Galwan Clash | ಗಾಲ್ವಾನ್ ಕಣಿವೆ ಸಂಘರ್ಷದ ವಿಡಿಯೊ ಬಿಡುಗಡೆ ಮಾಡಿದ ಚೀನಾ ಮಾಧ್ಯಮ: ಶಾಂತಿಯ ಹೊಸಿಲಲ್ಲಿ ಇದೆಂಥ ನಡೆ?

ಗಾಲ್ವಾನ್ ಕಣಿವೆಯಲ್ಲಿ ಜೂನ್ 15, 16ರಂದು ಏನೆಲ್ಲಾ ನಡೆಯಿತು ಎಂಬ ಬಗ್ಗೆ ಜಗತ್ತಿನ ಎದುರು ಬಂದಿರುವ ಮೊದಲ ವಿಡಿಯೊ ತುಣುಕು ಇದು.

Galwan Clash | ಗಾಲ್ವಾನ್ ಕಣಿವೆ ಸಂಘರ್ಷದ ವಿಡಿಯೊ ಬಿಡುಗಡೆ ಮಾಡಿದ ಚೀನಾ ಮಾಧ್ಯಮ: ಶಾಂತಿಯ ಹೊಸಿಲಲ್ಲಿ ಇದೆಂಥ ನಡೆ?
ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಸಂಘರ್ಷ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: sandhya thejappa

Updated on:Feb 20, 2021 | 9:49 AM

ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರು ಕೈಕೈ ಮಿಲಾಯಿಸುವ ವಿಡಿಯೊ ತುಣುಕನ್ನು ಚೀನಾ ಸರ್ಕಾರಿ ಸ್ವಾಮ್ಯದ ಮಾಧ್ಯಮ ಶುಕ್ರವಾರ (ಫೆ.19) ರಾತ್ರಿ ಬಿಡುಗಡೆ ಮಾಡಿದೆ. ಗಾಲ್ವಾನ್ ಕಣಿವೆಯಲ್ಲಿ ಜೂನ್ 15, 16ರಂದು ಏನೆಲ್ಲಾ ನಡೆಯಿತು ಎಂಬ ಬಗ್ಗೆ ಜಗತ್ತಿನ ಎದುರು ಬಂದಿರುವ ಮೊದಲ ವಿಡಿಯೊ ತುಣುಕು ಇದು. ಮಿಲಿಟರಿ, ರಾಜತಾಂತ್ರಿಕ ಮತ್ತು ಸರ್ಕಾರಗಳ ಮಟ್ಟದಲ್ಲಿ ಹಲವು ಬಾರಿ ಮಾತುಕತೆಗಳು ನಡೆದ ನಂತರ ಎರಡೂ ದೇಶಗಳ ಸೇನೆಗಳು ಇದೀಗ ಗಡಿಯಿಂದ  ಹಿಂದೆ ಸರಿಯುತ್ತಿವೆ. ನಾಳೆ (ಫೆ.20) ಬೆಳಿಗ್ಗೆ 10 ಗಂಟೆಗೆ ಎರಡೂ ದೇಶಗಳ ಹಿರಿಯ ಸೇನಾಧಿಕಾರಿಗಳ ನಡುವೆ ಮಾತುಕತೆಗೆ ಸಮಯ ನಿಗದಿಯಾಗಿದೆ. ಸೇನಾ ಹಿಂತೆಗೆದ ಸಂದರ್ಭ ಮತ್ತು ಮಾತುಕತೆಯ ಮುನ್ನಾ ದಿನ ಬಿಡುಗಡೆಯಾದ ವಿಡಿಯೊ ಇದು ಎಂಬ ಕಾರಣಕ್ಕೆ ರಕ್ಷಣಾ ವಲಯದ ಗಮನ ಸೆಳೆದಿದೆ.

ಟ್ಯಾಂಕ್​, ಯುದ್ಧೋಪಕರಣಗಳು ಹಾಗೂ ಸೇನಾ ತುಕಡಿಗಳನ್ನು ಎರಡೂ ದೇಶಗಳು ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವಾಗ ವಿಡಿಯೊ ತುಣುಕು ಬಿಡುಗಡೆ ಮಾಡಿರುವುದು ಚೀನಾ ನಾಯಕರ ಬದಲಾದ ಮನಃಸ್ಥಿತಿಯ ದ್ಯೋತಕ ಇರಬಹುದು ಎಂದು ಕೆಲ ಹಿರಿಯ ಪತ್ರಕರ್ತರು ವಿಶ್ಲೇಷಿಸಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಮೃತಪಟ್ಟ ಯೋಧರ ನಾಲ್ವರು ಹೆಸರನ್ನು ಬಹಿರಂಗಪಡಿಸಿದ ದಿನವೇ ಚೀನಾ ಸಂಘರ್ಷದ ವಿಡಿಯೊ ತುಣುಕನ್ನೂ ಬಿಡುಗಡೆ ಮಾಡಿದೆ ಎನ್ನುವುದು ಗಮನಾರ್ಹ ಸಂಗತಿ ಎನಿಸಿದೆ.

ಅಂದು ಏನಾಗಿತ್ತು? ಕಳೆದ ವರ್ಷದ ಜೂನ್ 15, 16ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು. ಭಾರತದ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಪಾಳಯದಲ್ಲಿ 30ರಿಂದ 40 ಯೋಧರು ಸಾವನ್ನಪ್ಪಿರಬಹುದು ಎಂದು ಭಾರತ ಶಂಕಿಸಿತ್ತು. ಆದರೆ ಚೀನಾ ಸತ್ತವರ ವಿವರಗಳನ್ನು ಮುಚ್ಚಿಟ್ಟಿತ್ತು.

ಸಂಘರ್ಷದಲ್ಲಿ ಸುಮಾರು 40 ಚೀನಾ ಸೈನಿಕರು ಮೃತಪಟ್ಟಿರಬಹುದು ಎಂದು ಮೂರ್ನಾಲ್ಕು ದಿನಗಳ ಹಿಂದೆ ರಷ್ಯಾ ಪತ್ರಕರ್ತರು ಬಹಿರಂಗಪಡಿಸಿದ್ದರು. ಭಾರತೀಯ ಸೇನೆಯ ಉತ್ತರ ಕಮಾಂಡ್​ನ ಹಿರಿಯ ಅಧಿಕಾರಿಗಳೂ ಈ ವರದಿಯನ್ನು ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದ್ದರು. ರಷ್ಯಾ ಮಾಧ್ಯಮಗಳ ವರದಿಯ ಬೆನ್ನಿಗೇ ಚೀನಾ ಗಾಲ್ವಾನ್ ಸಂಘರ್ಷದ ವಿಡಿಯೊ ತುಣುಕು ಬಿಡುಗಡೆ ಮಾಡಿದೆ. ಈ ಹಿಂದೆಯೂ ಚೀನಾದ ಮಾಧ್ಯಮಗಳು ಗಾಲ್ವಾನ್ ಕಣಿವೆ ಸಂಘರ್ಷಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಪ್ರಚಾರ ಮಾಡಿದ್ದವು.

ಇದನ್ನೂ ಓದಿ: ಗಾಲ್ವಾನ್ ಸಂಘರ್ಷದಲ್ಲಿ 4 ಸೈನಿಕರ ಸಾವು, ಕೊನೆಗೂ ಒಪ್ಪಿಕೊಂಡ ಚೀನಾ ಸರ್ಕಾರ

Galwan Clash

ಗಾಲ್ವಾನ್ ಕಣಿವೆಯ ಹಿಮನದಿಯಲ್ಲಿ ಸೈನಿಕರು

ವಿಡಿಯೊದಲ್ಲಿ ಏನಿದೆ? ಚೀನಾ ಸರ್ಕಾರ ಫೆ.19ರಂದು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಕೊರೆಯುವ ಚಳಿಯಲ್ಲಿ ಎರಡೂ ಸೇನೆಗಳು ನದಿ ದಾಟುವ, ಪರಸ್ಪರ ಕೈಕೈ ಮಿಲಾಯಿಸುವ ದೃಶ್ಯಗಳಿವೆ. ಕತ್ತಲು ಆವರಿಸಿದಂತೆ ಎರಡೂ ದೇಶಗಳ ಸೈನಿಕರು ಕೈಲಿ ಉದ್ದನೆಯ ಕೋಲು, ಟಾರ್ಚ್, ಗುರಾಣಿಗಳನ್ನು ಹಿಡಿದು ಸಂಘರ್ಷಕ್ಕಿಳಿದಿದ್ದಾರೆ. ದೊಡ್ಡ ದನಿಯ ಕಿರುಚಾಟವೂ ವಿಡಿಯೊದಲ್ಲಿ ದಾಖಲಾಗಿದೆ.

ಚೀನಾ ಬಿಡುಗಡೆ ಮಾಡಿರುವ ವಿಡಿಯೊ ತುಣುಕಿನ ಚಿತ್ರಣ ಸಂಪೂರ್ಣ ಭಾರತೀಯ ಭೂಮಿಯಲ್ಲೇ ನಡೆದ ಘಟನೆಗಳನ್ನು ಒಳಗೊಂಡಿದೆ. ಚೀನಾ ತನಗೆ ಬೇಕಾದಂತೆ ವಿಡಿಯೊ ತುಣಕನ್ನು ತಿರುಚಿ-ಸೇರಿಸಿಕೊಂಡಿದೆ. ಭಾರತೀಯ ಯೋಧರನ್ನು ಕೊಲ್ಲಲೆಂದೇ ಕರೆತಂದಿದ್ದ ಚೀನಾದ ಸೇನಾ ನಾಯಿಗಳಾಗಲೀ, ಚೀನಾ ಯೋಧರು ಅಂದು ಹಿಡಿದಿದ್ದ ಮುಳ್ಳುತಂತಿ ಸುತ್ತಿದ್ದ ಉದ್ದನೇ ಬಡಿಗೆಗಳಾಗಲೀ ವಿಡಿಯೊದಲ್ಲಿ ಕಾಣಿಸದಂತೆ ಎಡಿಟ್ ಮಾಡಲಾಗಿದೆ.

ಈಗ ಏಕೆ ಬಂತು ಈ ವಿಡಿಯೊ ಮಾತುಕತೆ ಇನ್ನೇನು ಫಲಪ್ರದವಾಗುವ ಹಂತ ತಲುಪಿದಾಗ ಪ್ರತಿಬಾರಿಯೂ ಇಂಥ ವಿಡಿಯೊಗಳು ಕಾಣಿಸಿಕೊಂಡು, ಉದ್ವಿಗ್ನ ಪರಿಸ್ಥಿತಿ ಮುಂದುವರಿಕೆಯಾಗುವುದು ವಾಡಿಕೆಯೇ ಆಗಿಬಿಟ್ಟಿದೆ. ನಾಳೆ (ಫೆ.20) ಬೆಳಿಗ್ಗೆ 10 ಗಂಟೆಗೆ ಭಾರತ ಮತ್ತು ಚೀನಾದ ಉನ್ನತ ಸೇನಾಧಿಕಾರಿಗಳ ನಡುವೆ ಮಾತುಕತೆಗೆ ಸಮಯ ನಿಗದಿಯಾಗಿತ್ತು. ಎರಡೂ ದೇಶಗಳು ಗಡಿಯಲ್ಲಿ ನಿಯೋಜಿಸಿದ್ದ ಟ್ಯಾಂಕ್​ಗಳ ಸಹಿತ ಯುದ್ಧೋಪಕರಣ ಹಾಗೂ ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ಈ ಹಂತದಲ್ಲಿ ಚೀನಾ ವಿವಾದಾಸ್ಪದ ವಿಡಿಯೊ ಬಿಡುಗಡೆ ಮಾಡಿರುವುದು ಈ ಮಾತುಕತೆಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಚೀನಾ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿರುವ ವಿಡಿಯೊ ತುಣುಕು

ಇದನ್ನೂ ಓದಿ: ಆಪರೇಷನ್ ಸ್ನೋ ಲೆಪಾರ್ಡ್; ಗಾಲ್ವಾನ್ ಕಣಿವೆ ಸಂಘರ್ಷದ ವಿವರ ಮೊದಲ ಬಾರಿಗೆ ಬಹಿರಂಗ

Published On - 10:36 pm, Fri, 19 February 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ