ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಪಾತ್ರವಾದ ವಿಜಯಪುರದ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪತ ಕಾಮಗಾರಿ
ಈವರೆಗೆ ಯಾವುದೇ ಕಂಪನಿ ಇಷ್ಟು ಕಡಿಮೆ ಅವಧಿಯಲ್ಲಿ ಹೆದ್ದಾರಿಗೆ ಅಂತಿಮ ಹಂತದ ಡಾಂಬರೀಕರಣ ಮಾಡಿಲ್ಲದ ಕಾರಣ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಈ ಚತುಷ್ಪತ ಕಾಮಗಾರಿ ಸೇರಿದೆ.
ವಿಜಯಪುರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50 ಕೇವಲ ಎರಡು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲ. ಇದು ದಕ್ಷಿಣ ಭಾರತ ಹಾಗೂ ಉತ್ತರ ಭಾರತವನ್ನು ಸಂಪರ್ಕಿಸುವ ಕೊಂಡಿಯಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಹೆದ್ದಾರಿ ಮೂಲಕ ಉತ್ತರ ದಕ್ಷಿಣ ಭಾರತವನ್ನು ಸಂಪರ್ಕಿಸುತ್ತವೆ. ಅತೀ ಹೆಚ್ಚು ವಾಹನಗಳು ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಸಂಚರಿಸುವುದರಿಂದ ಈ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪತ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು.
ಚತುಷ್ಪತ ಕಾಮಗಾರಿ ಹಿನ್ನೆಲೆ: ವಿಜಯಪುರದಿಂದ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 50 ನ್ನು ಚತುಷ್ಪತ ಎನ್ಎಚ್ ಆಗಿ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು. ವಿಜಯಪುರದಿಂದ ಸೊಲ್ಲಾಪುರದವರೆಗೆ ಎನ್ಎಚ್ 50 ನ್ನು ಚತುಷ್ಪತ ಮಾರ್ಗವಾಗಿ ಮಾಡಲು ಈ ಹಿಂದೆಯೂ ಗುತ್ತಿಗೆಗೆ ಆಮಂತ್ರಿಸಲಾಗಿದ್ದು, ಫೋರ್ ವೇ ನಿರ್ಮಾಣಕ್ಕಾಗಿ ಟೆಂಡರ್ ಕರೆದು ಗುತ್ತಿಗೆಯನ್ನೂ ನೀಡಲಾಗಿತ್ತು.
ಈ ನಿಟ್ಟಿನಲ್ಲಿ 2013 ರಲ್ಲಿ ಚತುಷ್ಪತ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಪೂನಾ ಮೂಲದ ಸದ್ಬವ್ ಕಂಪನಿಗೆ ನೀಡಲಾಗಿದ್ದು, ಆ ವೇಳೆ ಕಾಮಗಾರಿಗೆ ಅಪ್ರೂವಲ್ ವಿಚಾರದಲ್ಲಿ ಗೊಂದಲವಾಗಿ ಸದ್ಬವ್ ಕಂಪನಿ ಕಾಮಗಾರಿ ಆರಂಭಕ್ಕೂ ಮುನ್ನವೇ ಹಿಂದೆ ಸರಿದಿತ್ತು. ನಂತರ ಮತ್ತೇ ಬೇರೆ ಕಂಪನಿಗಳು ಚತುಷ್ಪತ ಮಾರ್ಗ ನಿರ್ಮಾಣಕ್ಕಾಗಿ ಮುಂದೆ ಬರಲಿಲ್ಲ. ಬಳಿಕ 2018 ರಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರ ಕಾಳಜಿಯಿಂದ ಚತುಷ್ಪತ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಳೆದ 2018 ರ ಫೆಬ್ರವರಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರು ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಹಾಗೂ ನೆರೆಯ ಸೊಲ್ಲಾಪುರದಲ್ಲಿ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಹೆದ್ದಾರಿ ಅಂತರ, ಕಾಮಗಾರಿ ಮೊತ್ತ ಹಾಗೂ ನಿಗದಿತ ಸಮಯ: ಕರ್ನಾಟಕದ ವಿಜಯಪುರದಿಂದ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರವರೆಗೆ ಒಟ್ಟು 110 ಕಿಲೋ ಮೀಟರ್ ಅಂತರವಿದೆ. ಈ ಹೆದ್ದಾರಿಯನ್ನು ಚತುಷ್ಪತ ಹೆದ್ದಾರಿಯನ್ನಾಗಿ ಮಾಡಲು ಮಲೇಷಿಯಾ ಮೂಲದ ಐಜಿಎಂ ಕಂಪನಿಗೆ ಈಗಾಗಲೇ ಕಾಮಗಾರಿ ಮಾಡುತ್ತಿದೆ. ಎನ್ಎಚ್ 50 ನ್ನು ಚತುಷ್ಪತ ಹೆದ್ದಾರಿಯನ್ನಾಗಿ ನಿರ್ಮಾಣ ಮಾಡಲು ಒಟ್ಟು 1,579 ಕೋಟಿ ರೂಪಾಯಿಗೆ ಐಜಿಎಂ ಕಂಪನಿಗೆ ಟೆಂಡರ್ ನೀಡಲಾಗಿದೆ. 2021 ರ ಏಪ್ರೀಲ್ಗೆ ಕಾಮಗಾರಿ ಮುಕ್ತಾಯ ಮಾಡಬೇಕು ಎಂಬ ಷರತ್ತು ಇತ್ತು. ಆದರೆ ಕೊರೊನಾದಿಂದ ಈ ಹಿಂದೆ ಕಾಮಗಾರಿ ಸ್ಥಗಿತವಾಗಿದ್ದ ಕಾರಣ ಸ್ವಲ್ಪ ಮಟ್ಟಿಗೆ ಕಾಮಗಾರಿ ಮುಕ್ತಾಯ ವಿಳಂಬವಾಗಬಹುದು. ಸದ್ಯ 2021 ರ ಕೊನೆಗೆ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆಯಿದೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಎನ್ಎಚ್ 50 ರ ಚತುಷ್ಪತ ಕಾಮಗಾರಿ: ಸದ್ಯ ಬಹುತೇಕ ಕಾಮಗಾರಿಯನ್ನು ಮುಕ್ತಾಯ ಮಾಡಿರುವ ಮಲೇಷಿಯ ಮೂಲದ ಐಬಿಎಂ ಕಂಪನಿ, ಅಂತಿಮ ಹಂತದ ಕಾಮಗಾರಿಗಳನ್ನು ಮಾಡುತ್ತಿದೆ. ಸದ್ಯ ಇದೇ ಫೋರ್ವೇ ಕಾಮಗಾರಿ ಇದೀಗಾ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಪಾತ್ರವಾಗಿದೆ. ವಿಜಯಪುರ ಸೊಲ್ಲಾಪುರ ಮಧ್ಯೆ ಚತುಷ್ಪತದ ಅತೀ ಕಡಿಮೆ ಅವಧಿಯಲ್ಲಿ ಟಾರ್ ಹಾಕುವ ಮೂಲಕ ಈ ಕಾಮಗಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಪಾತ್ರವಾಗಿದೆ.
18 ಗಂಟೆಗಳಲ್ಲಿ 26 ಕಿಲೋ ಮೀಟರ್ ರಸ್ತೆಗೆ ಅಂತಿಮ ಹಂತದ ಡಾಂಬರೀಕರಣ ಮಾಡುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಕಾಮಗಾರಿಗೆ ಒಲಿದು ಬಂದಿದೆ. ಈವರೆಗೆ ಯಾವುದೇ ಕಂಪನಿ ಇಷ್ಟು ಕಡಿಮೆ ಅವಧಿಯಲ್ಲಿ ಹೆದ್ದಾರಿಗೆ ಅಂತಿಮ ಹಂತದ ಡಾಂಬರೀಕರಣ ಮಾಡಿಲ್ಲದ ಕಾರಣ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಈ ಕಾಮಗಾರಿ ಸೇರಿದೆ. 500 ಜನ ನುರಿತ ಕಾರ್ಮಿಕರು ಈ ಸಾಧನೆ ಮಾಡಿದ್ದು, ಅತ್ಯಾಧುನಿಕ ಯಂತ್ರಗಳ ಬಳಕೆ ಮಾಡಿದ್ದಾರೆ. ನೆರೆಯ ಸೋಲ್ಲಾಪುರದಿಂದ ವಿಜಯಪುರ ಮಾರ್ಗದಲ್ಲಿ 24.54 ಕಿಲೋ ಮೀಟರ್ ಹೆದ್ದಾರಿಯಲ್ಲಿ ಅಂತಿಮ ಹಂತದ ಡಾಂಬರೀಕರಣ ಮಾಡಲಾಗಿದೆ.
ठेकेदार कंपनी के 500 कर्मचारियों ने इसके लिए मेहनत की है। मैं उन कर्मचारियों सहित राष्ट्रीय राजमार्ग प्राधिकरण के परियोजना निदेशक, अधिकारी, ठेकेदार कंपनी के प्रतिनिधि और परियोजना अधिकारियों का अभिनंदन करता हूं। pic.twitter.com/KNbDWsoCnq
— Nitin Gadkari (@nitin_gadkari) February 26, 2021
ವಿಜಯಪುರ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪತ ಕಾಮಗಾರಿಯನ್ನು ನಿಗದಿತ ಅಂತರದಲ್ಲಿ ಅಂತಿಮ ಹಂತದ ಡಾಂಬರೀಕರಣ ಮಾಡಿದ್ದು, ಈ ಕಾಮಗಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಪಾತ್ರವಾಗಿದ್ದಕ್ಕೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 500 ಜನ ತಂತ್ರಜ್ಞರು, ಕಾರ್ಮಿಕರು 18 ಗಂಟೆಗಳ ಕಾಲ ಸತತ ಪರಿಶ್ರಮ ಹಾಕಿ 26 ಕಿಲೋ ಮೀಟರ್ ಹೆದ್ದಾರಿಯಲ್ಲಿ ಡಾಂಬರೀಕರಣ ಮಾಡಿದ್ದಾರೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಪಾತ್ರವಾಗಲಿದೆ. ಇದಕ್ಕೆ ಕಾರಣೀಕರ್ತರಾದ ಕಾರ್ಮಿಕರ ಜೊತೆಗೆ ಭಾರತೀಯ ಹೆದ್ದಾರಿ ಪ್ರಾಧಿಕಾರ ನಿರ್ದೇಶಕರು, ಅಧಿಕಾರಿಗಳು, ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಹಾಗೂ ಇತರೆ ಅಧಿಕಾರಿಗಳಿಗೂ ಅಭಿನಂದನೆಗಳು ಎಂದು ಶ್ಲಾಫಿಸಿದ್ದಾರೆ.
18 ಗಂಟೆಗಳ 26 ಕಿ. ಮೀ ಡಾಂಬರೀಕರಣದ ಈ ಕಾಮಗಾರಿಯನ್ನು ಗಮನಿಸಿದಾಗ ಒಂದು ಪ್ರಶ್ನೆ ಉದ್ಭವವಾಗುವುದು ಸಹಜ. ಬೇರೆ ಕಾಮಗಾರಿಯನ್ನು ಕೂಡ ಇಷ್ಟೇ ವೇಗವಾಗಿ ನಡೆಸಬಹುದು ಎನ್ನುವುದು ಹಾಗೂ ಉಳಿದ ರಾಷ್ಟ್ರೀಯ ಹೆದ್ದಾರಿಗೂ ಇಂತಹ ಶೀಘ್ರಗತಿಯ ಯೋಜನೆ ಏಕೆ ಇಲ್ಲ ಎನ್ನವುದು. ಒಟ್ಟಾರೆ ರಸ್ತೆ ಕಾಮಗಾರಿಗಳು ಇನ್ನಾದರೂ ವೇಗ ಗತಿಯಲ್ಲಿ ಮುಗಿದು ಜನರಿಗೆ ನೆರವಾಗಲಿ ಎನ್ನುವುದೇ ನಮ್ಮ ಆಶಯ.
Published On - 11:13 am, Sat, 27 February 21