ಕಚ್ಚಾ ಬನಿಯನ್ ಗ್ಯಾಂಗ್ ಬಳಿಕ ಉಡುಪಿಯಲ್ಲಿ ಬುರ್ಖಾ ಗ್ಯಾಂಗ್; ಉಡುಪಿ ಪೊಲೀಸರಿಗೆ ಶುರುವಾಗಿದೆ ಹೊಸ ಟೆನ್ಶನ್

ಕಚ್ಚಾ ಬನಿಯನ್ ಗ್ಯಾಂಗ್ ಬಳಿಕ ಉಡುಪಿಯಲ್ಲಿ ಬುರ್ಖಾ ಗ್ಯಾಂಗ್; ಉಡುಪಿ ಪೊಲೀಸರಿಗೆ ಶುರುವಾಗಿದೆ ಹೊಸ ಟೆನ್ಶನ್

ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 22, 2024 | 3:37 PM

ಕಳೆದ ತಿಂಗಳು ಕಚ್ಚಾ ಬನಿಯನ್ ಗ್ಯಾಂಗ್ ಉಡುಪಿ ಜಿಲ್ಲೆಯಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಬುರ್ಖಾ ಗ್ಯಾಂಗ್ ರಸ್ತೆಗೆ ಇಳಿದಿದ್ದು, ಉಡುಪಿ ಪೊಲೀಸರಿಗೆ ಹೊಸ ಟೆನ್ಶನ್ ಶುರುವಾಗಿದೆ. ಮೂರು ಮಂದಿಯಂತೆ ತಂಡವಾಗಿ ಬರುವ ಇವರು, ಮೊದಲಿಗೆ ಅಸಲಿಗೆ ಚಿನ್ನವಿಟ್ಟು. ಬಳಿಕ ಅದನ್ನು ತಗೆದುಕೊಂಡು ನಕಲಿ ಚಿನ್ನವನ್ನಿಟ್ಟು ಮಾರಾಟ ಮಾಡುತ್ತಾರೆ.

ಉಡುಪಿ, ಫೆ.22: ಕಚ್ಚಾ ಬನಿಯನ್ ಗ್ಯಾಂಗ್ ಬಳಿಕ ಉಡುಪಿ(Udupi)ಯಲ್ಲಿ ಬುರ್ಖಾ ಗ್ಯಾಂಗ್ ರಸ್ತೆಗೆ ಇಳಿದಿದ್ದು, ಉಡುಪಿ ಪೊಲೀಸರಿಗೆ ಹೊಸ ಟೆನ್ಶನ್ ಶುರುವಾಗಿದೆ. ಅಸಲಿ ಜೊತೆ ನಕಲಿ ಚಿನ್ನ ನೀಡಿ ಯಾಮಾರಿಸುವ ಈ ಗ್ಯಾಂಗ್, ಜಿಲ್ಲೆಯ ಹಲವು ಜ್ಯುವೆಲ್ಲರಿಗಳಿಗೆ ಭೇಟಿ ನೀಡುತ್ತದೆ. ಮೂರು ಮಂದಿಯಂತೆ ತಂಡವಾಗಿ ಬರುವ ಇವರು, ಮೊದಲಿಗೆ ಅಸಲಿಗೆ ಚಿನ್ನ ನೀಡುತ್ತಾರೆ. ಬಳಿಕ ಅಸಲಿ ಜೊತೆ ನಕಲಿ ಚಿನ್ನವನ್ನಿಟ್ಟು ಮಾರಾಟ ಮಾಡುತ್ತಾರೆ. ಈ ಹಿನ್ನಲೆ ವಂಚನೆಗೊಳಗಾದ ಉಡುಪಿಯ ಜ್ಯುವೆಲ್ಲರ್ಸ್ ಮಾಲೀಕ ದೂರು ನೀಡಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ