ಬರಗಾಲ ನಟ್ಟನಡುವೆ 2.5 ಕಿಮೀ ದೂರದಿಂದ ಡ್ರೈನೇಜ್ ನೀರು ಬಳಸಿ, 30 ಲಕ್ಷ ರೂ ಮೆಣಸಿನಕಾಯಿ ಬೆಳೆದು ಸೈ ಎನ್ನಿಸಿಕೊಂಡ ರೈತ!

ಎಲ್ಲೆಡೆ ಬರಗಾಲ, ಮಳೆಯಿಲ್ಲದೇ ರೈತರು ಬೆಳೆಬಾರದೇ ಬರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಗಾರು ಹಿಂಗಾರು ಮಳೆಯಾಗದೇ ಬೆಳೆ ಬಾರದೇ ಸಂಕಷ್ಟಕ್ಕೀಡಾಗಿದ್ದಾರೆ. ಅದರೆ ಇದೇ ಬರಕ್ಕೆ ವಿಜಯಪುರ ನಗರದ ಕೃಷಿಕ ಸ್ನೇಹಿತರು ಸೆಡ್ಡು ಹೊಡೆದಿದ್ದಾರೆ. ಅವರೇ ಮಲ್ಲಿಕಾರ್ಜುನ ಗಡಗಿ ಹಾಗೂ ಮಹೇಶ ಗುಲಗಂಜಿ. ಮಳೆ ಬರಲಿ ಬಿಡಲಿ ನಾವಂತೂ ಒಳ್ಳೆ ಬೆಳೆ ಬೆಳೆಯೋಣಾ ಎಂದು ವಿಶೀಷ್ಟ ಪ್ರಯೋಗ ಮಾಡಿ ಸಕ್ಸಸ್ ಕಂಡಿದ್ದಾರೆ.

ಬರಗಾಲ ನಟ್ಟನಡುವೆ  2.5 ಕಿಮೀ ದೂರದಿಂದ ಡ್ರೈನೇಜ್ ನೀರು ಬಳಸಿ, 30 ಲಕ್ಷ ರೂ ಮೆಣಸಿನಕಾಯಿ ಬೆಳೆದು ಸೈ ಎನ್ನಿಸಿಕೊಂಡ ರೈತ!
| Updated By: ಸಾಧು ಶ್ರೀನಾಥ್​

Updated on: Feb 22, 2024 | 4:16 PM

ಎಲ್ಲೆಡೆ ಬರಗಾಲ, ಮಳೆಯಿಲ್ಲದೇ ರೈತರು ಬೆಳೆಬಾರದೇ ಬರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಗಾರು ಹಿಂಗಾರು ಮಳೆಯಾಗದೇ ಬೆಳೆ ಬಾರದೇ ಸಂಕಷ್ಟಕ್ಕೀಡಾಗಿದ್ದಾರೆ. ಅದರೆ ಇದೇ ಬರಕ್ಕೆ ವಿಜಯಪುರ ನಗರದ ಕೃಷಿಕ ಸ್ನೇಹಿತರು ಸೆಡ್ಡು ಹೊಡೆದಿದ್ದಾರೆ. ಅವರೇ ಮಲ್ಲಿಕಾರ್ಜುನ ಗಡಗಿ ಹಾಗೂ ಮಹೇಶ ಗುಲಗಂಜಿ. ಮಳೆ ಬರಲಿ ಬಿಡಲಿ ನಾವಂತೂ ಒಳ್ಳೆ ಬೆಳೆ ಬೆಳೆಯೋಣಾ ಎಂದು ವಿಶೀಷ್ಟ ಪ್ರಯೋಗ ಮಾಡಿ ಸಕ್ಸಸ್ ಕಂಡಿದ್ದಾರೆ.

ಉತ್ತಮ ಬೆಳೆಯನ್ನು ಬೆಳೆದು 30 ಲಕ್ಷ ರೂಪಾಯಿಗೂ ಆಧಿಕ ಮೌಲ್ಯದ ಮೆಣಸಿನಕಾಯಿ ಬೆಳೆದು ಮಾರಾಟ ಮಾಡಿದ್ದಾರೆ. ತಮ್ಮ ಜಮೀನಿನಿಂದ 2.5 ಕಿಲೋ ಮೀಟರ್ ದೂರದಲ್ಲಿ ಹರಿದು ಹೋಗುತ್ತಿದ್ದ ಅಂಡರ್ ಗ್ರೌಂಡ್ ಡ್ರೈನೇಜ್ ನೀರನ್ನು ಉಪಯೋಗಿಸಿಕೊಂಡು ಉತ್ತಮ ಮೆಣಸಿನಕಾಯಿ ಫಸಲು ಪಡೆದು ಲಾಭಗಳಿಸಿದ್ದಾರೆ. ಇವರು ಹೇಗೆಲ್ಲಾ ಯುಜಿಡಿ ನೀರನ್ನು ಬಳಕೆ ಮಾಡಿಕೊಂಡರು. ಎಷ್ಟೆಲ್ಲಾ ಖರ್ಚು ಮಾಡಿದರು. ಫಸಲು ಎಲ್ಲಿ ಮಾರಾಟ ಮಾಡಿ ಎಷ್ಟೆಲ್ಲಾ ಮಾಡಿಕೊಂಡರು ಎಂಬಿತ್ಯಾದಿ ವಿಚಾರಗಳ ಕುರಿತು ನಮ್ಮ ವಿಜಯಪುರ ಜಿಲ್ಲಾ ಪ್ರತಿನಿಧಿ ಅಶೋಕ ಯಡಳ್ಳಿ ನೀಡಿರೋ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us