Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Assembly Elections 2021: ಮಂಜೇಶ್ವರದಲ್ಲಿ ಬಿಜೆಪಿ ಸೋಲಿಸಲು ಯುಡಿಎಫ್​ಗೆ ಬೆಂಬಲ ನೀಡಿ; ಎಡಪಕ್ಷಗಳಿಗೆ ಮುಲ್ಲಪ್ಪಳ್ಳಿ ರಾಮಚಂದ್ರನ್ ಮನವಿ

ಕೇರಳದ 140 ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಲಿದೆ. 131 ಕ್ಷೇತ್ರಗಳಲ್ಲಿ ಸಂಜೆ 7ಗಂಟೆ ವರೆಗೆ 9 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

Kerala Assembly Elections 2021: ಮಂಜೇಶ್ವರದಲ್ಲಿ ಬಿಜೆಪಿ ಸೋಲಿಸಲು ಯುಡಿಎಫ್​ಗೆ ಬೆಂಬಲ ನೀಡಿ; ಎಡಪಕ್ಷಗಳಿಗೆ ಮುಲ್ಲಪ್ಪಳ್ಳಿ ರಾಮಚಂದ್ರನ್ ಮನವಿ
ಮತಗಟ್ಟೆಗೆ ತೆರಳುತ್ತಿರುವ ಅಧಿಕಾರಿಗಳು
Follow us
ರಶ್ಮಿ ಕಲ್ಲಕಟ್ಟ
|

Updated on: Apr 05, 2021 | 7:47 PM

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಸಾರ್ವಜನಿಕ ಪ್ರಚಾರ ಕಾರ್ಯಕ್ರಮ ಭಾನುವಾರ ಸಂಜೆ ಮುಕ್ತಾಯವಾಗಿದ್ದು, ಮತದಾರರಲ್ಲಿ ಅಭ್ಯರ್ಥಿಗಳು ಮತಯಾಚಿಸುವ ಕೊನೆ ಹಂತದ ಪ್ರಕ್ರಿಯೆ ಬಿರುಸಿನಿಂದ ನಡೆದು ಬರುತ್ತಿದೆ. ಆರೋಪ- ಪ್ರತ್ಯಾರೋಪಗಳೊಂದಿಗೆ ವಿವಿಧ ಪಕ್ಷಗಳು ಜಿದ್ದಾ ಜಿದ್ದಿ ಪೈಪೋಟಿಗೆ ಸಿದ್ಧವಾಗಿವೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರನ್ನು ಪರಾಭವಗೊಳಿಸಲು ಕಾಂಗ್ರೆಸ್ ಗೆ ಬೆಂಬಲ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಎಡಪಕ್ಷಗಳಿಗೆ ವಿನಂತಿ ಮಾಡಿದ್ದು ಕೊನೆಯ ಹಂತದ ಪ್ರಚಾರ ಕಾರ್ಯಕ್ರಮದಲ್ಲಿ ಚರ್ಚೆಯಾದ ವಿಷಯವಾಗಿದೆ. ಮಂಜೇಶ್ವರದಲ್ಲಿ ಯುಡಿಎಫ್ ಏಕಾಂಗಿಯಾಗಿಯೇ ಗೆಲ್ಲಲಿದೆ ಎಂದು ಉಮ್ಮನ್ ಚಾಂಡಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಚರ್ಚೆ ತಾತ್ಕಾಲಿಕವಾಗಿ ಶಮನಗೊಂಡಿದೆ. ಈ ವಿಷಯದಲ್ಲಿ ರಮೇಶ್ ಚೆನ್ನಿತ್ತಲ ಮತ್ತು ಮುಲ್ಲಪಳ್ಳಿ ಮಾತಿಗೆ ಉಮ್ಮನ್ ಚಾಂಡಿ ಕಿವಿಗೊಡಲಿಲ್ಲ.

ಅಭ್ಯರ್ಥಿ ಇಲ್ಲದೇ ಇರುವ ತಲಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ಯಾರಿಗೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಇಲ್ಲಿ ಕಣದಲ್ಲಿರವ ಇಂಡಿಯನ್ ಗಾಂಧೀಯನ್ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸಿ.ಒ.ಟಿ. ನಸೀರ್ ಅವರಿಗೆ ಮತನೀಡಿ ಎಂದು ಬಿಜೆಪಿ ನಾಯಕ ವಿ.ಮುರಳೀಧರನ್ ಮನವಿ ಮಾಡಿದ್ದರು. ಆದರೆ ನನಗೆ ಬಿಜೆಪಿ ಬೆಂಬಲ ಅಗತ್ಯವಿಲ್ಲ ಎಂದು ನಸೀರ್ ಪ್ರತಿಕ್ರಿಯಿಸಿದ್ದಾರೆ.

ಎಲ್ ಡಿಎಫ್ ಪಾಳಯದಲ್ಲಿ ಶಾಂತಿಯ ವಾತಾವರಣವಿದೆ. ಕಣ್ಣೂರಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಟೌಟ್ ಗೆ ಹಾನಿಯುಂಟು ಮಾಡಿದ ವಿಷಯದಲ್ಲಿ ಆರೋಪ -ಪ್ರತ್ಯಾರೋಪಗಳು ಕೇಳಿ ಬಂದಿವೆ.

ಮತದಾನಕ್ಕೆ ಸಕಲ ಸಿದ್ಧತೆ

ಮತದಾನಕ್ಕಾಗಿರುವ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ಇವಿಎಂ ಸೇರಿದಂತೆ ಮತದಾನಕ್ಕೆ ಅಗತ್ಯವಾದ ಪರಿಕರಗಳನ್ನು ಸೋಮವಾರ ಬೆಳಗ್ಗೆ 8ಗಂಟೆಯ ನಂತರ ವಿತರಿಸಲಾಗಿತ್ತು. ರಾಜ್ಯದ 140 ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಲಿದೆ. 131 ಕ್ಷೇತ್ರಗಳಲ್ಲಿ ಸಂಜೆ 7ಗಂಟೆ ವರೆಗೆ 9 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೇರಳ ಪೊಲೀಸ್ ಪಡೆ 59,292 ಸಿಬ್ಬಂದಿಗಳೊಂದಿಗೆ ಕೇಂದ್ರ ಭದ್ರತಾ ಪಡೆ, ಇತರ ರಾಜ್ಯಗಳ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ರಾಜ್ಯದ 481 ಪೊಲೀಸ್ ಠಾಣೆಗಳನ್ನು 142 ಚುನಾವಣಾ ಸಬ್ ಡಿವಿಷನ್ ಆಗಿ ವಿಂಗಡಿಸಿ ಭದ್ರತೆಯ ಹೊಣೆ ನೀಡಲಾಗಿದೆ. ಪೊಲೀಸ್ ಪಡೆ ಜತೆ ನಕ್ಸಲ್ ಭಾದಿತ ಪ್ರದೇಶಗಳಲ್ಲಿ ಸ್ಪೆಷಲ್ ಆಪರೇಷನ್ ಗ್ರೂಪ್, ಥಂಡರ್ ಬಾಲ್ಟ್ ಪಡೆ ಇರಲಿದೆ. ಸುರಕ್ಷಾ ಕ್ರಮಗಳಿಗಾಗಿ ಡ್ರೋಣ್​ಗಳನ್ನೂ ಬಳಸಲಾಗುತ್ತಿದೆ.

ಇದನ್ನೂ ಓದಿ: PM Modi in Kerala: ಕೇರಳದ ಜನರು ಎಲ್​ಡಿಎಫ್ ಮತ್ತು ಯುಡಿಎಫ್​ನಿಂದ ಬೇಸತ್ತಿದ್ದಾರೆ, ಅವರಿಗೆ ಬದಲಾವಣೆ ಬೇಕಿದೆ: ನರೇಂದ್ರ ಮೋದಿ

Kerala Assembly Elections 2021: ಬಿಜೆಪಿಯವರು ಸೃಷ್ಟಿಸುವ ಲವ್ ಜಿಹಾದ್ ಭೀತಿ, ಕೋಮುವಾದ ಕೇರಳದಲ್ಲಿ ನಡೆಯಲ್ಲ: ಶಶಿ ತರೂರ್