Assembly Elections 2021: ನಾಲ್ಕು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ; ಮತಗಟ್ಟೆಗಳಲ್ಲಿ ನಿಧಾನಗತಿ ಮತದಾನ
Assembly Elections 2021 Voting Updates: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ದೆಹಲಿ: ಅಸ್ಸಾಂ, ಕೇರಳ, ತಮಿಳನಾಡು , ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದ್ದು, ಮತದಾನ ನಿಧಾನಗತಿಯಲ್ಲಿ ಸಾಗಿದೆ. ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬೆಳಗ್ಗೆ 9.54ರ ಹೊತ್ತಿಗೆ ಕೇರಳದಲ್ಲಿ ಶೇ15.33 ,ತಮಿಳುನಾಡಿನಲ್ಲಿ ಶೇ 6.58, ಪುದುಚೇರಿಯಲ್ಲಿ ಶೇ 6.58, ಪಶ್ಚಿಮ ಬಂಗಾಳದಲ್ಲಿ ಶೇ 14.62 ಮತ್ತು ಅಸ್ಸಾಂನಲ್ಲಿ ಶೇ 12.83 ಮತದಾನವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮತದಾರರಿಗೆ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡಾ ಮತದಾರರಲ್ಲಿ ಮತ ಚಲಾಯಿಸಲು ವಿನಂತಿಸಿದ್ದಾರೆ.
ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ. ಈ ಪ್ರದೇಶದ ಜನರು ವಿಶೇಷವಾಗಿ ಯುವ ಜನರು ಮತದಾನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಂದು ಮತದಾನ ನಡೆಯುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ. ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸಿ ಎಂದು ಮೋದಿ ಬಂಗಾಳಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
Elections are taking place in Assam, Kerala, Puducherry, Tamil Nadu and West Bengal. I request the people in these places to vote in record numbers, particularly the young voters.
— Narendra Modi (@narendramodi) April 6, 2021
পশ্চিমবঙ্গের যে সব জায়গায় আজ নির্বাচন হচ্ছে, সেখানকার ভোটদাতাদের বিপুল সংখ্যায় ভোট দেবার আবেদন জানাই। ভোট দিন আর গনতন্ত্রকে আরো শক্তিশালী করুন !
— Narendra Modi (@narendramodi) April 6, 2021
ಪುದುಚೇರಿಯಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಪ್ರಗತಿಪರ ಸರ್ಕಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಅಮಿತ್ ಶಾ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ. ಶಕ್ತಿಶಾಲಿ ಮತ್ತು ದೃಢ ನಾಯಕತ್ವವು ಬಂಗಾಳವನ್ನು ಆತ್ಮ ನಿರ್ಭರ ಮಾಡುವ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತದೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದ್ದು,ಬಂಗಾಳದ ಅಭಿವೃದ್ಧಿಗಾಗಿ ಮತದಾನ ಮಾಡಿ ಎಂದು ಅಮಿತ್ ಶಾ ಬಂಗಾಳಿಯಲ್ಲಿ ಟ್ವೀಟ್ ಮಾಡಿದ್ದಾರೆ.
ஒரு வலுவான விரும்பம் கொண்ட மற்றும் ஊழலற்ற அரசாங்கத்தால் மட்டுமே, தமிழகத்தின் முன்னேற்றத்தையும் வளர்ச்சியையும் உறுதி செய்ய முடியும். மாநிலத்தின் அனைத்து வாக்காளர்களும் அதிக எண்ணிக்கையில் வாக்களித்து, தங்கள் ஜனநாயக கடமையை நிறைவேற்றுமாறு வேண்டிக்கொள்கிறேன்
— Amit Shah (@AmitShah) April 6, 2021
ಇಂದು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಎಲ್ಲ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಹೊರಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಉತ್ಸಾಹದಿಂದ ಆಚರಿಸಬೇಕೆಂದು ನಾನು ಕೋರುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
Today, the polling for assembly elections in Tamil Nadu, Kerala, West Bengal, Assam and Puducherry is going on. I urge all the eligible voters to go out in large numbers and celebrate the festival of democracy with enthusiasm.
— Rajnath Singh (@rajnathsingh) April 6, 2021
ನಿಮ್ಮ ಮತ ಚಲಾಯಿಸಿ, ಭಾರತದಲ್ಲಿ ನೀವು ಎಣಿಸಲ್ಪಡುತ್ತಿದ್ದೀರಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ . ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮತದಾನ ಆರಂಭವಾಗಿದ್ದು,ದೃಢ, ಪ್ರಗತಿಪರ ಮತ್ತು ಉಜ್ವಲ ಭವಿಷ್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟಿಸಿದ್ದಾರೆ.
As polling begins in Kerala, Tamil Nadu and Puducherry, I request my sisters and brothers to go out and vote in large numbers and ensure a strong, progressive and prosperous future for themselves.
— Priyanka Gandhi Vadra (@priyankagandhi) April 6, 2021
ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ: Assam Assembly polls: ಕೇವಲ 90 ವೋಟರ್ಗಳಿರುವ ಮತಗಟ್ಟೆಯಲ್ಲಿ 181 ವೋಟ್ಗಳ ಚಲಾವಣೆ! 6 ಅಧಿಕಾರಿಗಳು ಸಸ್ಪೆಂಡ್
(Assembly elections 2021 polling starts in Assam Kerala Tamil Nadu West Bengal and Puducherry)