ಬೆಂಗಳೂರು: ಕೊಳಚೆ ನೀರು ತುಂಬಿ ಪಾಚಿಗಟ್ಟಿದ ಕೈಕೊಂಡರಹಳ್ಳಿ ಕೆರೆಗೆ ಬೇಕಿದೆ ಕಾಯಕಲ್ಪ

Kaikondrahalli Lake: ಬೆಂಗಳೂರಿನ ಕೈಕೊಂಡರಹಳ್ಳಿ ಕೆರೆಯ ನೀರು 2018 ರಿಂದ ಪ್ರತಿ ಬೇಸಿಗೆಯಲ್ಲಿ ಪಾಚಿಗಟ್ಟುತ್ತಿದ್ದು, ಕೆಟ್ಟ ವಾಸನೆಯಿಂದ ಕೂಡಿದೆ. ಆದರೆ ಇದಕ್ಕೆ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.

ಬೆಂಗಳೂರು: ಕೊಳಚೆ ನೀರು ತುಂಬಿ ಪಾಚಿಗಟ್ಟಿದ ಕೈಕೊಂಡರಹಳ್ಳಿ ಕೆರೆಗೆ ಬೇಕಿದೆ ಕಾಯಕಲ್ಪ
ಕೈಕೊಂಡರಹಳ್ಳಿ ಕೆರೆ (ಕೃಪೆ: ಎಂಎಪಿಎಸ್ಎಎಸ್)
Follow us
ರಶ್ಮಿ ಕಲ್ಲಕಟ್ಟ
|

Updated on:Apr 11, 2021 | 12:56 PM

ಬೆಂಗಳೂರು: ಕಳೆದ ಮೂರುವರ್ಷಗಳಿಂದ ಬೆಂಗಳೂರಿನ ಕೈಕೊಂಡರಹಳ್ಳಿ ಕೆರೆಯಲ್ಲಿ ಆಲ್ಗೆ (ಪಾಚಿ) ಹೆಚ್ಚುತ್ತಿದ್ದು, ಈ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. 2016 ರಿಂದ ಖಾಸಗಿ ಭೂಮಾಲೀಕರು ಕೊಳಚೆನೀರನ್ನು ಪೂರ್ವ ದಿಕ್ಕಿನಿಂದ ಕರೆಗೆ ಚೆಲ್ಲುತ್ತಿದ್ದು ಇದರಿಂದ ಪಾಚಿ ತುಂಬಿಕೊಂಡು, ಕೆರೆಯ ನೀರು ಮಲಿನವಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಆದಾಗ್ಯೂ ಅಧಿಕಾರಿಗಳು ಇಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ನಿವಾಸಿಗಳ ದೂರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆರೆಗಳ ಇಲಾಖೆ ಮತ್ತು ನಾಗರಿಕ ಸಂಘಟನೆಯಾದ ಎಂಎಪಿಎಸ್ಎಎಸ್ (ಮಹಾದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ದಿ ಸಮಿತಿ) ಈ ಕೆರೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಕೆರೆ ನೀರಿನಲ್ಲಿ ಪಾಚಿಗಟ್ಟಿ ನೀರು ಹಸಿರು ಬಣ್ಣಕ್ಕೆ ತಿರುಗಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಸಂಘಟನೆ ಇದು ಬಗೆಹರಿಯದ ಸಮಸ್ಯೆ ಎಂದು ಹೇಳಿದೆ. ಈ  ಕೆರೆಯ ನೀರು, 2018 ರಿಂದ ಪ್ರತಿ ಬೇಸಿಗೆಯಲ್ಲಿ ಪಾಚಿಗಟ್ಟುತ್ತಿದ್ದು, ಕೆಟ್ಟ ವಾಸನೆಯಿಂದ ಕೂಡಿದೆ. ಬಯೋ ಎನ್ ಜೈಮ್ ಗಳನ್ನು ಸಿಂಪಡಿಸಿ ಮತ್ತು ಬೊಕಾಶಿ ಚೆಂಡುಗಳನ್ನು ಎಸೆಯುವ ಮೂಲಕ (ಮರದ ಪುಡಿ, ಕೆಂಪು ಮಣ್ಣು, ಹಸುವಿನ ಸಗಣಿ, ಬೆಲ್ಲದಿಂದ ತಯಾರಿಸಲಾಗುತ್ತದೆ) ಪಾಚಿಗಟ್ಟುವುದನ್ನು ತಡೆಯಬೇಕಿತ್ತು. ಮಳೆ ಬರುವವರೆಗೂ ಇವು ಕೇವಲ ತಾತ್ಕಾಲಿಕ ಪರಿಹಾರಗಳಾಗಿವೆ. ಒಳ ಚರಂಡಿಗಳನ್ನು ಸ್ವಚ್ಛಗೊಳಿಸಿ ಕೆರೆಯನ್ನು ಪಾಚಿ ಮುಕ್ತಗೊಳಿಸಿ ಎಂದು ಎಂಎಪಿಎಸ್ಎಎಸ್ ಹೇಳಿದೆ. ಭೂಮಾಲೀಕರು ಇಲ್ಲಿ ಜೋಪಡಿಗಳನ್ನು ನಿರ್ಮಿಸಿದ್ದು ತ್ಯಾಜ್ಯ ವಸ್ತುಗಳನ್ನು ಸುರಿಯುವುದು, ಸುಡುವ ಕಾರ್ಯಗಳು ಇಲ್ಲಿ ಮಾಡಲಾಗುತ್ತಿದ್ದೆ. ಇದರಿಂದಾಗಿ ಅಲ್ಲಿನ ಗೋಡೆ ಸುಟ್ಟಿರುವುದು ಕಾಣಬಹುದು ಎಂದು ಎಂಎಪಿಎಸ್ಎಎಸ್ ಆರೋಪಿಸಿದೆ.

ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ಹತ್ತಿರದ ಪ್ರದೇಶಗಳ ಕೊಳಚೆ ನೀರು ಈ ಕೆರೆಗೆ ಹರಿಯಬಿಡಲಾಗುತ್ತದೆ. ಶುದ್ಧ ನೀರು ಹರಿಯಬೇಕಾದ ಜಾಗದಲ್ಲಿ ಕೊಳಚೆ ನೀರು ರಾಜಕಾಲುವೆ ಮೂಲಕ ಹರಿದು ಬರುತ್ತಿದೆ. ನಾವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಇತರ ಸಂಸ್ಥೆಗಳೊಂದಿಗೆ ಸಂವಹನ ನಡೆಸಲು ಬಿಬಿಎಂಪಿ ಕೆರೆಗಳ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಆದಾಗ್ಯೂ, ಅಗತ್ಯವಾದ ಅನುಮೋದನೆಗಳ ಹೊರತಾಗಿಯೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚಟುವಟಿಕೆಗಳು ವಿಳಂಬವಾಗುತ್ತಿದೆ. ಕೆರೆಯಿಂದ ಒಳಚರಂಡಿ ನೀರನ್ನು ಬೇರೆಡೆಗೆ ತಿರುಗಿಸಬಲ್ಲ ಭೂಮಿ ಅಡಿಯಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ನಿರ್ಮಿಸಿ ಇದಕ್ಕೆ ಪರಿಹಾರ ನೀಡುವಂತೆ ನಾವು ಬಿಬಿಎಂಪಿ ಕೆರೆಗಳ ತಂಡಕ್ಕೆ ಒತ್ತಡ ಹೇರುತ್ತಿದ್ದೇವೆ ಎಂದು ಎಂಎಪಿಎಸ್ಎಎಸ್  ಸದಸ್ಯರು ಹೇಳಿದ್ದಾರೆ.

ನಾವು ಮಾರ್ಚ್ 2019ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ಮೊರೆ ಹೋಗಿದ್ದು, ಕೆರೆಯ ಬಗ್ಗೆ ವರದಿ ಸಲ್ಲಿಸುವಂತೆ ಆಡಳಿತ ಸಂಸ್ಥೆಗಳಿಗೆ ಆದೇಶಿಸಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಎರಡು ವರದಿಗಳು ಸಲ್ಲಿಕೆಯಾಗಿತ್ತು ಅವುಗಳೆರಡೂ ವ್ಯತ್ಯಸ್ತವಾಗಿದೆ. ಎರಡು ಸಂಸ್ಥೆಗಳ ನಡುವಿನ ಸಂವಹನ ಕೊರತೆಯೂ ಸಮಸ್ಯೆಗೆ ಕಾರಣವಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದಾದ್ಯಂತ ಏಕ ರೂಪದ ಒಳಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವುದು ಕೆರೆಗಳ ಮಾಲಿನ್ಯಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ 2021 ಏಪ್ರಿಲ್ ತಿಂಗಳಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಎಂಎಪಿಎಸ್ಎಸ್ ಸದಸ್ಯರೊಬ್ಬರು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

kaikondarahalli Lake

ಕೈಕೊಂಡರಹಳ್ಳಿ ಕೆರೆ

ಈ ಬಗ್ಗೆ ದಿ ನ್ಯೂಸ್ ಮಿನಿಟ್ ತಂಡವು ಬಿಬಿಎಂಪಿ ಕೆರೆಗಳ ಪ್ರಧಾನ ಎಂಜಿನಿಯರ್ ಮೋಹನ್ ಕೃಷ್ಣ ಬಿ.ಟಿ ಅವರನ್ನು ಸಂಪರ್ಕಿಸಿ, ಕೆರೆಯ ನೀರಿಗೆ ಕೊಳಚೆ ನೀರು ಹರಿಯಬಿಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ ಅವರು ಆ ಆರೋಪವನ್ನು ನಿರಾಕರಿಸಿದ್ದಾರೆ. ಗುರುವಾರ ಕೆರೆಗೆ ಭೇಟಿ ನೀಡಿದ್ದು, ಕೆರೆ ನೀರಿನಲ್ಲಿ ಕೊಳಚೆ ನೀರು ಮಿಶ್ರಿತವಾಗಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ, ನಾವು ಕೊಳಚೆ ನೀರು ಕೆರೆಗೆ ಚೆಲ್ಲದಂತೆ ನಿರ್ಮಿಸಿದ ತಿರುವು (ನೀರ ಹರಿವಿನ ತಿರುವು) ಸಾಕಾಗುವುದಿಲ್ಲ. ಹಾಗಾಗಿ ಅದನ್ನು ತಡೆಯಲು ದೊಡ್ಡ ತಿರುವು ರಚಿಸಲು ಇಲಾಖೆ ಕಾರ್ಯ ನಿರತವಾಗಿದೆ. ಪಾಚಿ ಸಮಸ್ಯೆ ನಿವಾರಿಸಲು ಎನ್​ಜೈಮ್ ಇರಿಸಿದ್ದೇವೆ. ಏತನ್ಮಧ್ಯೆ, ಹತ್ತಿರದ ಒಳಚರಂಡಿ ಸಂಸ್ಕರಣಾ ಘಟಕವನ್ನು ರಚಿಸಲು ಯೋಜನೆಗಳು ನಡೆಯುತ್ತಿವೆ. ನೀರಿನ ಹರಿವು ತಿರುಗಿಸುವ ಮತ್ತು ಎಸ್​ಟಿಪಿ (ಕೊಳಚೆ ನೀರು ಸಂಸ್ಕರಣೆ ಘಟಕ) ಕಾರ್ಯವು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು ವರ್ಷದೊಳಗೆ ಪೂರ್ತಿಗೊಳ್ಳಲಿದೆ ಎಂದು ಮೋಹನ್ ಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿಕೆರೆ ಬಚಾವೋ; ಧಾರವಾಡದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಹೋರಾಟ

ಇದನ್ನು ತಿಂದ್ರೆ ಅಪಾಯ ಗ್ಯಾರಂಟಿ.. ಬೆಂಗಳೂರು ಕೆರೆ ನೀರು ಬಳಕೆ ಮಾಡಿದ ಬೆಳೆಯಲ್ಲಿ ಭಾರ ಲೋಹದ ಅಂಶ ಪತ್ತೆ

Published On - 12:54 pm, Sun, 11 April 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ