Bengaluru Night Curfew: ನೈಟ್ ಕರ್ಫ್ಯೂ ಶುರು: ಬೆಂಗಳೂರಿನ ರಸ್ತೆಗಳು ಬಂದ್; ರಸ್ತೆ ರಸ್ತೆಗಳಲ್ಲೂ ಖಾಕಿ ಕಾವಲು
Bangalore Corona Curfew : ವೈದ್ಯಕೀಯ ತುರ್ತು ಹೊರತುಪಡಿಸಿ ಅನಿವಾರ್ಯ ಸೇವೆ ಇರುವವರಿಗೆಡ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತಿದೆ.
ಬೆಂಗಳೂರು: ರಾತ್ರಿ 10 ಗಂಟೆಯಾಗಿದೆ. ಇಂದಿನಿಂದಲೇ ನೈಟ್ ಕರ್ಫ್ಯೂ ಶುರುವಾಗಿದೆ. ಎಂಜಿ ರಸ್ತೆಯಿಂದ ಬ್ರಿಗೇಡ್ ಕಡೆ ಹೋಗುವ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದಾರೆ. ಒಂದು ವೇಳೆ ವಾಹನಗಳ ಓಡಾಟ ಕಂಡುಬಂದಲ್ಲಿ ಯಾವ ಕಾರಣಕ್ಕಾಗಿ ಓಡಾಟ ನಡೆಸಲಾಗುತ್ತಿದೆ ಎಂದು ವಿಚಾರಿಸುತ್ತಿದ್ದಾರೆ. ವೈದ್ಯಕೀಯ ತುರ್ತು ಹೊರತುಪಡಿಸಿ ಅನಿವಾರ್ಯ ಸೇವೆ ಇರುವವರಿಗೆಡ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತಿದೆ. ಕೇವಲ ಒನ್ ವೇಯಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಹಲವರು ಎಂಜಿ ರಸ್ತೆಯಲ್ಲಿ ಕ್ಯಾಬ್ ಬುಕ್ ಮಾಡಿಕೊಂಡು ಕಾಯುತ್ತಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರು ನಗರದ ಹಲವೆಡೆ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಸೇರಿದ್ದ ಜನರು ಮಾಸ್ಕ್ ಧರಿಸದೆ, ದೈಹಿಕ ಅಂತರ ಉಲ್ಲಂಘಿಸಿ ಜಮಾವಣೆ ಆದ ಘಟನೆಯೂ ನಡೆಯಿತು. ವಿ.ವಿ.ಪುರಂನ ಫುಡ್ ಸ್ಟ್ರೀಟ್ನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಕೊರೊನಾ ಬಗ್ಗೆ ಯಾವುದೇ ಭಯವಿಲ್ಲದೆ ಜನರು ಸೇರಿದ್ದರು. ಇದನ್ನು ಗಮನಿಸಿದ ಟಿವಿ9 ಸುದ್ದಿ ಪ್ರಸಾರ ಮಾಡಿತು. ವೇಳೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಜನರನ್ನು ಮನೆಗೆ ಕಳುಹಿಸಿದರು.
ಬಾರ್ ಮುಂದೆ ಕುಡುಕರ ಬಡಿದಾಟ ಘಟನೆಯೂ ನೈಟ್ ಕರ್ಫ್ಯೂವಿಗೂ ಮುನ್ನ ನಡೆಯಿತು. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಕುಮಾರ್ ಬಾರ್ ಅ್ಯಂಡ್ ರೆಸ್ಟೋರೆಂಟ್ ಬಳಿ ಮದ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ರಾತ್ರಿ 10ಗಂಟೆ ನಂತರ ಬಾರ್ ಬಂದ್ ಆಗುವ ಕಾರಣ ಪಾನಮತ್ತರಾಗಿ ಪರಸ್ಪರ ಬಡಿದಾಟ ನಡೆಸಿಕೊಂಡರು. ಬಾಗಲಗುಂಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಯಿತು.
LIVE NEWS & UPDATES
-
ಪಾದರಾಯನಪುರದಲ್ಲಿ ಸ್ವಲ್ಪ ಮಟ್ಟಿಗೆ ಜನರ ಓಡಾಟ
ಪಾದರಾಯನಪುರದಲ್ಲಿ ಸ್ವಲ್ಪ ಮಟ್ಟಿಗೆ ಜನರ ಓಡಾಟ ಕಂಡುಬರುತ್ತಿದೆ. ಗಲ್ಲಿಗಲ್ಲಿಯಲ್ಲಿರುವ ಕೆಲ ಅಂಗಡಿಗಳು ಇನ್ನೂ ಬಂದ್ ಆಗಿಲ್ಲ. ಈ ಹಿಂದೆ ಪಾದರಾಯನಪುರ ಕೊರೊನಾ ಹಾಟ್ಸ್ಪಾಟ್ ಆಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
-
8ನೇ ಮೈಲಿ ನವಯುಗ ಟೋಲ್ ಬಳಿ ಫ್ಲೈಒವರ್ ಬಂದ್
ಬೆಂಗಳೂರಿನ 8ನೇ ಮೈಲಿ ನವಯುಗ ಟೋಲ್ ಬಳಿ ಫ್ಲೈಒವರ್ ಬಂದ್ ಆದ ಕಾರಣ ಆ್ಯಂಬುಲನ್ಸ್ಗೆ ಸಂಚರಿಸಲು ತೊಡಕುಂಟಾಯಿತು. ಕೆಲ ನಿಮಿಷಗಳ ಬಳಿಕ 8ನೇ ಮೈಲಿ ನವಯುಗ ಟೋಲ್ ಸರ್ವೀಸ್ ರಸ್ತೆಯಲ್ಲಿ ಆ್ಯಂಬುಲನ್ಸ್ ತೆರಲಿದ ಘಟನೆ ನಡೆಯಿತು.
-
ಏರ್ಪೋರ್ಟ್ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚಾರ; 11 ಗಂಟೆಯ ನಂತರ ಬಂದ್
ರಾಜಧಾನಿಯಲ್ಲಿ ನೈಟ್ ಕರ್ಫ್ಯೂ ಜಾರಿಯಾದರೂ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಂತಿಲ್ಲ. ಏರ್ಪೋರ್ಟ್ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಸಂಚಾರ ನಡೆಯುತ್ತಿದೆ. 10 ಗಂಟೆಯಾದರೂ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ ಮತ್ತು ಕಾರುಗಳು ಬರುತ್ತಿವೆ. ವಾಹನ ದಟ್ಟಣೆ ಹೆಚ್ಚಿರುವ ಕಾರಣ ಫ್ಲೈ ಒವರ್ನ್ನು ಪೊಲೀಸರು ಬಂದ್ ಮಾಡಿಲ್ಲ. ಸದ್ಯ ವಾಹನಗಳು ಸಂಚರಿಸಲು ಕಾಲಾವಕಾಶ ನೀಡಿ 11 ಗಂಟೆಯ ನಂತರ ಪ್ಲೈ ಒವರ್ ಬಂದ್ ಮಾಡುವ ಸಾಧ್ಯತೆ ಹೆಚ್ಚಿದೆ.
ಹತ್ತು ಗಂಟೆ ನಂತರವೂ ಅಂಗಡಿಗಳನ್ನು ತೆರೆದಿದ್ದವರಿಗೆ ಪೊಲೀಸರ ವಾರ್ನಿಂಗ್
ಕೆ.ಆರ್.ಪುರಂ ವ್ಯಾಪ್ತಿಯಲ್ಲಿನ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಹತ್ತು ಗಂಟೆ ನಂತರವೂ ಅಂಗಡಿಗಳನ್ನು ತೆರೆದಿದ್ದವರಿಗೆ ಪೊಲೀಸರು ವಾರ್ನಿಂಗ್ ನೀಡುತ್ತಿದ್ದಾರೆ. ಕೆಆರ್ ಪುರಂ, ಐಟಿಐ ಹಾಗೂ ಭಟ್ರಹಳ್ಳಿ ಗೇಟ್ನಲ್ಲಿ ಅಂಗಡಿಗಳು ಬಂದ್ ಆಗಿವೆ. ಬಂದ್ ಆಗದ ಅಂಗಡಿಗಳಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ ಬಾರ್ ಮುಂದೆ ಕುಡುಕರ ಬಡಿದಾಟ
ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ ಬಾರ್ ಮುಂದೆ ಕುಡುಕರ ಬಡಿದಾಟ ಘಟನೆಯೂ ನಡೆಯಿತು. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಕುಮಾರ್ ಬಾರ್ ಅ್ಯಂಡ್ ರೆಸ್ಟೋರೆಂಟ್ ಬಳಿ ಮದ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ರಾತ್ರಿ 10ಗಂಟೆ ನಂತರ ಬಾರ್ ಬಂದ್ ಆಗುವ ಕಾರಣ ಪಾನಮತ್ತರಾಗಿ ಪರಸ್ಪರ ಬಡಿದಾಟ ನಡೆಸಿಕೊಂಡರು. ಬಾಗಲಗುಂಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುಡುಕರ ಬಡಿದಾಟ ರಸ್ತೆಯಲ್ಲಿ ತೆರಳುವ ಜನರಿಗೆ ಮನರಂಜನೆ ನೀಡಿತು.
Published On - Apr 10,2021 10:57 PM