AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2021: ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಶುಭ ಮುಹೂರ್ತ ಮತ್ತು ಆಚರಿಸುವ ವಿಧಾನ ಇಲ್ಲಿದೆ

Ugadi Festival: ಯುಗಾದಿ ಹಬ್ಬ ಇನ್ನೇನು ಎದುರಿಗಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ.

Ugadi 2021: ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಶುಭ ಮುಹೂರ್ತ ಮತ್ತು ಆಚರಿಸುವ ವಿಧಾನ ಇಲ್ಲಿದೆ
ಯುಗಾದಿ ಹಬ್ಬ
Follow us
shruti hegde
| Updated By: Digi Tech Desk

Updated on:Apr 11, 2021 | 4:32 PM

ಯುಗಾದಿ 2021: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.. ಯುಗಾದಿ ಆಚರಣೆ ಇನ್ನೇನು ಎದುರಿಗಿದೆ. ಮುಂಬರುವ ಮಂಗಳವಾರ ಏಪ್ರಿಲ್​ 13ನೇ ತಾರೀಕಿನಂದು ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.  ತಮಿಳುನಾಡು ಮತ್ತು ಕೇರಳದಲ್ಲಿ ವಿಷು ಎಂದು ಈ ಹಬ್ಬವನ್ನು ಕರೆಯಲಾಗುತ್ತದೆ. ಇನ್ನು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದು ಕರೆಯುತ್ತಾರೆ.

ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದರೆ, ಪಾಡ್ಯಮಿ ದಿವಸ ಗುಡಿ ಏರಿಸುವುದು ಎಂದರ್ಥ. ಅಂದರೆ, ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವ ಸಂಪ್ರದಾಯವಿದೆ. ಇದು ಹೊಸ ವರ್ಷದ ಆಗಮಕ್ಕೆ ಸಂಕೇತವಾಗಿದೆ. ಜೊತೆಗೆ ಮನೆಯಲ್ಲಿ ವೀಶೆಷ ಪೂಜೆಯನ್ನು ಕೈಗೊಳ್ಳಲಾಗುತ್ತದೆ.

ಯುಗಾದಿ ಹಬ್ಬ ಅಂದಾಕ್ಷಣ ಹೊಸ ವರ್ಷ ಪ್ರಾರಂಭದ ದಿನ. ಹೊಸ ವರ್ಷದ ಜೊತೆಗೆ ಹೊಸ ಭರವಸೆ ಮತ್ತು ಹೊಸ ಚೈತನ್ಯ ತುಂಬುವ ದಿನ. ಯುಗ, ಅಂದರೆ ವಯಸ್ಸು ಮತ್ತು ಆದಿ ಅಂದರೆ ಪ್ರಾರಂಭ ಎಂಬುದಾಗಿ ‘ಯುಗಾದಿ’ ಎಂಬ ಹೆಸರು ಬಂದಿದೆ.

2021ರ ಯುಗಾದಿ ಆಚರಣೆ

ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಮೊದಲ ದಿನವೂ ಹೌದು. ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭದಲ್ಲಿ ಯುಗಾದಿ ಹಬ್ಬ ಬರುವುದು.

ಚಂದ್ರಮನ ಯುಗಾದಿ 2021 ದಿನಾಂಕ ಮತ್ತು ಮುಹೂರ್ತ ಸಮಯ:

ಯುಗಾದಿ ಹಬ್ಬ 2021ರ ಏಪ್ರಿಲ್ 12ನೇ ತಾರೀಕು ಪ್ರತಿಪದ ತಿಥಿಯಂದು ಬೆಳಿಗ್ಗೆ 7:59ಕ್ಕೆ ಆರಂಭಗೊಳ್ಳುತ್ತದೆ. ಮರುದಿನ ಏಪ್ರಿಲ್​ 13ನೇ ತಾರೀಕು ಬೆಳಿಗ್ಗೆ 10.16ರ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ.

ಹಬ್ಬಕ್ಕೆ ಸಿದ್ಧತೆಗಳು ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿಯನ್ನಿಟ್ಟು ಹಬ್ಬಕ್ಕೆ ಬೆಳಿಗ್ಗೆಯಿಂದಲೇ ಮೆರಗುಗೊಳಿಸಲಾಗುತ್ತದೆ. ಯುಗಾದಿಯಂದು ಹೊಸ ಬಟ್ಟೆ, ಹೊಸ ವಿಚಾರ ಭರವಸೆಯತ್ತ ಇಡೀ ವರ್ಷ ಸಾಗಲಿ ಎಂಬ ನಂಬಿಕೆಯ ಜೊತೆ ಮುನ್ನಡೆಯವ ಹೆಜ್ಜೆಯಾಗಿರುತ್ತದೆ.

ಯುಗಾದಿ ಹಬ್ಬದ ಆಚರಣೆ ಹೇಗೆ? ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಸಡಗರ, ಸಂಭ್ರಮ. ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ರಂಗಿನ ರಂಗೋಲಿ ಬಿಡಿಸುತ್ತಾರೆ. ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆಯ ಎದುರಿನ ಬಾಗಿಲು, ದೇವಾಲಯದ ಬಾಗಿಲಿಗೆ ಮಾವಿನ ಎಲೆಗಳ ಹಾರ (ತಳಿರು ತೋರಣ) ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಯುಗಾದಿ ದಿನದಂದು ಸಂತೋಷದ ಪ್ರತೀಕವಾಗಿ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾಗಿ ಬೇವನ್ನು ಬೆರೆಸಿ ಪ್ರಸಾದವಾಗಿ ಸೇವಿಸುತ್ತಾರೆ.

ಇದನ್ನೂ ಓದಿ: ಯುಗಾದಿ ಆಚರಣೆ; ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಮಲೆ ಮಹದೇಶ್ವರ ದೇವಾಲಯದಲ್ಲಿ ಭಕ್ತರಿಗೆ ನಿರ್ಬಂಧ

ಯುಗಾದಿಗೆ ದರ್ಶನ್​ ಹೊಸ ಸಿನಿಮಾ ಘೋಷಣೆ; ಡೈರೆಕ್ಟರ್​ ಯಾರು?

Published On - 1:52 pm, Sun, 11 April 21

VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ