Gold Rate Today: ವೀಕೆಂಡ್​ನಲ್ಲಿ ಶಾಪಿಂಗ್ ಮಾಡಿ.. ಯುಗಾದಿ ಹಬ್ಬ ಜೋರಾಗಿರಲಿ.. ಚಿನ್ನ ಕೊಳ್ಳುವುದಾದರೆ ಹೀಗಿದೆ ದರ ವಿವರ!

Gold Silver Price in Bangalore: ಯುಗಾದಿ ಹಬ್ಬ ಎದುರಿಗಿದೆ. ಭಾನವಾರ ಆಗಿರುವುದರಿಂದ ಚಿನ್ನ ಕೊಳ್ಳಲು ಬಿಡುವಿರುತ್ತದೆ. ಚಿನ್ನಾಭರಣ ಕೊಳ್ಳುವತತ ಮನಸ್ಸಿದ್ದರೆ ಇಂದು ದರ ಎಷ್ಟಿದೆ ಎಂಬುದರ ಮಾಗಿತಿ ಇಲ್ಲಿದೆ.

Gold Rate Today: ವೀಕೆಂಡ್​ನಲ್ಲಿ ಶಾಪಿಂಗ್ ಮಾಡಿ.. ಯುಗಾದಿ ಹಬ್ಬ ಜೋರಾಗಿರಲಿ.. ಚಿನ್ನ ಕೊಳ್ಳುವುದಾದರೆ ಹೀಗಿದೆ ದರ ವಿವರ!
ಚಿನ್ನಾಭರಣ
Follow us
shruti hegde
|

Updated on: Apr 11, 2021 | 8:56 AM

ಬೆಂಗಳೂರು: ವೀಂಕೆಡ್ ಯಾವಾಗ ಬರುತ್ತಪ್ಪಾ ಅಂತ ಕಾಯ್ತಾ ಇರ್ತಿವಿ. ಕೆಲಸಕ್ಕೆ ರಜಾ. ವಾರಪೂರ್ತಿ ದುಡಿದು, ಸಿಗುವ ಒಂದು ದಿನದಲ್ಲಿ ನಮಗಿಷ್ಟದ ಆಭರಣವನ್ನು ಆರಿಸಿ ಕೊಳ್ಳಲು ಸಮಯ ಸಿಗುವುದೇ ಈ ದಿನ. ಸ್ನೇಹಿತರು, ನೆಂಟರು, ಪಕ್ಕದ ಮನೆಯವರು ಜೊತೆ ಅಂಗಡಿಗೆ ಹೋಗಿ ನಮಗಿಷ್ಟದ ಚಿನ್ನದ ಡಿಸೈನ್ ಆರಿಸಿ ಕೊಳ್ಳಲು ಪ್ಲ್ಯಾನ್ ಮಾಡಿರ್ತೀವಿ. ಚಿನ್ನ ಕೊಳ್ಳಲು ಇಂದೇ ಹೊರಟಿದ್ದೀರಿ ಎಂದಾದರೆ ಬೆಲೆ ಎಷ್ಟಿರಬಹುದು ಎಂಬ ಯೋಚನೆ ಸಹಜ ಅಲ್ಲವೇ? ಇಲ್ಲಿದೆ ಬೆಂಗಳೂರಿನಲ್ಲಿನ ಇಂದಿನ ಚಿನ್ನದ ದರ ಮಾಹಿತಿ.

ಅದರಲ್ಲೂ ಯುಗದಿ ಹಬ್ಬ ಎದುರಿಗಿದೆ. ಹಬ್ಬದಲ್ಲಿ ಚಿನ್ನ ಕೊಳ್ಳುವುದು ಸಾಮಾನ್ಯ. ಈ ಬಾರಿ ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳ ಬೇಕು ಎಂದು ಅದೆಷ್ಟೋ ವರ್ಷಗಳಿಂದ ಹಣ ಕೂಡಿಡುತ್ತಾ ಬಂದಿರುತ್ತೀರಿ. ಹಬ್ಬದ ಆಚರಣೆಯಲ್ಲಿ ಮಹಿಳೆಯರೆಲ್ಲಾ ಸುಂದರ ಸೀರೆ ಉಟ್ಟು, ಸರಿಹೊಂದುವ ಚಿನ್ನದ ನೆಕ್​ಲೆಸ್, ಕೈತುಂಬ ಬಳೆಗಳು, ಉಂಗುರಗಳನ್ನು ತೊಟ್ಟರೆ ಹಬ್ಬಕ್ಕೆ ಇನ್ನಷ್ಟು ಮೆರುಗು. ಜತೆಗೆ ಪುರುಷರೆಲ್ಲಾ ಹೊಸ ಉಡುಪಿನ ಜೊತೆ ಉಂಗುರ, ಚಿನ್ನದ ಸರ ತೊಟ್ಟು ಸಿದ್ಧರಾದರೆ ಹಬ್ಬಕ್ಕೊಂದು ಕಳೆ. ಅದರಲ್ಲೂ ಇಂದು ಭಾನುವಾರ ಆಗಿರುವುದರಿಂದ ಚಿನ್ನ ಕೊಳ್ಳಲು ಬಿಡುವಿರುತ್ತದೆ. ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳುವತ್ತ ಮನಸ್ಸಿದ್ದರೆ, ಚಿನ್ನದ ದರ ಎಷ್ಟಿದೆ ಎಂಬುದನ್ನು ಒಮ್ಮೆ ಗಮನಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ‌ ಚಿನ್ನದ ದರ 43,400 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,350 ರೂಪಾಯಿ ಇದೆ. 1ಕೆಜಿ ಬೆಳ್ಳಿ ದರ 67,000 ರೂಪಾಯಿ ಇದೆ. ಅಷ್ಟೊಂದು ದುಬಾರಿ ವಸ್ತುವನ್ನು ಕೊಳ್ಳಲು ಹೊರಟಾಗ ಗಡಿಬಿಡಿಯಲ್ಲಿ ಯಾವುದೋ ಒಂದು ಸರವನ್ನೋ, ಅಥವಾ ಬಳೆಯನ್ನೋ ಕೊಂಡೊಯ್ಯಲು ಸಾಧ್ಯವಿಲ್ಲ. ಚಿನ್ನ ಕೊಳ್ಳಲೆಂದೇ ದುಡಿದ ದುಡ್ಡನ್ನೆಲ್ಲಾ ಜೋಪಾನ ಮಾಡಿ ಇಟ್ಟಿರುತ್ತೇವೆ. ಸುಸಂದರ್ಭ ಬಂದಾಗ ಹಣವನ್ನು ಚಿನ್ನಕ್ಕಾಗಿ ವ್ಯಯಿಸುತ್ತೇವೆ. ಹಾಗಿದ್ದಾಗ ಚಿನ್ನ ಕೊಳ್ಳಲು ಸಮಯ ಬೇಕಲ್ವೇ? ಇಂದು ಭಾನುವಾರ ಕೆಲಸಕ್ಕೆ ರಜಾ. ನಮಗಿಷ್ಟ ಹೊಸ ತೆರೆನಾದ ಡಿಸೈನ್​ನೊಂದಿಗೆ ಚಿನ್ನ ಕೊಳ್ಳಲು ಇಂದು ಸುಸಮಯ. ಹಾಗಿದ್ದಾಗ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಲೇ ಬೇಕು.

22ಕ್ಯಾರೆಟ್ ಚಿನ್ನದ ದರ ದೈನಂದಿನ ದರ ಪರಿಶೀಲನೆಯಲ್ಲಿ ದರ ಗಮನಿಸಿದಾಗ 1ಗ್ರಾಂ ಚಿನ್ನದ ದರ ನಿನ್ನೆ 4,350 ರೂಪಾಯಿ ಇದ್ದು, ಇಂದು 4,340 ರೂಪಾಯಿ ಇದೆ. 8 ಗ್ರಾಂ ಚಿನ್ನದ ದರ ನಿನ್ನೆ 34,800 ರೂಪಾಯಿ ಇದ್ದು, ಇಂದು ದರ 34,720 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 43,500 ರೂಪಾಯಿ ಇದ್ದು, ಇಂದು ದರ 43,400 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,35,000 ರೈಪಾಯಿಗೆ ಮಾರಾಟವಾಗಿದ್ದು ಇಂದು 1,000 ರೂಪಾಯಿ ಇಳಿಕೆಯ ನಂತರ 4,34,000 ರೂಪಾಯಿ ಆಗಿದೆ.

24 ಕ್ಯಾರೆಟ್ ಚಿನ್ನದ ದರ 1 ಗ್ರಾಂ ಚಿನ್ನದ ದರ ನಿನ್ನೆ 4,746 ರೂಪಾಯಿಗೆ ಮಾರಾಟವಾಗಿತ್ತು, ಇಂದು ದರ 4,735 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 37,968 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 37,880 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 47,460 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 47,350 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ದರ ಕೊಂಚ ಇಳಿಕೆಯತ್ತ ಸಾಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,74,600 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,73,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿ ಇಳಿಕೆ ಕಂಡು ಬಂದಿದೆ.

ಬೆಳ್ಳಿ ದರ ಮಾಹಿತಿ ಬೆಳ್ಳಿ ದರದಲ್ಲೂ ಇಂದು ಕೊಂಚ ಇಳಿಕೆ ಕಂಡು ಬಂದಿದ್ದು, 1 ಗ್ರಾಂ ಬೆಳ್ಳಿ ದರ ನಿನ್ನೆ 67.50 ರೂಪಾಯಿ ಮಾರಾಟವಾಗಿದ್ದು ಇಂದು ದರ 67 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 540 ರೂಪಾಯಿ ಆಗಿದ್ದು, ಇಂದು 536 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 675 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 670 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,750 ರೂಪಾಯಿಗೆ ಮಾರಾಟವಾಗಿದ್ದು ಇಂದು 6,700 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 1ಕೆಜಿ ಬೆಳ್ಳಿ ದರ ನಿನ್ನೆ 67,500 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 67,000 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ಕೊಳ್ಳುವ ಆಸೆ ಇದ್ದರೆ.. ದರ ಹೀಗಿದೆ ಗಮನಿಸಿ!

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?