ್ಸನ್ಟ್ರೇಟರ್ ಆಮದು ಮೇಲೆ ಜಿಎಸ್ಟಿ ರದ್ದು; ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ