Corona Curfew Guidelines: ನಾಳೆಯಿಂದಲೇ ನೈಟ್ ಕರ್ಫ್ಯೂ; ಏನಿರುತ್ತೆ ಏನಿರಲ್ಲ?
Karnataka Night Curfew Guidelines: ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು / ಕಂಪನಿಗಳು ಅಥವಾ ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ಇದೆ.
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಕೊರೊನಾ (ನೈಟ್) ಕರ್ಫ್ಯೂ ಮಾರ್ಗಸೂಚಿ ಪ್ರಕಟಗೊಳಿಸಿದೆ. ನಾಳೆ ರಾತ್ರಿಯಿಂದ (ಏಪ್ರಿಲ್ 10) ಏಪ್ರಿಲ್ 20ರವರೆಗೆ ಕೊರೊನಾ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ರಾತ್ರಿ 10ರ ನಂತರ ದಿನಸಿ ಅಂಗಡಿ, ದರ್ಶಿನಿ, ಬಾರ್, ಪಬ್, ಹೋಟೆಲ್ಗಳು ಸಂಪೂರ್ಣ ಬಂದ್ ಆಗಲಿವೆ. ರಾತ್ರಿ ಸಮಯದಲ್ಲಿ ವೈದ್ಯಕೀಯ, ತುರ್ತು ಚಟುವಟಿಕೆ ಸೇವೆ, ಹೋಂ ಡೆಲಿವರಿ, ಇ-ಕಾಮರ್ಸ್ ವಾಹನಗಳಿಗೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ತೋರಿಸಿ ಪ್ರಯಾಣಿಸಬಹುದು. ಅತ್ಯವಶ್ಯ ಸೇವೆ ವಾಹನ, ಸರಕು- ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ರಾತ್ರಿ ವೇಳೆ ರೈಲು ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರಾತ್ರಿಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು / ಕಂಪನಿಗಳು ಅಥವಾ ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ಇದೆ. ಆದರೆ, ಸಂಬಂಧಿಸಿದ ಕಾರ್ಮಿಕರು / ನೌಕರರು ಕೊರೊನ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರತಕ್ಕದ್ದು ಎಂದು ಸರ್ಕಾರ ಘೋಷಿಸಿರುವ ನಿಯಮಗಳು ಹೇಳುತ್ತವೆ.
ಮದುವೆ ರಿಸೆಪ್ಶನ್, ಬರ್ತ್ ಡೇ ಪಾರ್ಟಿ, ಮಾಲ್ಗಳು, ಥಿಯೇಟರ್ಗಳು ಬಂದ್ ಆಗಿವೆ. ಪುಡ್ ಸ್ಟ್ರೀಟ್ಗಳು ಸ್ಥಗಿತಗೊಳ್ಳಬೇಕಿದೆ. ಆಸ್ಪತ್ರೆಗಳ ವಿಚಾರಕ್ಕೆ ಓಡಾಡುವವರು ಅಗತ್ಯ ದಾಖಲೆ ತೋರಿಸಬೇಕಿದೆ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸರಕು ಸಾಗಣೆ, ಹೋಂ ಡೆಲಿವರಿ, ಇ- ಕಾಮರ್ಸ್ ವಾಣಿಜ್ಯ ಖಾಲಿ ವಾಹನಗಳ ಓಡಾಟಕ್ಕೆ ಅನುಮತಿ ಇದೆ. ಬೆಂಗಳೂರಿನಲ್ಲೂ ಸ್ವಿಗ್ಗಿ, ಜೊಮ್ಯಾಟೋ, ಡನ್ಜೋ ಸೇರಿದಂತೆ ಇ- ಕಾಮರ್ಸ್ ವ್ಯವಹಾರಕ್ಕೆ ಯಾವುದೇ ನಿಷೇಧ ವಿಧಿಸಲಾಗಿಲ್ಲ.
ಬಾರ್ಗಳು 10 ಗಂಟೆಗೆ ಬಂದ್ ಆಗಲಿದ್ದು, 10 ಗಂಟೆಯ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅವಸಾರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಭಾರತದಲ್ಲಿ 71 ದಿನದಲ್ಲಿ ಕೊವಿಡ್ ಲಸಿಕೆ ಪಡೆದ 176 ಮಂದಿ ಸಾವು; ಲಸಿಕೆಗೂ ಸಾವಿಗೂ ನೇರ ಸಂಬಂಧ ಪತ್ತೆಯಾಗಿಲ್ಲ
Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೊದಿಗೆ ಪತ್ರ ಬರೆದ ರಾಹುಲ್ ಗಾಂಧಿ
(Bangalore Corona Curfew Guidelines released by Karnataka Government Night Curfew starting from 10 April)
Published On - 3:57 pm, Fri, 9 April 21