ಇಂದಿನಿಂದ ಕರ್ಫ್ಯೂ: ರಸ್ತೆಗಳು ನಿರ್ಜನ, ಬೇಕಾಬಿಟ್ಟಿ ದಾರಿಗಿಳಿದವರಿಗೆ ಪೋಲಿಸರಿಂದ ಕ್ಲಾಸ್
ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ 20 ನೇ ತಾರೀಕಿನವರೆಗೆ ಹೇರಿರುವ ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಪೊಲೀಸರು ಪ್ರಯಾಸಪಡುತ್ತಿದ್ದಾರೆ. ಸರ್ಕಾರದ ಘೋಷಣೆ ಹೊರತಾಗಿಯೂ ಕೆಲ ಅವಿವೇಕಿ ಜನ ಹೊರಗಡೆ ತಿರುಗುವ ಪ್ರಯತ್ನ ಮಾಡುತ್ತಿರುವುದು ಬೆಂಗಳೂರು ಮತ್ತು ಇತರ ಕಡೆಗಳಿಂದ ವರದಿಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಮುಖ ರಸ್ತೆಗಳನ್ನು ಪೊಲೀಸರ ಮುಚ್ಚಿ ಗಸ್ತು ತಿರುಗುತ್ತಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಕ್ಯಾಬ್ಗಾಗಿ ಕಾಯುತ್ತಿರುವ ಜನ ಕಂಡುಬಂದಿದ್ದಾರೆ. ಬುಕ್ ಮಾಡಿದರೂ ಕ್ಯಾಬ್ಗಳು ಸಕಾಲಕ್ಕೆ ಬಾರದೆ ಪರದಾಡುತ್ತಿದ್ದಾರೆ. ಬೇಗ ಜಾಗ ಖಾಲಿ ಮಾಡುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ. […]
ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ 20 ನೇ ತಾರೀಕಿನವರೆಗೆ ಹೇರಿರುವ ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಪೊಲೀಸರು ಪ್ರಯಾಸಪಡುತ್ತಿದ್ದಾರೆ. ಸರ್ಕಾರದ ಘೋಷಣೆ ಹೊರತಾಗಿಯೂ ಕೆಲ ಅವಿವೇಕಿ ಜನ ಹೊರಗಡೆ ತಿರುಗುವ ಪ್ರಯತ್ನ ಮಾಡುತ್ತಿರುವುದು ಬೆಂಗಳೂರು ಮತ್ತು ಇತರ ಕಡೆಗಳಿಂದ ವರದಿಯಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪ್ರಮುಖ ರಸ್ತೆಗಳನ್ನು ಪೊಲೀಸರ ಮುಚ್ಚಿ ಗಸ್ತು ತಿರುಗುತ್ತಿದ್ದಾರೆ. ಎಂ.ಜಿ.ರಸ್ತೆಯಲ್ಲಿ ಕ್ಯಾಬ್ಗಾಗಿ ಕಾಯುತ್ತಿರುವ ಜನ ಕಂಡುಬಂದಿದ್ದಾರೆ. ಬುಕ್ ಮಾಡಿದರೂ ಕ್ಯಾಬ್ಗಳು ಸಕಾಲಕ್ಕೆ ಬಾರದೆ ಪರದಾಡುತ್ತಿದ್ದಾರೆ. ಬೇಗ ಜಾಗ ಖಾಲಿ ಮಾಡುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು ನಗರದ ಎಲ್ಲಾ 47 ಫ್ಲೈಓವರ್‌ಗಳನ್ನು ಬಂದ್ ಮಾಡಲಾಗಿದೆ.
ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಆರೋಗ್ಯ ಸಚಿವ ಸುಧಾಕರ್ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ವಿಚಾರಿಸಿದರು. ನಗರದ ಇತರ ಪ್ರಮುಖ ಆಸ್ಪತ್ರೆಗಳಿಗೂ ಅವರ ಬೇಟಿ ನೀಡಲಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ಕರ್ಫ್ಯೂ ಅನ್ನು ಜನ ಸಂಪೂರ್ಣವಾಗ ನಿರ್ಲಕ್ಷಿಸಿರುವಂತೆ ಕಾಣುತ್ತಿದೆ. ರಾತ್ರಿ 10 ಗಂಟೆ ಬಳಿಕವೂ ವಾಹನ ಸಂಚಾರ ಕಂಡುಬರುತ್ತಿದೆ. ಕಾರು, ಬೈಕ್‌ಗಳು ಎಂದಿನಂತೆ ಓಡಾಟ ಮಾಡುತ್ತಿವೆ ಮತ್ತು ಕೆಲ ಅಂಗಡಿಗಳು ಮುಚ್ಚಿರಲಿಲ್ಲ. ಯಲಹಂಕದ ಓಲ್ಡ್ ಬಸ್ ನಿಲ್ದಾಣದಲ್ಲಿ ಬಾರ್‌ಗಳು ತೆರೆದಿವೆ. ಯಲಹಂಕ ಓಲ್ಡ್ ಟೌನ್ ಠಾಣೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ನೋಡಿಯೂ ನೋಡದಂತೆ ಸುಮ್ಮನಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ನೈಟ್ ಕರ್ಪ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯಲಹಂಕದಿಂದ ಹೈದರಾಬಾಸ್ ಗೆ ತೆರಳಲು ಪ್ರಯಾಣಿಕರು ಹೆದ್ದಾರಿಗೆ ಆಗಮಿಸಿದ್ದು 12 ಗಂಟೆಯ ನಂತರದ ಬಸ್ಸಿಗೂ 9 ಗಂಟೆಯಿಂದಲೇ ಕಾದು ಕುಳಿತಿದ್ದಾರೆ.
ಫ್ಲೈ ಓವರ್ ಮುಚ್ಚಲ್ಪಪಟ್ಟಿರುವುದರಿಂದ ಬೆಂಗಳೂರಿನ 8ನೇ ಮೈಲಿ ನವಯುಗ ಟೋಲ್ ಬಳಿ ರಸ್ತೆಯಲ್ಲಿ ಅಂಬ್ಯುಲೆನ್ಸ್ ಒಂದು ಸಿಕ್ಕಿ ಹಾಕಿಕೊಂಡು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಪ್ರದೇಶ ಸಂಪೂರ್ಣವಾಗಿ ನಿರ್ಜನವಾಗಿದೆ. ಬಾರ್, ವೈನ್ ಶಾಪ್, ಅಂಗಡಿ ಮುಂಗಟ್ಟು ಎಲ್ಲವನ್ನು ಮುಚ್ಚಲಾಗಿದೆ. ಚೆಕ್ಪೋಸ್ಟ್ ಸ್ಥಾಪಿಸಿರುವ ಪೊಲೀಸರು ವಾಹನಗಳ ತಪಾಸಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: Bengaluru Night Curfew LIVE: ನೈಟ್ ಕರ್ಫ್ಯೂ ಶುರು: ಬೆಂಗಳೂರಿನ ರಸ್ತೆಗಳು ಬಂದ್; ರಸ್ತೆ ರಸ್ತೆಗಳಲ್ಲೂ ಖಾಕಿ ಕಾವಲು
ಇದನ್ನೂ ಓದಿ: Corona Curfew Guidelines: ನಾಳೆಯಿಂದಲೇ ನೈಟ್ ಕರ್ಫ್ಯೂ; ಏನಿರುತ್ತೆ ಏನಿರಲ್ಲ?
Published On - 11:31 pm, Sat, 10 April 21