ಕೊರೊನಾ ಸೋಂಕಿತನಿಗೆ ಬೆಡ್ ನೀಡದಿದ್ದಕ್ಕೆ ಮಹಾವೀರ್ ಜೈನ್ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ
ಕೊರೊನಾ ಸೋಂಕಿತನಿಗೆ ಬೆಡ್ ನೀಡದೆ ಮಹಾವೀರ್ ಜೈನ್ ಆಸ್ಪತ್ರೆ ದರ್ಪ ಮೆರೆದಿದೆ. ಹಾಗೂ ಕೊರೊನಾ ಸೋಂಕಿತ ಆಸ್ಪತ್ರೆಗೆ ಹೋಗಿದ್ದ ವೇಳೆ ಮಹಾವೀರ್ ಜೈನ್ ಆಸ್ಪತ್ರೆ ಈತನಿಗೆ ಬೆಡ್ ನೀಡಲು ನಿರಾಕರಿಸಿದೆ. ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸೋಂಕಿತ ಮೃತಪಟ್ಟಿದ್ದಾನೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಒಂದು ದಿನದ ಅಂತರದಲ್ಲಿ 2 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿವೆ. ಇಂತಹ ಸಮಯದಲ್ಲಿ ಕೊರೊನಾ ಸೋಂಕಿತನಿಗೆ ಬೆಡ್ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಕೊರೊನಾ ಸೋಂಕಿತನಿಗೆ ಬೆಡ್ ನೀಡದೆ ಮಹಾವೀರ್ ಜೈನ್ ಆಸ್ಪತ್ರೆ ದರ್ಪ ಮೆರೆದಿದೆ. ಹಾಗೂ ಕೊರೊನಾ ಸೋಂಕಿತ ಆಸ್ಪತ್ರೆಗೆ ಹೋಗಿದ್ದ ವೇಳೆ ಮಹಾವೀರ್ ಜೈನ್ ಆಸ್ಪತ್ರೆ ಈತನಿಗೆ ಬೆಡ್ ನೀಡಲು ನಿರಾಕರಿಸಿದೆ. ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸೋಂಕಿತ ಮೃತಪಟ್ಟಿದ್ದಾನೆ. ಹೀಗಾಗಿ 24 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಬಿಬಿಎಂಪಿ CHOಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ. NDMAಯಡಿ ಆಸ್ಪತ್ರೆ ವಿರುದ್ಧ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ಬನಶಂಕರಿ ಮೂಲದ ತಬರೇಜ್ ಎಂಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿದ್ದರು. ಆದರೆ ಬೆಡ್ ಬ್ಲಾಕ್ ಆದರು ಕೂಡಾ ರೋಗಿಯನ್ನ ಅಡ್ಮಿಟ್ ಮಾಡಿಕೊಳ್ಳದೆ, ಸೂಕ್ತ ಚಿಕಿತ್ಸೆ ನೀಡದ ಕಾರಣ ಸೋಂಕಿತ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಾಳೆಯೊಳಗೆ ಸೂಕ್ತ ಕಾರಣ ನೀಡದೆ ಹೋದರೆ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.
ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ ಈ ಹಿಂದೆಯೂ ಹಾಗೂ ಕೊರೊನಾದ ಮೊದಲ ಅಲೆಯ ಸಂದರ್ಭಗಳಲ್ಲೂ ನಡೆದಿದೆ. ಆದರೆ ಆಸ್ಪತ್ರೆ ಸಿಬ್ಬಂದಿಗೆ ಈ ರೀತಿ ಕೊರೊನಾ ಸೋಂಕಿತರನ್ನು ನಿರ್ಲಕ್ಷಿಸಿದರೆ ಅವರಿಗೆ ಚಿಕಿತ್ಸೆ ನೀಡುವುದಾದರೂ ಯಾರು. ಸಮಾಜದ ಸೇವೆಗೆಂದೇ ನಿಂತವರು ಹಣಕ್ಕಾಗಿ ಸೇವೆ ಮರೆತರೆ ಹೇಗೆ ಎಂಬುವುದೇ ಪ್ರಶ್ನೆಯಾಗಿದೆ. ಸರ್ಕಾರ ಇದೇ ರೀತಿ ಸೋಂಕಿತರಿಗೆ ಚಿಕಿತ್ಸೆ ನೀಡದೆ ದರ್ಪ ಮೆರೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕ ಅಣ್ಣಾಮಲೈಗೆ ಕೊರೊನಾ ಸೋಂಕು
(Show Cause Notice Against Mahaveer Jain Hospital in Bengaluru)
Published On - 12:00 pm, Sun, 11 April 21