AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕೆರೆಗೆ ಹರಿದು ಬರ್ತಿದೆ ವಿಷಕಾರಿ ಯುಜಿಡಿ ನೀರು; ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ವಿಷವಾಗ್ತಿದೆ ಗ್ರಾಮದ ಕೆರೆ

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ತ್ಯಾಜ್ಯ ನೀರು ಶುದ್ದೀಕರಣ ಮಾಡುವುದಕ್ಕೆ ಎಂದು ಲಕ್ಷ ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಿರುವ ಘಟಕ. ಆದ್ರೆ, ಅದೇ ಘಟಕ ಇದೀಗ ಕೆರೆಯ ಪಾಲಿಗೆ ವಿಷವಾಗಿ ಪರಿಣಮಿಸಿದ್ದು, ಲಕ್ಷ ಲಕ್ಷ ಹಾಕಿ ನಿರ್ಮಾಣ ಮಾಡಿದ ಘಟಕವೇ ವಿಷವಾಗಿ ಪರಿಣಮಿಸಿದೆ. ಜೊತೆಗೆ ಕೆರೆಗೆ ಬರ್ತಿರುವ ನೀರು ಕಂಡು ಗ್ರಾಮಸ್ಥರು ಸಹ ಅಧಿಕಾರಿಗಳ ವಿರುದ್ದ ಕಿಡಿಕಾಡ್ತಿದ್ದಾರೆ.

ಬೆಂಗಳೂರು: ಕೆರೆಗೆ ಹರಿದು ಬರ್ತಿದೆ ವಿಷಕಾರಿ ಯುಜಿಡಿ ನೀರು; ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ವಿಷವಾಗ್ತಿದೆ ಗ್ರಾಮದ ಕೆರೆ
ಚಿಕ್ಕಜಾಲ ಕೆರೆಗೆ ಹರಿದು ಬರ್ತಿದೆ ವಿಷಕಾರಿ ಯುಜಿಡಿ ನೀರು
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Mar 05, 2024 | 7:53 PM

Share

ಬೆಂಗಳೂರು, ಮಾ.05: ಉತ್ತರ ತಾಲೂಕಿನ ಚಿಕ್ಕಜಾಲ(Chikkajala) ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಜನ ವಸತಿ ಪ್ರದೇಶದ ಜೊತೆಗೆ ಕರ್ಮಷಿಯಲ್ ಅಂಗಡಿ, ಮುಂಗಟ್ಟುಗಳು ಸಹ ತಲೆ ಎತ್ತಿವೆ. ಹೀಗಾಗಿ ನಿತ್ಯ ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನ ಸಂಸ್ಕ್ರರಣೆ ಮಾಡಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರ ಲಕ್ಷ ಲಕ್ಷ ರೂ ಖರ್ಚು ಮಾಡಿ ಯುಜಿಡಿ ಪ್ಲಾಂಟ್ ಸಹ ನಿರ್ಮಾಣ ಮಾಡಿದೆ. ಆದ್ರೆ, ಇದೇ ಯುಜಿಡಿ ಪ್ಲಾಂಟ್ ಗ್ರಾಮದ ಕೆರೆಯ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಕಾರಣ, ಕೆರೆಗೂ ವಿಷವನ್ನ ಗ್ರಾಮ ಪಂಚಾಯತಿಯಿಂದಲೇ ಬಿಡುತ್ತಿರುವ ಆರೋಪ ಕೇಳಿ ಬಂದಿದೆ.

ದುರ್ವಾಸನೆಯ ಜೊತೆಗೆ ನೊರೆ ಕಂಡು ಗ್ರಾಮಸ್ಥರ ಆಕ್ರೋಶ

ಯುಜಿಡಿ ಪ್ಲಾಂಟ್​ನಿಂದ ಮಲ ತ್ಯಾಜ್ಯವನ್ನ ಸಮರ್ಪಕವಾಗಿ ಸಂಸ್ಕರಣ ಮಾಡದೆ ಬೇಕಾಬಿಟ್ಟಿ ಕೆರೆಗೆ ಹರಿಸುತ್ತಿದ್ದು, ಕೆರೆಯೆಲ್ಲ ಮಲೀನವಾಗಿ ದುರ್ವಾಸನೆ ಬೀರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮದ ಹೆದ್ದಾರಿಯಿಂದ ಕೂಗಳತೆ ದೂರದಲ್ಲೆ ಕೆರೆಯಿದ್ದು ಚಿಕ್ಕಜಾಲ ಕೆರೆಗೆ ಬಿಟ್ಟಿರುವ ಹೆಚ್​ಎನ್​ ವ್ಯಾಲಿ ನೀರು ಅಕ್ಕ ಪಕ್ಕದ ಗ್ರಾಮಗಳಿಗೂ ಕೆರೆಯಿಂದ ಹರಿದು ಹೋಗುತ್ತದೆ. ಹೀಗಾಗಿ ಕೆರೆಗೆ ಈಗಾಗಲೆ ಸಂಸ್ಕರಿಸಿದ ಹೆಚ್ಎನ್ ವ್ಯಾಲಿ ನೀರು ಬಿಡುತ್ತಿದ್ದು, ಇದೀಗ ಮಲತ್ಯಾಜ್ಯ ನೀರನ್ನು ಬಿಟ್ಟರೆ ಕೆರೆ ಹಾಗೂ ಕೆರೆ ಬದಿಯಲ್ಲಿರುವ ಜನ ಜಾನುವಾರುಗಳ ಸ್ಥಿತಿ ಏನಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ಮೀನುಗಳು, ಬಾತುಕೋಳಿಗಳ ಸಾವು; ವಿಷಯುಕ್ತ ಮೇವು ಸೇವಿಸಿ 60 ಕುರಿಗಳು ಮೃತ

ಇನ್ನು ಈ ಬಗ್ಗೆ ಪಂಚಾಯ್ತಿ ಪಿಡಿಒ ಮಾತನಾಡಿ, ‘ನಾವು ಯಾವುದೇ ಸಂಸ್ಕರಣೆ ಮಾಡದ ನೀರನ್ನ ಕೆರೆಗಳಿಗೆ ಬೀಡುತ್ತಿಲ್ಲ. ಎಲ್ಲವೂ ಸಂಸ್ಕರಣೆ ಮಾಡಿಯೇ ಬಿಡ್ತಿದ್ದು, ಹೆಚ್​ಎನ್ ವ್ಯಾಲಿ ನೀರಿರುವ ಎಲ್ಲಾ ಕೆರೆಯಲ್ಲೂ ವಾಸನೆ ಬರುತ್ತಿದೆ ಅಂತಿದ್ದಾರೆ. ಒಟ್ಟಾರೆ ಹಲವು ವರ್ಷಗಳಿಂದ ಜನ ಜಾನುವಾರುಗಳಿಗೆ ಆಧಾರವಾಗಿದ್ದ ಕೆರೆಗಳಿಗೆ ಇದೀಗ ಮಲ ತ್ಯಾಜ್ಯ ನೀರು ಬಿಡ್ತಿರುವುದು ಸ್ಥಳಿಯರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳು ಗಮನಹರಿಸಿ ಕೆರೆ ಸ್ವಚ್ಚಮಾಡಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ