West Bengal Election 2021: ಬಿಜೆಪಿ ಅಭ್ಯರ್ಥಿ ಪಾಯಲ್​ ಸರ್ಕಾರ್, ಬೆಂಗಾವಲು ಪಡೆ​ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರಿಂದ ದಾಳಿ

West Bengal Election 2021: ಬಿಜೆಪಿ ಅಭ್ಯರ್ಥಿ ಪಾಯಲ್​ ಸರ್ಕಾರ್, ಬೆಂಗಾವಲು ಪಡೆ​ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರಿಂದ ದಾಳಿ
ಪ್ರಚಾರದ ಸಂದರ್ಭದಲ್ಲಿ ಪಾಯಲ್​ ಬೆಂಬಲಿಗರ ಮೇಲೆ ಸಹ ದಾಳಿ ನಡೆದಿದೆ (ಫೋಟೋ ಕೃಪೆ: ಪಾಯಲ್​ ಸರ್ಕಾರ್​ ಟ್ವಿಟರ್​)

ಮತ ಪ್ರಚಾರದಲ್ಲಿ ತೊಡಗಿದ್ದ ಪಾಯಲ್​​ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಳಿ ನಡೆದ ಸ್ಥಳದ ಫೋಟೋಗಳೂ ಕೂಡ ವೈರಲ್ ಆಗುತ್ತಿವೆ.

Lakshmi Hegde

|

Apr 04, 2021 | 4:03 PM

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಹಿಂಸೆ, ಹೊಡೆದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಲ್ಲೀಗ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್​ 6ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಪಾಯಲ್​ ಸರ್ಕಾರ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬೆಹಾಲಾದ ಠಾಕೂರ್​ಪುರದಲ್ಲಿ ಘಟನೆ ನಡೆದಿದ್ದು, ಪಾಯಲ್​ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಮತ ಪ್ರಚಾರದಲ್ಲಿ ತೊಡಗಿದ್ದ ಪಾಯಲ್​​ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಳಿ ನಡೆದ ಸ್ಥಳದ ಫೋಟೋಗಳೂ ಕೂಡ ವೈರಲ್ ಆಗುತ್ತಿವೆ. ಬಿಜೆಪಿ ಇದುವರೆಗೆ ಈ ಬಗ್ಗೆ ಯಾವುದೇ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ.

ನಟಿ ಪಾಯಲ್ ಸರ್ಕಾರ್​ ಅವರು ಫೆಬ್ರವರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಆದರೆ ನಾನು ಸಕ್ರಿಯವಾಗಿರಲಿಲ್ಲ. ಆದರೆ ಬಿಜೆಪಿ ಸಿದ್ಧಾಂತ ನನಗೆ ಹೆಚ್ಚು ಆಪ್ತ ಎನಿಸುವ ಕಾರಣ ನಾನು ಆ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಪಾಯಲ್​ಗೆ ಕೇಂದ್ರ ಸರ್ಕಾರ Y ಶ್ರೇಣಿಯ ಭದ್ರತೆಯನ್ನು ನೀಡಿತ್ತು. ಅದಾದ ಬಳಿಕ ಮಾರ್ಚ್​ನಲ್ಲಿ ಪಾಯಲ್​ ಸೇರಿ ಒಟ್ಟು ಐವರು ಮುಖಂಡರಿಗೆ ಸಿಐಎಸ್​ಎಫ್​ ಶ್ರೇಣಿಯ ಭದ್ರತೆಯನ್ನು ನೀಡಲಾಗಿತ್ತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಾಯಲ್ ಪೂರ್ವ ಬೆಹಾಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ತೃಣಮೂಲ ಕಾಂಗ್ರೆಸ್ನ ರತ್ನಾ ಚಟರ್ಜಿ ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: Body Shaming; ಸುಮ್ಮನಿರುವುದು ಹೇಗೆ? : ಕಪ್ಪು ರೇಷಿಮೆ ಸೀರೆಯನ್ನೇ ಆರತಕ್ಷತೆಗೆ ಆಯ್ಕೆ ಮಾಡಿಕೊಂಡಿದ್ದೆ 

West Bengal Election 2021: ‘ದೀದಿ.. ಜನರ ನಂಬಿಕೆಗೆ ದ್ರೋಹ ಮಾಡಿದ ನೀವು ಸೋಲನ್ನು ಒಪ್ಪಿಕೊಳ್ಳಲೇಬೇಕು’-ಹೂಗ್ಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

Follow us on

Most Read Stories

Click on your DTH Provider to Add TV9 Kannada