AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಗೆ ಇವಿಎಂ ಮತ್ತು ಮತದಾರರ ಮೇಲೆ ನಂಬಿಕೆ ಇದೆ, ತಮಿಳುನಾಡಿನಲ್ಲಿ ಉತ್ತಮ ಫಲಿತಾಂಶ ಬರಲಿದೆ: ಸಿ.ಟಿ.ರವಿ

ಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎನ್ನುವ ನಂಬಿಕೆ ಇದೆ. ನಾವು ಮತದಾರರು ಹಾಗೂ ಇವಿಎಂ ಎರಡನ್ನೂ ನಂಬುತ್ತೇವೆ. ಕೆಲವರ ರೀತಿ ನಾವು ಇವಿಎಂ ಮೇಲೆ ಆರೋಪ ಹೊರಿಸುವುದಿಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳ ಕಾಲೆಳೆದಿದ್ದಾರೆ.

ನಮಗೆ ಇವಿಎಂ ಮತ್ತು ಮತದಾರರ ಮೇಲೆ ನಂಬಿಕೆ ಇದೆ, ತಮಿಳುನಾಡಿನಲ್ಲಿ ಉತ್ತಮ ಫಲಿತಾಂಶ ಬರಲಿದೆ: ಸಿ.ಟಿ.ರವಿ
ಸಿ.ಟಿ.ರವಿ
Skanda
| Updated By: guruganesh bhat|

Updated on: Apr 06, 2021 | 1:11 PM

Share

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ಫಲಿತಾಂಶ ಲಭಿಸಲಿದೆ. ನಮ್ಮ ಪರಿಶ್ರಮ ಮತ್ತು ಹೋರಾಟಕ್ಕೆ ತಮಿಳುನಾಡಿನಲ್ಲಿ ಬೆಲೆ ಸಿಗಲಿದೆ. ನಮಗೆ ಜನ ಮತ್ತು ಇವಿಎಂ ಇಬ್ಬರ ಮೇಲೂ ನಂಬಿಕೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎನ್ನುವ ನಂಬಿಕೆ ಇದೆ. ನಾವು ಮತದಾರರು ಹಾಗೂ ಇವಿಎಂ ಎರಡನ್ನೂ ನಂಬುತ್ತೇವೆ. ಕೆಲವರ ರೀತಿ ನಾವು ಇವಿಎಂ ಮೇಲೆ ಆರೋಪ ಹೊರಿಸುವುದಿಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳ ಕಾಲೆಳೆದಿದ್ದಾರೆ. ತಮಿಳುನಾಡಿನ ಜನ ನಮ್ಮ ಪರಿಶ್ರಮ ಮತ್ತು ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಉತ್ತಮ ಫಲಿತಾಂಶ ಬರುವುದಕ್ಕೆ ನಾವು ಕಾಯುತ್ತೇವೆ. ಬಿಜೆಪಿ ಅಭ್ಯರ್ಥಿಗಳು ಗೆದ್ದು ಬರುತ್ತಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಗಳ ಬಗ್ಗೆ ಮಾತನಾಡಿ, ಏಪ್ರಿಲ್​ 17ಕ್ಕೆ ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ನಾನು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಚುನಾವಣಾ ಪ್ರಚಾರಕ್ಕೆ ಹೋಗುತ್ತೇವೆ. ಮೂರು ಕ್ಷೇತ್ರಗಳಿಗೂ ಹೋಗಿ ಪ್ರಚಾರ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಹಂಚಿಕೊಂಡ ಫೊಟೊ ಟ್ವಿಟರ್​ನಲ್ಲಿ ವೈರಲ್

(We will win Tamil Nadu Assembly election 2021 as We believe in EVM and Voter simultaneously says BJP Leaders CT Ravi)