AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assam Election 2021| ಅಸ್ಸಾಂ ಜನರಿಗೆ ಬೇಕಿರುವುದು ಶಾಂತಿ.. ಹಾಗಾಗಿ ಅವರ ಆದ್ಯತೆ ಎನ್​ಡಿಎ ಒಕ್ಕೂಟಕ್ಕೆ: ಪ್ರಧಾನಿ ಮೋದಿ

ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.

Assam Election 2021| ಅಸ್ಸಾಂ ಜನರಿಗೆ ಬೇಕಿರುವುದು ಶಾಂತಿ.. ಹಾಗಾಗಿ ಅವರ ಆದ್ಯತೆ ಎನ್​ಡಿಎ ಒಕ್ಕೂಟಕ್ಕೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Lakshmi Hegde
|

Updated on: Apr 03, 2021 | 4:15 PM

Share

ಅಸ್ಸಾಂ ಜನರು ಅಭಿವೃದ್ಧಿ, ಶಾಂತಿ, ಐಕ್ಯತೆ, ಸ್ಥಿರತೆಯನ್ನು ಬಯಸುತ್ತಿದ್ದಾರೆ. ಅವರಿಗೆ ಹಿಂಸೆ ಬೇಕಾಗಿಲ್ಲ. ಹೀಗಾಗಿ ಅವರು ಖಂಡಿತ ಎನ್​ಡಿಎ ಒಕ್ಕೂಟದ ಸರ್ಕಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ತಮುಲ್​​ಪುರದಲ್ಲಿ ಚನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಮೋದಿ, ಬಿಜೆಪಿ ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ, ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತಿದೆ. ಆದರೆ ಕೆಲವರು ಮತಕ್ಕಾಗಿ ದೇಶವನ್ನು ಒಡೆಯುತ್ತಿದ್ದಾರೆ. ದುರದೃಷ್ಟವೆಂದರೆ ಅದನ್ನೇ ಜಾತ್ಯತೀತತೆ ಎಂದೂ ಕರೆಯಲಾಗುತ್ತದೆ. ಬಿಜೆಪಿಗೆ ಕೋಮುವಾದಿ ಪಕ್ಷ ಎಂಬ ಹಣೆಪಟ್ಟಿ ಸಿಕ್ಕಿದೆ. ಈ ಜಾತ್ಯತೀತತೆ, ಕೋಮುವಾದಗಳೆಂಬ ಆಟ ದೇಶಕ್ಕೆ ಮಾರಕವಾಗುತ್ತಿದೆ ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಕಿವಿ ಮಾತೊಂದನ್ನು ಹೇಳಿದರು. ಈ ಬಾರಿ ಭಾರತ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ಹೊತ್ತಲ್ಲಿ ನೀವು ಚಲಾಯಿಸುವ ಮತ, 100ನೇ ವರ್ಷದ ಸ್ವಾತಂತ್ರ್ಯೋತ್ಸವದ ವೇಳೆ ಅಸ್ಸಾಂನ ಅಭಿವೃದ್ಧಿಯನ್ನು ನಿರ್ಧಿಸುತ್ತದೆ. ಬಿಜೆಪಿಯ ರೆಸಲ್ಯೂಶನ್​ ಪತ್ರದಲ್ಲಿ ಅಸ್ಸಾಂ ಅಭಿವೃದ್ಧಿಗೆ ಸ್ಪಷ್ಟವಾದ ಮಾರ್ಗಸೂಚಿ ಇದೆ ಎಂದು ಮೋದಿ ಹೇಳಿದರು.

ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿದ ಮೋದಿ, ಕಾಂಗ್ರೆಸ್​ನ ಮೈತ್ರಿ ಪಕ್ಷವಾದ ಎಐಯುಡಿಎಫ್​ ಸಂಸ್ಥಾಪಕ ಮತ್ತು ಸಂಸದ ಬದ್ರುದ್ದೀನ್​ ಅಜ್ಮಲ್ ಪುತ್ರ, ಅಬ್ದುರ್​ ರಹೀಂ ಮಾತಿಗೆ ಖಡಕ್​ ತಿರುಗೇಟು ನೀಡಿದರು. ಶುಕ್ರವಾರ ಮಾತನಾಡಿದ್ದ ಅಬ್ದುರ್​ ರಹೀಮ್​, ಈ ಬಾರಿ ಅಸ್ಸಾಂನಲ್ಲಿ ದಾಡಿ, ಲುಂಗಿ, ಟೋಪಿವಾಲಾಗಳು ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಹೇಳಿದರು. ಇಂದು ಅದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ, ಅಬ್ದುರ್​, ಅಸ್ಸಾಂ ಜನರಿಗೆ ಬಹುದೊಡ್ಡ ಅವಮಾನ ಮಾಡಿದ್ದಾರೆ. ಅಸ್ಸಾಂನ ಗೌರವ, ಘನತೆಗೆ ಅವಮಾನ ಮಾಡಿದ್ದನ್ನು ನಾನು ಸಹಿಸುವುದಿಲ್ಲ. ಈ ಧೋರಣೆಗೆ ಅಸ್ಸಾಮಿಗರು ಖಂಡಿತ ಕಟು ತಿರುಗೇಟು ನೀಡುತ್ತಾರೆ ಎಂದು ಹೇಳಿದರು. ಹಾಗೇ, ಅಸ್ಸಾಂನ ಉಗ್ರರಿಗೆ ಬಂದು ಶರಣಾಗುವಂತೆ ಕರೆ ಕೊಟ್ಟರು. ನೀವೂ ಮುಖ್ಯವಾಹಿನಿಗೆ ಬನ್ನಿ, ಆತ್ಮ ನಿರ್ಭರ ಅಸ್ಸಾಂ ನಿರ್ಮಾಣಕ್ಕಾಗಿ ದುಡಿಯಿರಿ ಎಂದರು.

ಇದನ್ನೂ ಓದಿ: Tamil Nadu Election 2021: ತಮಿಳುನಾಡಿನಲ್ಲಿ ಅಮಿತ್​ ಶಾ ಪ್ರಚಾರ; ಅಭಿವೃದ್ಧಿ ನಮ್ಮಿಂದ ಮಾತ್ರ ಸಾಧ್ಯವೆಂದ ಗೃಹ ಸಚಿವ

IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್​ ಪಟೇಲ್​.. ಆತಂಕದಲ್ಲಿ ಧವನ್, ಪಂತ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ