Tamil Nadu Election 2021 Voting LIVE: ಕುತೂಹಲ ಮೂಡಿಸಿದ ತಮಿಳುನಾಡು ವಿಧಾನಸಭಾ ಚುನಾವಣೆ
ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ, ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ, ಪಶ್ಚಿಮಬಂಗಾಳದ 3 ಜಿಲ್ಲೆಗಳ 31 ಕ್ಷೇತ್ರಗಳಲ್ಲಿ ಹಾಗೂ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿದ್ದು, ಈಗಾಗಲೇ ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಮತದಾನ ಆರಂಭವಾಗಿದ್ದು, ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ, ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ, ಪಶ್ಚಿಮಬಂಗಾಳದ 3 ಜಿಲ್ಲೆಗಳ 31 ಕ್ಷೇತ್ರಗಳಲ್ಲಿ ಹಾಗೂ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ಎಲ್ಲಾ ಕಡೆಗಳಿಂದ ಒಟ್ಟು 20 ಕೋಟಿಗೂ ಅಧಿಕ ಜನ ಇಂದು ಮತ ಚಲಾಯಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.
LIVE NEWS & UPDATES
-
ಮತ ಚಲಾಯಿಸಲು ಬಂದ ನಟ ಕಮಲ್ಹಾಸನ್ ಕುಟುಂಬಸ್ಥರು
ನಟ ಕಮಲ್ಹಾಸನ್ ಕುಟುಂಬ
-
ಮತ ಚಲಾಯಿಸಿದ ಸೂಪರ್ಸ್ಟಾರ್ ರಜಿನಿಕಾಂತ್
ಮತಚಲಾಯಿಸಿದ ನಂತರ ಫೋಟೋಕ್ಕೆ ಪೋಸ್ ಕೊಟ್ಟ ರಜಿನಿಕಾಂತ್
-
-
ಮತ ಚಲಾಯಿಸಲು ಬಂದ ನಟ ಸೂರ್ಯ ಹಾಗೂ ಅವರ ಕುಟುಂಬಸ್ಥರು
ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ನಟ ಸೂರ್ಯ ಕುಟುಂಬ
-
ಮತ ಚಲಾಯಿಸಲು ಆಗಮಿಸಿದ ನಟ ಅಜಿತ್, ಶಾಲಿನಿ ದಂಪತಿ
ಅಜಿತ್ ಮತ್ತು ಶಾಲಿನಿ
-
ಸೈಕಲ್ ಏರಿಬಂದು ಮತ ಚಲಾಯಿಸಿದ ನಟ ವಿಜಯ್
ನಟ ವಿಜಯ್
-
-
ಮತ ಚಲಾಯಿಸಲು ಕುಟುಂಬ ಸಮೇತರಾಗಿ ಬಂದ ಕಮಲ್ಹಾಸನ್
ಮತಚಲಾವಣೆಗೆ ಸರತಿಯಲ್ಲಿ ನಿಂತ ಕಮಲ್ಹಾಸನ್
-
ಹಿರಿಯ ನಾಗರೀಕರಿಗೆ, ಅನಾರೋಗ್ಯಪೀಡಿತರಿಗೆ ಅಂಚೆ ಮತದಾನದ ವ್ಯವಸ್ಥೆ
80 ವರ್ಷ ದಾಟಿದವರಿಗೆ, ಅನಾರೋಗ್ಯಪೀಡಿತರಿಗೆ ಆರೋಗ್ಯದ ಹಿತದೃಷ್ಟಿಯಿಂದ ಆಂಚೆ ಮತದಾನದ ವ್ಯವಸ್ಥೆ ಮಾಡಿಕೊಡಲಾಗಿದೆ.
-
ಕೊರೊನಾ ಸೋಂಕಿತರಿಗೆ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಲು ವ್ಯವಸ್ಥೆ
ಕೊರೊನಾ ಪಾಸಿಟಿವ್ ರೋಗಿಗಳಿಗೆ ಸಂಜೆ 6 ಗಂಟೆಯ ನಂತರ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
-
ಮತ ಚಲಾಯಿಸಲು ಮಾಸ್ಕ್ ಧರಿಸಿ ಬಂದ ರಜಿನಿಕಾಂತ್
ಸೂಪರ್ಸ್ಟಾರ್ ರಜಿನಿಕಾಂತ್ ಬೆಳ್ಳಂಬೆಳಗ್ಗೆಯೇ ಮತ ಚಲಾಯಿಸಲು ಆಗಮಿಸಿದ್ದು, ಮಾಸ್ಕ್ ಧರಿಸಿ ಮತದಾನ ಕೇಂದ್ರಕ್ಕೆ ಬಂದಿದ್ದಾರೆ.
ಮತ ಚಾಲಾಯಿಸಲು ಬಂದ ರಜಿನಿಕಾಂತ್
-
ನಟ ರಜಿನಿಕಾಂತ್, ಕಮಲ್ ಹಾಸನ್, ಅಜಿತ್ ಮುಂತಾದವರಿಂದ ಮತದಾನ
ತಮಿಳುನಾಡಿನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ನಟ ರಜಿನಿಕಾಂತ್, ಕಮಲ್ ಹಾಸನ್, ಅಜಿತ್ ಮುಂತಾದರು ಮತ ಚಲಾಯಿಸಿದ್ದು, ರಜಿನಿಕಾಂತ್ ಸ್ಟೆಲ್ಲಾ ಮೇರಿ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.
Published On - Apr 06,2021 12:21 PM



