Petrol Price Today: ಪೆಟ್ರೊಲ್, ಡೀಸೆಲ್ ದರದಲ್ಲಿ ಮಂಗಳವಾರ ಯಾವುದೇ ಬದಲಾವಣೆಗಳಿಲ್ಲ!
Petrol Diesel Price Today in Bengaluru: ಕಳೆದ ಮಂಗಳವಾರ ಇಂಧನ ದರ ಏರಿಕೆ ಕಂಡ ನಂತರದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿದಲ್ಲಿ ಇಂದಿನವರೆಗೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ಬೆಂಗಳೂರು: ಸತತವಾಗಿ ಏಳನೇ ದಿನವೂ ಸರ್ಕಾರಿ ತೈಲ ಕಂಪನಿಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿ ಉಳಿದಿದೆ. ಕಳೆದ ಮಂಗಳವಾರ ಪೆಟ್ರೋಲ್ ದರ 22 ಪೈಸೆ ಏರಿಕೆಯಾಗಿತ್ತು. ಜೊತೆಗೆ ಡೀಸೆಲ್ ದರ 23 ಪೈಸೆ ಏರಿಕೆಯಾಗಿತ್ತು. ಆ ನಂತರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.56 ರೂಪಾಯಿ ಆಗಿದೆ. ಪ್ರತಿ ಲೀಟರ್ ಡೀಸೆಲ್ಅನ್ನು 80.87 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು 93.59 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್ ಡೀಸೆಲ್ ದರ 85.75 ರೂಪಾಯಿ ಇದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.98 ರೂಪಾಯಿ ಇದೆ. ಪ್ರತಿ ಲೀಟರ್ ಡೀಸೆಲ್ ದರ 87.96 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.77 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 83.75 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.58 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ ದರ 85.88 ರೂಪಾಯಿ ಇದೆ.
ಪುಣೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.62 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 86.27 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಪ್ರತಿ ಲೀಟರ್ 94.16 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 88.20 ರೂಪಾಯಿ ಇದೆ. ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 88.91 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 81.33 ರೂಪಾಯಿ ಇದೆ. ಹರಿಯಾಣದ ಗುರುಗ್ರಾಮದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 88.52 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ ದರ 81.45 ರೂಪಾಯಿ ಇದೆ.
ಫೆಬ್ರವರಿಯಿಂದ ಇಂಧನ ದರ ಏರಿಕೆ ಕಾಣುತ್ತಲೇ ಇದ್ದುದನ್ನು ಕಂಡ ಗ್ರಾಹಕರ ಕೆಂಗಣ್ಣು ಸರ್ಕಾರದ ಮೇಲೆ ಬಿದ್ದಿತ್ತು. ಅದೆಷ್ಟೋ ಪ್ರತಿಭಟನೆಗಳು, ಧರಣಿಗಳು ನಡೆದಿದ್ದವು. ಆದರೆ ಇಂಧನ ದರ ಏರಿಕೆಯತ್ತ ಸಾಗುತ್ತಿತ್ತು. ಪೆಟ್ರೋಲ್ ದರ ಇಳಿಕೆಯಲ್ಲಿ ನಮ್ಮಷ್ಟೇ ಪಾಲು ರಾಜ್ಯ ಸರ್ಕಾರಗಳಿಗೂ ಇವೆ. ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕೆಲಸ ನಿರ್ವಹಿಸಬೇಕಿದೆ . ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ತೆರಿಗೆ ವಿಧಿಸುತ್ತದೆ. ಕೇವಲ ಸರ್ಕಾರ ಮಾತ್ರವಲ್ಲ ರಾಜ್ಯ ಸರ್ಕಾರ ಕೂಡ ತೆರಿಗೆ ಇಳಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರು ಹೇಳಿದ್ದರು.
ಇಂಧನ ದರ ಏರಿಕೆಯಿಂದ ಬೇಡಿಕೆಯಲ್ಲಿಯೂ ಕುಸಿತ ಕಂಡು ಬಂದಿತ್ತು. ಪಂಚರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಇಂಧನ ದರ ಏರಿಕೆ ಕಾಣುವುದು ಬೇಡ ಎಂದು ಗ್ರಾಹಕರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ವಿವಿಧ ನಗರದ ಪೆಟ್ರೋಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
(Petrol Price Today in Bangalore Chennai Mumbai and Delhi Diesel price on 6th April 2021)