ತಮಿಳುನಾಡಿನಲ್ಲಿ ಹಿಂದಿಗಿಂತ ಒಳ್ಳೆಯ ವಾತಾವರಣವಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ತಮಿಳುನಾಡಿನಲ್ಲಿ ಹಿಂದಿಗಿಂತ ಒಳ್ಳೆಯ ವಾತಾವರಣ ಇದೆ. ತಮಿಳುನಾಡು ಪಾಂಡಿಚೇರಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಗ್ಯಾರೆಂಟಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬೆಳಗಾವಿ: ತಮಿಳುನಾಡಿನಲ್ಲಿ ಹಿಂದಿಗಿಂತ ಒಳ್ಳೆಯ ವಾತಾವರಣ ಇದೆ. ತಮಿಳುನಾಡು ಪುದುಚೇರಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಕೇರಳದಲ್ಲಿ ಮೆಟ್ರೋಮ್ಯಾನ್ ಶ್ರೀಧರ್ ನೇತೃತ್ವದಲ್ಲಿ ಉತ್ತಮ ವಾತಾವರಣವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು.
ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ಸಿ.ಟಿ ರವಿ, ಪಶ್ಚಿಮ ಬಂಗಾಳದಲ್ಲಿ ದೀದಿಗೆ ಟಾಟಾ ಹೇಳಲು ಜನ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಜನ ವಿರೋಧಿ ಬಿಜೆಪಿ ಸರ್ಕಾರ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರ ದೃಷ್ಟಿಯಲ್ಲಿ ಎಲ್ಲರೂ ಭ್ರಷ್ಟಾಚಾರ ಮಾಡಬೇಕು. ಎಲ್ಲಾ ಹಗರಣಗಳು ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದ್ದು ಎಂದು ಕಿಡಿಕಾರಿದ್ದಾರೆ.
ಕೊವಿಡ್ ಕಾಲದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಎಂಬ ಡಿ.ಕೆ.ಶಿವಕುಮಾರ್ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿ ಜಿಲ್ಲೆಯಲ್ಲೂ ಸಿಕ್ಕಿರುವ ಮಾಹಿತಿ ಜಿಲ್ಲಾಡಳಿತದ ಬಳಿ ಇದೆ. ಇಂಪೋರ್ಟ್ ಮೇಲೆ ಅವಂಬಿತ ಆಗಿರುವುದರಿಂದ ಪೆಟ್ರೋಲ್ ಬೆಲೆ ಹೆಚ್ಚಳವಾಗಿದೆ. ಸ್ವಾವಲಂಬನೆಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ. ಬಿಎಸ್‌ವೈ ಸರ್ಕಾರದಲ್ಲಿ ಒಬ್ಬರೇ ಒಬ್ಬರು ಹಿಂದೂ ಕಾರ್ಯಕರ್ತರ ಹತ್ಯೆ ಆಗಿಲ್ಲ. ಕೊವಿಡ್ ವ್ಯಾಕ್ಸಿನ್ ವಿರೋಧ ಮಾಡಿದವರು ಸದ್ದಿಲ್ಲದೇ ಸೂಜಿ ಚುಚ್ಚಿಸಿಕೊಂಡರು ಎಂದು ಮಾತನಾಡಿದ್ದಾರೆ.
ಇದನ್ನೂ ಓದಿ: Tamil Nadu Election 2021 Voting LIVE: ಕುತೂಹಲ ಮೂಡಿಸಿದ ತಮಿಳುನಾಡು ವಿಧಾನಸಭಾ ಚುನಾವಣೆ
ತಮಿಳುನಾಡು ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಹಂಚಿಕೊಂಡ ಫೊಟೊ ಟ್ವಿಟರ್ನಲ್ಲಿ ವೈರಲ್