ಹೆಣ್ಣುಮಕ್ಕಳ ಬಳಿ ದರ್ಶನ್ ಕ್ಷಮೆ ಕೇಳಬೇಕು; ಗೌಡತಿಯರ ಸೇನೆ ಆಗ್ರಹ

ಹೆಣ್ಣುಮಕ್ಕಳ ಬಳಿ ದರ್ಶನ್ ಕ್ಷಮೆ ಕೇಳಬೇಕು; ಗೌಡತಿಯರ ಸೇನೆ ಆಗ್ರಹ

ರಾಜೇಶ್ ದುಗ್ಗುಮನೆ
|

Updated on: Feb 22, 2024 | 3:17 PM

‘ಬೆಳ್ಳಿ ಪರ್ವ ಡಿ-25’ ಸಮಾರಂಭ ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆಯಿತು. ಈ ವೇಳೆ  ದರ್ಶನ್ ಅವರು ವೇದಿಕೆ ಮೇಲೆ ಮಾತನಾಡಿದ್ದರು. ದರ್ಶನ್​ ಅವರು ಮಹಿಳೆಯರ ಬಗ್ಗೆ ಆಡಿದ ಮಾತುಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಗೌಡತಿಯರ ಸೇನೆ ದರ್ಶನ್ ಮಾತಿಗೆ ವಿರೋಧ ವ್ಯಕ್ತಪಡಿಸಿದೆ. ದರ್ಶನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

‘ಬೆಳ್ಳಿ ಪರ್ವ ಡಿ-25’ ಸಮಾರಂಭ ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಈ ವೇಳೆ  ನಟ ದರ್ಶನ್ (Darshan) ಅವರು ವೇದಿಕೆ ಮೇಲೆ ಮಾತನಾಡಿದ್ದರು. ದರ್ಶನ್​ ಅವರು ಮಹಿಳೆಯರ ಬಗ್ಗೆ ಆಡಿದ ಮಾತುಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಗೌಡತಿಯರ ಸೇನೆ ದರ್ಶನ್ ಮಾತಿಗೆ ವಿರೋಧ ವ್ಯಕ್ತಪಡಿಸಿದೆ. ‘ದರ್ಶನ್ ಅವರು ಈ ರೀತಿ ಉಡಾಫೆ ಆಗಿ ಮಾತನಾಡುವ ಅವಶ್ಯಕತೆ ಏನಿತ್ತು? ಈ ರೀತಿ ಮಾತುಗಳನ್ನು ನಾವು ಏಕೆ ಕೇಳಬೇಕು. ಈ ರೀತಿಯ ಮಾತುಗಳನ್ನು ದರ್ಶನ್ ಏಕೆ ಹೇಳಬೇಕಿತ್ತು ಎಂಬ ಬಗ್ಗೆ ವಿವರಣೆ ನೀಡಬೇಕು. ಅಲ್ಲದೆ ಹೆಣ್ಣುಮಕ್ಕಳ ಬಳಿ ಕ್ಷಮೆ ಕೇಳಬೇಕು’ ಎಂದು ಗೌಡತಿಯರ ಸೇನೆ ಆಗ್ರಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ