ಯುಗಾದಿಗೆ ಕನಿಷ್ಠ ಉಡದಾರವಾದರೂ ಹೊಸದಿರಬೇಕು; ದಾವಣಗೆರೆಯಲ್ಲಿ ಉಡದಾರ ಉತ್ಸವಕ್ಕೆ ಸಕಲ ಸಿದ್ಧತೆ

ಯುಗಾದಿಗೆ ಕನಿಷ್ಠ ಉಡದಾರವಾದರೂ ಹೊಸದಿರಬೇಕು; ದಾವಣಗೆರೆಯಲ್ಲಿ ಉಡದಾರ ಉತ್ಸವಕ್ಕೆ ಸಕಲ ಸಿದ್ಧತೆ
ಭರ್ಜರಿ ಉಡದಾರ ಮಾರಾಟ

ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಪ್ರತಿಯೊಬ್ಬರು ಯುಗಾದಿಗೆ ಉಡದಾರ ಬದಲಿಸಬೇಕು ಎಂಬ ಅಲಿಖಿತ ನಿಯಮವಿದೆ. ಇನ್ನೇನು ಎರಡು ದಿನಗಳಲ್ಲಿ ಯುಗಾದಿ ಹಬ್ಬ ಬರುತ್ತಿದೆ. ವಿಶೇಷವಾಗಿ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೀಗಾಗಿ ಇಂತಹ ಹಬ್ಬದ ಬಗ್ಗೆ ಬಹುತೇಕರಿಗೆ ಆಸಕ್ತಿ ಜಾಸ್ತಿ.

preethi shettigar

| Edited By: shruti hegde

Apr 11, 2021 | 2:49 PM


ದಾವಣಗೆರೆ: ಯುಗಾದಿ ಎಂದರೆ ಹಿಂದು ಧರ್ಮದ ಪ್ರಕಾರ ಇದು ನಿಜವಾದ ಹೊಸ ವರ್ಷದ ಆರಂಭ. ಹೊಸ ವರ್ಷದ ಸ್ವಾಗತಕ್ಕೆ ಕೆಲವೊಂದು ಸಂಪ್ರದಾಯಗಳು ಜೀವಂತವಾಗಿವೆ. ಇದಕ್ಕೆ ಅನುಗುಣ ಎಂಬಂತೆ ಯುಗಾದಿಯ ಚಂದ್ರನ ದರ್ಶನಕ್ಕೂ ಮುನ್ನ ಶಾವಿಗೆ ಊಟ ಕಡ್ಡಾಯ ಎಂಬ ಮಾತಿದೆ. ಅದು ಯಾವ ಊರು ಮತ್ತು ಕುಟುಂಬಗಳ ಆಚರಣೆ ಗೆ ಸೀಮಿತವಾಗಿರುತ್ತದೆ. ಅದೆ ರೀತಿ ದಾವಣಗೆರೆಯಲ್ಲಿ ಯುಗಾಗಿ ಹಬ್ಬದ ಸಂದರ್ಭದಲ್ಲಿ ಉಡದಾರ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಪ್ರತಿಯೊಬ್ಬರು ಯುಗಾದಿಗೆ ಉಡದಾರ ಬದಲಿಸಬೇಕು ಎಂಬ ಅಲಿಖಿತ ನಿಯಮವಿದೆ. ಇನ್ನೇನು ಎರಡು ದಿನಗಳಲ್ಲಿ ಯುಗಾದಿ ಹಬ್ಬ ಬರುತ್ತಿದೆ. ವಿಶೇಷವಾಗಿ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೀಗಾಗಿ ಇಂತಹ ಹಬ್ಬದ ಬಗ್ಗೆ ಬಹುತೇಕರಿಗೆ ಆಸಕ್ತಿ ಜಾಸ್ತಿ. ಮೇಲಾಗಿ ಸಂಭ್ರಮವು ಹೆಚ್ಚು. ಈಗಾಗಲೇ ದಾವಣಗೆರೆ ಮಾರುಕಟ್ಟೆ ತುಂಬಾ ಬೇವಿನ ಸೊಪ್ಪು, ಬಾವಿನ ತಳಿರು ಸೇರಿದಂತೆ ಹಬ್ಬದ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ.

ವಿಶೇಷವಾಗಿ ದಾವಣಗೆರೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಉಡದಾರ (ಪುರುಷರು ಸೊಂಟಕ್ಕೆ ಕಟ್ಟುವ ದಾರ) ಮಾರಾಟವೇ ಜಾಸ್ತಿ ಕಾಣುತ್ತಿದೆ. ಬೇರೆ ಯಾವ ಜಿಲ್ಲೆಗಳಲ್ಲಿ ಕಾಣದಂತಹ ಸಂಪ್ರದಾಯವೊಂದು ಇಲ್ಲಿ ಇದೆ. ಪ್ರತಿಯೊಬ್ಬರು ಯುಗಾದಿಗೆ ಹೊಸ ಉಡದಾರ ಧರಿಸಲೇ ಬೇಕು ಎಂಬುವುದು ಶತಮಾನಗಳ ಸಂಪ್ರದಾಯ. ಇದಕ್ಕೆ ಕಾರಣ ಎಷ್ಟೇ ಬಡತನವಿದ್ದರು ಹೊಸ ವರ್ಷದ ಆರಂಭವಾದ ಯುಗಾದಿಗೆ ಉಡದಾರವನ್ನಾದರೂ ಹೊಸತು ಖರೀದಿಸಲೇಬೇಕು ಎಂಬುದು ಪದ್ಧತಿ. ಹೀಗಾಗಿ ಉಡದಾರ ಖರೀದಿಗೆ ಜನ ಮುಗಿ ಬೀಳುತ್ತಾರೆ.

udadara fest

ಉಡದಾರ ಖರೀದಿಸುತ್ತಿರುವ ಗ್ರಾಹಕರು

ವಿಶೇಷವಾಗಿ ಯುಗಾದಿ ಚಂದ್ರದರ್ಶನ ಪವಿತ್ರವಾದದ್ದು. ಚಂದ್ರದರ್ಶನ ಆದ ಬಳಿಕ ಪ್ರತಿಯೊಬ್ಬರು ಗುರು ಹಿರಿಯರಿಗೆ ನಮಸ್ಕರಿಸಿ ಆರ್ಶೀವಾದ ಪಡೆಯುತ್ತಾರೆ. ಚಂದ್ರದರ್ಶನಕ್ಕೂ ಮೊದಲು ಶಾವಿಗೆ ಪಾಯಿಸಾ ಊಟ ಮಾಡುವುದು ಈ ಭಾಗದಲ್ಲಿ ಬೆಳೆದು ಬಂದ ಸಂಪ್ರದಾಯ. ಇನ್ನು ದಾವಣಗೆರೆಯಲ್ಲಿ ಶಾವಿಗೆ ಉದ್ಯಮವಾಗಿ ಬೆಳೆದಿದೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಶಾವಿಗೆ ಮಾಡಿ ಯುಗಾದಿಗೆ ಮಾರಾಟ ಮಾಡುತ್ತಾರೆ.

ಹೀಗೆ ಹತ್ತು ಹಲವಾರು ಸಂಪ್ರದಾಯಗಳು ಯುಗಾದಿ ಹಬ್ಬದ ಸುತ್ತ ಇವೆ. ಇವುಗಳಲ್ಲಿ ಉಡದಾರ ಬದಲಿಸುವುದು ಶಾವಿ ಊಟ. ಚಂದ್ರದರ್ಶನದ ಬಳಿಕ ಹೊಳಿಗೆ ಊಟ ಮಾಡುವುದು ಹೆಚ್ಚು ಪ್ರಸಿದ್ಧಿ. ಇನ್ನೇನು ಯುಗಾದಿ ಹಬ್ಬ ಬರುತ್ತಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಉಡದಾರ ಮಾರಾಟ ಭರ್ಜರಿಯಾಗಿಯೇ ನಡೆದಿದೆ.

ಇದನ್ನೂ ಓದಿ: 

Gold Rate Today: ವೀಕೆಂಡ್​ನಲ್ಲಿ ಶಾಪಿಂಗ್ ಮಾಡಿ.. ಯುಗಾದಿ ಹಬ್ಬ ಜೋರಾಗಿರಲಿ.. ಚಿನ್ನ ಕೊಳ್ಳುವುದಾದರೆ ಹೀಗಿದೆ ದರ ವಿವರ!

Petrol Price Today: ಯುಗಾದಿ ಹಬ್ಬದ ಪ್ರಯಾಣ ಸುಖಕರವಾಗಿರಲಿ.. ಪ್ರಯಾಣಕ್ಕೂ ಮುನ್ನ ಪೆಟ್ರೋಲ್, ಡೀಸೆಲ್ ದರ ಗಮನಿಸಿ!

(Davangere people celebrating Ugadi with a culture of wear udadara)

Follow us on

Related Stories

Most Read Stories

Click on your DTH Provider to Add TV9 Kannada