ವಿಶ್ಲೇಷಣೆ | ಭ್ರಷ್ಟಾಚಾರ ವಿರೋಧಿ ಹೋರಾಟಗಳು ವಿಫಲವಾಗಲು ನಾವು ಹೇಗೆ ಕಾರಣ?

ಅಣ್ಣಾ ಹಜಾರೆ ಚಳುವಳಿಗೆ ಒಂದು ದಶಕವಾಯಿತು. ಈ ನಿಟ್ಟಿನಲ್ಲಿ ಆ ಚಳುವಳಿಯ ವೈಫಲ್ಯ ಮತ್ತು ಬೇರೆಬೇರೆ ಭ್ರಷ್ಟಾಚಾರ ವಿರೋಧಿ ಹೋರಾಟಗಳು ನೆಲ ಕಚ್ಚುತ್ತಿರುವುದೇಕೆ ಎಂಬ ವಿಶ್ಲೇಷಣೆ ಇಲ್ಲಿದೆ.

ವಿಶ್ಲೇಷಣೆ | ಭ್ರಷ್ಟಾಚಾರ ವಿರೋಧಿ ಹೋರಾಟಗಳು ವಿಫಲವಾಗಲು ನಾವು ಹೇಗೆ ಕಾರಣ?
ಅಣ್ಣಾ ಹಜಾರೆ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 05, 2021 | 9:16 PM

ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಲೋಕ್​ಪಾಲ್​ ಮಸೂದೆ ಜಾರಿಗೆ ಬರಬೇಕು ಎಂಬ ಒತ್ತಾಯದೊಂದಿಗೆ ಅಣ್ಣಾ ಹಜಾರೆ ಶುರುಮಾಡಿದ ಐತಿಹಾಸಿಕ ಸತ್ಯಾಗ್ರಹಕ್ಕೆ ಇಂದಿಗೆ (ಏಪ್ರಿಲ್ 5) ಒಂದು ದಶಕ ಸಂದಿದೆ. ಕಾಕತಾಳೀಯ ನೋಡಿ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಂದೇ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ. ಒಂದು ಅಂತರಾಷ್ಟ್ರೀಯ ಮಟ್ಟದ್ದು, ಇನ್ನೊಂದು ಸ್ಥಳೀಯ ವಿಚಾರ. ಅಂತರಾಷ್ಟ್ರೀಯ ಮಟ್ಟದ ವಿಚಾರವನ್ನು ಮೊದಲು ನೋಡೋಣ. ಮೀಡಿಯಾಪಾರ್ಟ್​ ಎಂಬ ಫ್ರೆಂಚ್​ ಮಾಧ್ಯಮ ಕಂಪೆನಿ ನಿನ್ನೆ ರಾತ್ರಿ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ, 2016 ರಫೇಲ್​ ಒಪ್ಪಂದದಲ್ಲಿ ಮಧ್ಯವರ್ತಿಗಳಿಗೆ ಒಂದು ಮಿಲಿಯನ್ (10 ಲಕ್ಷ)​ ಯೂರೋ ನೀಡಲಾಗಿದೆ ಎಂದು ಹೇಳಿದೆ. ಮೂರು ಕಂತಿನ ತನಿಖಾ ವರದಿಯ ಕೊನೆಯ ಭಾಗದಲ್ಲಿ ಹಣ ತೆಗೆದುಕೊಂಡವರು ಯಾರು ಎಂಬ ವಿಚಾರವನ್ನು ಓದುಗರ ಮುಂದೆ ಬಿಚ್ಚಿಡುವುದಾಗಿ ಮೀಡಿಯಾಪಾರ್ಟ್​ ಹೇಳಿದೆ. ಸ್ಥಳೀಯ ಸುದ್ದಿ ಏನು ಗೊತ್ತಾ? ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್​ ದೇಶ್​ಮುಖ್​ ರಾಜೀನಾಮೆ ನೀಡಿದ್ದಾರೆ.

ರಕ್ಷಣಾ ಖರೀದಿಯಲ್ಲಿನ ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಬಂದ ನಂತರ ಪ್ರಾರಂಭವಾದ ರಕ್ಷಣಾ ಖರೀದಿಯಲ್ಲಿ ಭ್ರಷ್ಟಾಚಾರ ಇಂದಿಗೂ ಮುಂದುವರಿದಿದೆ. 1948ರಲ್ಲಿ ನಡೆದ ಜೀಪ್​ ಖರೀದಿ ಹಗರಣದಲ್ಲಿ (ಜೀಪ್ ಸ್ಕ್ಯಾಂಡಲ್) ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರು ನಡೆದುಕೊಂಡ ರೀತಿ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ. ಕ್ಯಾಪ್ಟನ್ ಜಿ.ಆರ್​.ಗೋಪಿನಾಥ್​ ಈ ಹಿಂದೆ ಹೇಳಿದಂತೆ, ಸೇನೆಯ ಮೂರು ವಿಭಾಗಗಳಿಗೆ ಬೇಕಾಗುವ ಮದ್ದುಗುಂಡಿನಿಂದ ಹಿಡಿದು ಅತ್ಯಂತ ಮುಂದುವರಿದ ವಿಮಾನದವರೆಗೆ ಯಾವುದೂ ನಮ್ಮಲ್ಲಿ ತಯಾರಾಗುವುದಿಲ್ಲ. ಎಲ್ಲವನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು.

ರಕ್ಷಣಾ ಉತ್ಪನ್ನ ಖರೀದಿ ಬಗ್ಗೆ ಆಯ್ಕೆ ಸಮಿತಿಯ ನಿರ್ಧಾರವನ್ನು ಐಎಎಸ್​ ಅಧಿಕಾರಿಗಳು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸಂಪ್ರದಾಯ ಹಾಕಿರುವುದು ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಟ್ಟಿದೆ ಎಂದು ಕ್ಯಾಪ್ಟನ್ ಗೋಪಿನಾಥ್ ಹೇಳಿದ್ದರು. ಈಗ ರಫೇಲ್​ ಖರೀದಿಯಲ್ಲಿ ಕೂಡ ಗಿಫ್ಟ್​ ಕೊಡಲಾಗಿದೆ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಇದರ ಕೊನೆಯ ಕಂತು ಹೊರ ಬಂದ ನಂತರವೇ ನಾವು ಇದರ ಬಗ್ಗೆ ವಿವರವಾಗಿ ಚರ್ಚಿಸಬಹದಾಗಿದೆ. ಆದರೆ, ಇದೀಗ ಬಂದಿರುವ ಮಾಹಿತಿಯನ್ನು ಗಮನಿಸಿದರೆ, ರಫೇಲ್​ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆಯೆನೋ ಎಂಬ ಅನುಮಾನ ಬರುವುದು ನಿಜ.

ಅನಿಲ್​ ದೇಶ್​ಮುಖ್ ಹಫ್ತಾ ಮುಂಬಯಿ ನಗರದ ಈ ಹಿಂದಿನ ಪೊಲೀಸ್​ ಕಮೀಷ​ನರ್​ ಪರಮ್​ವೀರ್​ ಸಿಂಗ್​ ಮುಖ್ಯಮಂತ್ರಿಗೆ ಪತ್ರ ಬರೆದು ಗೃಹ ಸಚಿವ ಅನಿಲ್​ ದೇಶ್​ಮುಖ್​ ಪೊಲೀಸರಿಗೆ ಪ್ರತಿ ತಿಂಗಳು ₹ 100 ಕೋಟಿ ಕಪ್ಪ ತಂದು ಕೊಡಲು ಹೇಳಿದ್ದರು ಎಂದು ಪತ್ರ ಬರೆದಿರುವ ವಿಚಾರ ಈಗ ಬಾಂಬೆ ಹೈಕೋರ್ಟ್​ನಲ್ಲಿದೆ. ಸಿಬಿಐ ತನಿಖೆಗೆ ಇಂದು ಹೈಕೋರ್ಟ್ ಆದೇಶ ನೀಡಿದ್ದರಿಂದಾಗಿ ದೇಶ್​ಮುಖ್​ ರಾಜೀನಾಮೆ ನೀಡುವಂತಾಯಿತು. ಪೊಲೀಸ್​ ಹಫ್ತಾ ವಸೂಲಿ ಭಾರತದ ಯಾವ ರಾಜ್ಯದಲ್ಲೂ ಹೊಸದಲ್ಲ ಅಥವಾ ದೇಶ್​ಮುಖ್​ ಕೇಸಿನಲ್ಲಿ, ಸಿಬಿಐ ತನಿಖೆ ನಡೆದು, ಕೊನೆಗೆ ಕೋರ್ಟ್​ ತೀರ್ಪು ಕೊಟ್ಟರೂ ಅದನ್ನು ರಾಜ್ಯಗಳು ಜಾರಿಗೊಳಿಸುತ್ತವೆ ಎನ್ನುವ ವಿಶ್ವಾಸವೂ ಯಾರಿಗೂ ಇಲ್ಲ.

ಲೋಕ್​ಪಾಲ್ 2011ರಲ್ಲಿ ಪ್ರಾರಂಭವಾದ ಭ್ರಷ್ಟಾಚಾರ ವಿರೋಧಿ ​ಹೋರಾಟದ ಮೂಲ ಆಶಯ ಲೋಕ್​ಪಾಲ್​ ಮಸೂದೆ  ಜಾರಿಯಾಗಬೇಕು ಎಂಬುದಾಗಿತ್ತು. ಸರಕಾರಿ ವಲಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಈ ಮಸೂದೆ ಜಾರಿಯೇನೋ ಆಯಿತು. ಆದರೆ ನಂತರ ಆಗಿದ್ದೇನು? 2011ಕ್ಕಿಂತ ಮೊದಲಿನ ಸನ್ನಿವೇಶಕ್ಕೂ ಈಗಿನ ಸ್ಥಿತಿಗೂ ಬಹಳ ಭಿನ್ನತೆ ಏನೂ ಕಾಣುತ್ತಿಲ್ಲ.  ಇದು ಯಾಕೆ ಹೀಗೆ?​ ಇದಕ್ಕೆ ಹಲವಾರು ಕಾರಣ ಇದೆ. ಕಾಂಗ್ರೆಸ್​ ಪಕ್ಷದವರಿಗೆ ಇನ್ನೂ ಹಜಾರೆ ಅವರ ಮೇಲೆ ಸಿಟ್ಟದೆ. ಆತ ಸುಳ್ಳು ಹೇಳಿ ನಮ್ಮಿಂದ ಅಧಿಕಾರ ಹೋಗಲು ಕಾರಣೀಕರ್ತನಾದ ಎಂದು. ಆದರೆ ನಿಜ ಎಲ್ಲಿದೆ?

ಭ್ರಷ್ಟಾಚಾರ ಅಧ್ಯಯನ ಮತ್ತು ಭಾರತ ಭ್ರಷ್ಟಾಚಾರ ಅಧ್ಯಯನ ಮತ್ತು ಆ ಅಧ್ಯಯನದ ಅಧಾರದ ಮೇಲೆ ಬರಬೇಕಾದ ಸಾಮಾಜಿಕ ಮತ್ತು ಸರಕಾರದ ಮಟ್ಟದಲ್ಲಿನ ಬದಲಾವಣೆ ನಮ್ಮಲ್ಲಿ ಆಗುತ್ತಿಲ್ಲ. ಸಾಮಾನ್ಯವಾಗಿ ಈ ವಿಷಯವನ್ನು ರಾಜಕೀಯ ಶಾಸ್ತ್ರಜ್ಞರು ಮತ್ತು ಅರ್ಥಶಾಸ್ತ್ರಜ್ಞರು ಸಂಶೋಧನೆಗೆ ಒರೆಹಚ್ಚುತ್ತಾರೆ, ಚರ್ಚಿಸುತ್ತಾರೆ. ಸಮಾಜಶಾಸ್ತ್ರ ಮತ್ತು ಮಾನವ ಶಾಸ್ತ್ರಜ್ಞರು ಇದನ್ನು ನೋಡುವ ರೀತಿಯೇ ಬೇರೆ ಇದೆ. ಅಂತರಾಷ್ಟ್ರೀಯ ಹಣಕಾಸು ನಿಧಿ ಅಥವಾ ವಿಶ್ವ ಬ್ಯಾಂಕ್, ಕಾಲಕಾಲಕ್ಕೆ ತರುವ ಭ್ರಷ್ಟಾಚಾರ ವಿರೋಧಿ ಆಡಳಿತಾತ್ಮಕ ಸುಧಾರಣಾ ಪರಿಕಲ್ಪನೆಯ ಮೂಲ ರಾಜಕೀಯ ಶಾಸ್ತ್ರಜ್ಞರ ಮತ್ತು ಅರ್ಥಶಾಸ್ತ್ರಜ್ಞರ ಸಂಶೋಧನೆಯ ಟಿಪ್ಪಣಿಯಲ್ಲಿದೆಯೇ ಹೊರತು ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಜ್ಞರ ಅನುಭವದ ಹೊಳಹಿನಲ್ಲಿಲ್ಲ.

ಇಂಗ್ಲಿಷ್​ನಲ್ಲಿ ಒಂದು ಮಾತಿದೆ: One shoe fits all approach ಅಂತ. ಈ ವಿಚಾರದ ಕುರಿತಾಗಿ ಆ ಮಾತನ್ನು ವಿಶ್ಲೇಷಿಸುವುದಾದರೆ, ಬೇರೆಬೇರೆ ರೀತಿಯಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಒಂದೇ ಮದ್ದಿದೆ ಎಂಬ ನಂಬಿಕೆಯೇ ಮೂಲಭೂತವಾಗಿ ತಪ್ಪು ಕಲ್ಪನೆಯಾಗಿದೆ. ಆದರೆ, ಎಲ್ಲ ಸರಕಾರಗಳು, ಅಂತರಾಷ್ಟ್ರೀಯ ಹಣಕಾಸು ನಿಧಿ ಅಥವಾ ವಿಶ್ವಬ್ಯಾಂಕ್​ನಂಥ ಸಂಸ್ಥೆಗಳು ಈಗಲೂ ಭ್ರಷ್ಟಾಚಾರಕ್ಕೆ ಒಂದೇ ಮದ್ದಿದೆ ಎಂಬ ನಂಬಿಕೆ ಇಟ್ಟುಕೊಂಡು ಕುಳಿತಿವೆ.

ಭ್ರಷ್ಟಾಚಾರವು ಸರಕಾರದ ಮಟ್ಟದಲ್ಲಿ ಮಾತ್ರ ನಡೆಯುತ್ತದೆ ಎಂಬ ನಂಬಿಕೆ ಮೇರೆಗೆ ಭ್ರಷ್ಟಾಚಾರದ ವ್ಯಾಖ್ಯೆ ಮತ್ತು ಅದಕ್ಕನುಗಣವಾಗಿ ಮೂಗಿನ ನೇರಕ್ಕೆ ಮಾಡಿದ ಕಾನೂನುಗಳು, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಕಂಟಕವಾಗಿವೆ. ಕೆಲವು ದೇಶಗಳಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವವರು ತಮ್ಮ ಮೇಲಿನ ಆರೋಪ ಸುಳ್ಳು ಎಂದು ಅವರೇ ಸಾಬೀತು ಮಾಡಬೇಕಾಗುತ್ತದೆ. ಅದನ್ನು ನಮ್ಮಲ್ಲಿ ತಂದರೆ? ಆಡಳಿತದಲ್ಲಿರುವ ಪಕ್ಷ ಕಂಡಕಂಡವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುವ ಸಂಪ್ರದಾಯ ನಮ್ಮಲ್ಲಿ ಇರುವುದರಿಂದ, ಅದನ್ನೇನಾದರೂ ಇಲ್ಲಿ ತಂದರೆ, ನಾಳೆ ನಾವು-ನೀವು ಕೂಡ ಕಂಬಿ ಎಣಿಸಬೇಕಾಗಿ ಬರಬಹುದು.

ನಮಗೆ ಭ್ರಷ್ಟಾಚಾರ ಎಂದರೆ systemic corruption ಅಲ್ಲ. ಇಡೀ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಒಪ್ಪಿಕೊಂಡು ಹೊರಗಡೆ ಭ್ರಷ್ಟಾಚಾರವನ್ನು ಹುಡುಕುತ್ತಿದ್ದೇವೆ. ಭ್ರಷ್ಟಾಚಾರವೆಂದರೆ, ಯಾವುದಾದರೂ ದೊಡ್ಡ ರಾಜಕಾರಿಣಿಯ ಹೆಸರು ಒಂದು ಹಗರಣದ ಜೊತೆ ತಳಕು ಹಾಕಿಕೊಂಡಿರಬೇಕು. ಆಗಲೇ ನಾವು ಮಾತನಾಡುವುದು, ಎದೆಯುಬ್ಬಿಸಿ ಹೋರಾಟಕ್ಕೆ ಅಣಿಯಾಗುವುದು. ನಾವು ಯಾವತ್ತು ವ್ಯವಸ್ಥೆಯಲ್ಲಿರುವ ಭೃಷ್ಟಾಚಾರ ವಿರುದ್ಧ ಹೋರಾಡಿದವರಲ್ಲ. ಅದರ ಬಗ್ಗೆ ನಮಗೆ ಏನೂ ಅನ್ನಿಸುವುದಿಲ್ಲ. ಹಾಗಾಗಿ ನಮ್ಮಲ್ಲಿ, ಭ್ರಷ್ಟಾಚಾರದ ಕೇಸುಗಳಲ್ಲಿ ಬಹಳ ಕಡಿಮೆ ಜನರಿಗೆ ಶಿಕ್ಷೆ ಆಗುತ್ತದೆ. ಬರೆಯಲು ತುಂಬಾ ಇದೆ.

ಅತ್ಯಂತ ಸ್ಥೂಲವಾಗಿ ಈ ಮೂರು ವಿಚಾರಗಳನ್ನು ಗಮನಿಸಿದರೆ ನಮಗೆ ಗೊತ್ತಾಗುತ್ತದೆ, ಯಾಕೆ ಅಣ್ಣಾ ಹಜಾರೆ ಚಳುವಳಿ ವಿಫಲವಾಯಿತು ಎಂದು. ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡಿ ನಾವು ನಮ್ಮ ಸಮಾಜದಲ್ಲಿ ಬದಲಾವಣೆ ತರದಿದ್ದರೆ, ನಾವೇನು ನಮ್ಮ ಮೊಮ್ಮಕ್ಕಳು ಹುಟ್ಟಿ ಬಂದಾಗ, ಅವರು ಸಹ ಅವರ ಕಾಲದ ಅನಿಲ್​ ದೇಶ್​ಮುಖ್​ ಕೇಸನ್ನು ಮತ್ತು ರಕ್ಷಣಾ ಕ್ಷೇತ್ರದ ಭ್ರಷ್ಟಾಚಾರದ ಬಗ್ಗೆ ಕೇಳುತ್ತಾರೆ ಮತ್ತು ಅವರ ಕಾಲದ ಮಾಧ್ಯಮಗಳಲ್ಲಿ ಖಂಡಿತವಾಗಿ ಓದುತ್ತಾರೆ. ಮತ್ತೆ ಆ ಭ್ರಷ್ಟಾಚಾರದ ವಿಷಯವೇ ಚುನಾವಣೆಯ ಪ್ರಮುಖ ವಿಷಯವಾಗಿ ಬಿಂಬಿತವಾಗಿ ನಮ್ಮ ಮೊಮ್ಮಕ್ಕಳಿಗೂ ಆ ಕ್ಷಣದ ಸಂತೃಪ್ತಿಯನ್ನು ತಂದುಕೊಡುವ ಅರಿವಳಿಕೆ ಆಗಬಹುದು.

(Reasons for the failure of Anna Hazare movement and anti corruption crusades in India)

ಇದನ್ನೂ ಓದಿ: ಕೊರೊನಾಕ್ಕೆ ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗುಲಿದ ಭ್ರಷ್ಟಾಚಾರಿ ವೈರಸ್​ಗೆ ಮದ್ದು ಸಿಕ್ಕಿಲ್ಲ: ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ

ಇದನ್ನೂ ಓದಿ: ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು

Published On - 9:07 pm, Mon, 5 April 21

ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ