Free FASTag: ಮಾರ್ಚ್ 1ರ ತನಕ ಉಚಿತವಾಗಿ ಸಿಗಲಿದೆ ಫಾಸ್ಟ್ಯಾಗ್, ಈಗಾಗಲೇ ಫಾಸ್ಟ್ಯಾಗ್ ಕೊಂಡವರು ಖಾತೆ ಪರೀಕ್ಷಿಸಲು ಹೀಗೆ ಮಾಡಿ
FASTag: ಒಂದುವೇಳೆ ಜನರ ಫಾಸ್ಟ್ಯಾಗ್ ಖಾತೆಯಲ್ಲಿ ಹಣವಿದ್ದು, ಟೋಲ್ಪ್ಲಾಜಾಗಳ ತಾಂತ್ರಿಕ ದೋಷದ ಕಾರಣ ಸ್ಕ್ಯಾನ್ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ವಾಹನ ಸವಾರರು ಯಾವುದೇ ಹಣ ನೀಡದೇ ಮುಂದೆ ಹೋಗಲು ಅವಕಾಶ ನೀಡಲಾಗಿದೆ.
ಈಗಾಗಲೇ ದೇಶಾದ್ಯಂತ ಫಾಸ್ಟ್ಯಾಗ್ (FASTag) ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಟೋಲ್ ಗೇಟ್ಗಳಲ್ಲಿ ವಾಹನ ದಟ್ಟಣೆ ತಗ್ಗಿಸಲು ಮತ್ತು ಡಿಜಿಟಲ್ ಇಂಡಿಯಾ ಯೋಜನೆಯನ್ನು ಪ್ರೇರೇಪಿಸಲು ಫಾಸ್ಟ್ಯಾಗ್ಗೆ ಹೆಚ್ಚು ಒತ್ತು ನೀಡಲಾಗಿದ್ದು, ಸದ್ಯ ಮಾರ್ಚ್ 1ರ ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಟೋಲ್ ಪ್ಲಾಜಾಗಳಲ್ಲಿ (Toll Plaza) ಉಚಿತವಾಗಿ ಫಾಸ್ಟ್ಯಾಗ್ ವಿತರಿಸುವ ಕಾರ್ಯಕ್ಕೂ ಮುಂದಾಗಿದೆ. ಪ್ರತಿನಿತ್ಯ 60 ಲಕ್ಷಕ್ಕೂ ಹೆಚ್ಚು ವಾಹನಗಳು ಟೋಲ್ಗೇಟ್ನಲ್ಲಿ ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿಸಿದ್ದು, ಕಳೆದ ಬುಧವಾರ ಒಂದೇ ದಿನ ಸುಮಾರು ₹95ಕೋಟಿಯಷ್ಟು ಹಣ ಸಂಗ್ರಹವಾಗಿದೆ ಎಂದು NHAI ತಿಳಿಸಿದೆ. ಅದೇ ರೀತಿ ಇನ್ನೂ ಫಾಸ್ಟ್ಯಾಗ್ ಅಳವಡಿಸಿಕೊಳ್ಳದೇ ಇದ್ದರೇ ಒಂದಕ್ಕೆ ಎರಡು ಪಟ್ಟು ಹಣ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಒಂದುವೇಳೆ ಜನರ ಫಾಸ್ಟ್ಯಾಗ್ ಖಾತೆಯಲ್ಲಿ ಹಣವಿದ್ದು, ಟೋಲ್ಪ್ಲಾಜಾಗಳ ತಾಂತ್ರಿಕ ದೋಷದ ಕಾರಣ ಸ್ಕ್ಯಾನ್ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ವಾಹನ ಸವಾರರು ಯಾವುದೇ ಹಣ ನೀಡದೇ ಮುಂದೆ ಹೋಗಲು ಅವಕಾಶ ನೀಡಲಾಗಿದೆ. ಪ್ರಸ್ತುತ 10 ರಲ್ಲಿ ಸುಮಾರು 9 ಜನರು ಫಾಸ್ಟ್ಯಾಗ್ ಬಳಕೆ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ 2.5ಲಕ್ಷ ಫಾಸ್ಟ್ಯಾಗ್ ಮಾರಾಟವಾಗಿದ್ದು, ಈಗ ಅಳವಡಿಸಿಕೊಳ್ಳುತ್ತಿರುವವರಿಗಾಗಿ ದೇಶದ ಒಟ್ಟು 770 ಟೋಲ್ ಪ್ಲಾಜಾಗಳಲ್ಲಿ ಮಾರ್ಚ್ 1ರ ತನಕ ಫಾಸ್ಟ್ಯಾಗ್ ವಿತರಣೆ ನಡಯಲಿದೆ ಎಂದು NHAI ಪ್ರಕಟಣೆ ತಿಳಿಸಿದೆ.
ಫಾಸ್ಟ್ಯಾಗ್ ಬಳಕೆದಾರರು ತಮ್ಮ ಖಾತೆಯಲ್ಲಿ ಹಣವಿದೆಯೇ ಇಲ್ಲವೇ ಎಂದು ಪರಿಶೀಲಿಸಲು NHAI ಬಿಡುಗಡೆಗೊಳಿಸಿರುವ ‘My FASTag App’ ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸಿದರೆ ಹಸಿರು, ಕಿತ್ತಳೆ ಮತ್ತು ಕೆಂಪು ಈ ಮೂರು ವಿಧದ ಬಣ್ಣ ಕಾಣಿಸಿಕೊಳ್ಳಲಿದ್ದು ಇದರ ಮೂಲಕ ಖಾತೆಯ ಸ್ಥಿತಿಗತಿಯನ್ನು ಅರಿಯಬಹುದಾಗಿದೆ. ಒಂದು ವೇಳೆ ಹಸರಿರು ಬಣ್ಣವಿದ್ದರೆ ಖಾತೆಯಲ್ಲಿ ಹಣವಿದೆ ಎಂದೂ, ಕಿತ್ತಳೆ ಬಣ್ಣವಿದ್ದರೆ ತಕ್ಷಣ ರೀಚಾರ್ಜ್ ಮಾಡಿಸಬೇಕೆಂದೂ ಮತ್ತು ಕೆಂಪು ಬಣ್ಣವಿದ್ದರೆ ಖಾತೆ ಬರಿದಾಗಿದೆಯೆಂದೂ ಆ್ಯಪ್ ಸೂಚಿಸುತ್ತದೆ.
ಫಾಸ್ಟ್ಯಾಗ್ ಖಾತೆಯಲ್ಲಿ ಹಣ ಖಾಲಿಯಾಗಿದ್ದರೆ ಬಳಕೆದಾರರು ಆ್ಯಪ್ ಮೂಲಕ ತಕ್ಷಣವೇ ರೀಚಾರ್ಜ್ ಮಾಡಿಕೊಳ್ಳಬಹುದು ಅಥವಾ ಟೋಲ್ಪ್ಲಾಜಾಗಳಲ್ಲಿ ಹಣ ಪಾವತಿಸಿ ರೀಚಾರ್ಜ್ ಮಾಡಿಸಿಕೊಳ್ಳಲೂಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.
Free FASTag is available till 1st March 2021 at about 770 Toll Plazas under NETC program.
Get Your FASTag Now! #FASTag #NHAI #FASTagZarooriHai pic.twitter.com/H9EYtchyFO
— NHAI (@NHAI_Official) February 18, 2021
NHAI has successfully transitioned to 100% cashless tolling and achieved 87% FASTag penetration for collection of Fee on National Highways. Over 100 Fee plazas achieved above 90% FASTag penetration.#NHAI #FASTagZarooriHai #FASTag
— NHAI (@NHAI_Official) February 18, 2021
ಇದನ್ನೂ ಓದಿ: FASTag ಡೆಡ್ಲೈನ್ಗೆ ಕೆಲವೇ ದಿನ ಬಾಕಿ: ಹೊಸ FASTag ಖರೀದಿಸೋದು ಹೇಗೆ? ಇಲ್ಲಿದೆ ಉತ್ತರ