ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ಮೀನುಗಳು, ಬಾತುಕೋಳಿಗಳ ಸಾವು; ವಿಷಯುಕ್ತ ಮೇವು ಸೇವಿಸಿ 60 ಕುರಿಗಳು ಮೃತ

ಮೈಸೂರಿನ ಆಲನಹಳ್ಳಿ ಹೊರವಲಯದ ತಿಪ್ಪಯ್ಯನ ಕೆರೆಗೆ ಯುಜಿಡಿ ನೀರು ಸೇರುತ್ತಿದೆ ಎಂದು ಆರೋಪಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ಮೀನುಗಳು, ಬಾತುಕೋಳಿಗಳ ಸಾವು; ವಿಷಯುಕ್ತ ಮೇವು ಸೇವಿಸಿ 60 ಕುರಿಗಳು ಮೃತ
ಸಾವನ್ನಪ್ಪಿರುವ ಕುರಿಗಳು
Follow us
| Updated By: sandhya thejappa

Updated on:Mar 31, 2022 | 9:21 AM

ಮೈಸೂರು: ತಿಪ್ಪಯ್ಯನ ಕೆರೆಯಲ್ಲಿ ಮೀನುಗಳು (Fishes) ಮತ್ತು ಬಾತುಕೋಳಿಗಳು (Ducks) ಸಾವನ್ನಪ್ಪಿದ್ದು, ಕೆರೆಯಲ್ಲಿ ನೀರು ಕಲುಷಿತವಾಗಿದ್ದರಿಂದ ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ. ಮೈಸೂರಿನ ಆಲನಹಳ್ಳಿ ಹೊರವಲಯದ ತಿಪ್ಪಯ್ಯನ ಕೆರೆಗೆ ಯುಜಿಡಿ ನೀರು ಸೇರುತ್ತಿದೆ ಎಂದು ಆರೋಪಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ. ಕೆರೆ ಮೈಸೂರಿನ ಮೃಗಾಲಯ ನಿರ್ವಹಣೆಯಲ್ಲಿದೆ. ಸದ್ಯ ಸ್ಥಳಕ್ಕೆ ಮೃಗಾಲಯದ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಷಯುಕ್ತ ಮೇವು ಸೇವಿಸಿ 60 ಕುರಿಗಳು ಸಾವು: ಮೈಸೂರಿನ ಕೆಆರ್ ನಗರ ತಾಲೂಕಿನ ಬಸವಾಪಟ್ಟಣದಲ್ಲಿ ವಿಷಯುಕ್ತ ಮೇವು ಸೇವಿಸಿ ಸುಮಾರು 60 ಕುರಿಗಳು ಸಾವನ್ನಪ್ಪಿವೆ. ರೈತ ಸಿದ್ದೇಗೌಡ, ಹೆಳವೇಗೌಡರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ರೈತರು ಮೂಲತಃ ಮಂಡ್ಯ ಜಿಲ್ಲೆಯವರು. 200 ಕುರಿಗಳನ್ನು ಮೇಯಿಸಲು ಕರೆ ತಂದಿದ್ದರು. ಈ ವೇಳೆ ಸುಮಾರು 60 ಕುರಿಗಳು ಸಾವನ್ನಪ್ಪಿದ್ದು, ಕುರಿಗಳ ಸಾವಿನಿಂದ ಸುಮಾರ 15 ಲಕ್ಷ ನಷ್ಟವಾಗಿದೆ. ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಲಾರಿ ಡಿಕ್ಕಿ, ಚಾಲಕ ಸಾವು: ಚಿತ್ರದುರ್ಗ: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ತಮಿಳುನಾಡು ಮೂಲದ ಲಾರಿ ಚಾಲಕ ಕವಿಅರಸನ್(44) ಮೃತ ವ್ಯಕ್ತಿ. ಮತ್ತೋರ್ವ ಚಾಲಕನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಸಾರಿ ಕೇಳುವುದರಿಂದ ನಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತಾ..! ಹಾಗಾದ್ರೆ ಈ ವಿಡಿಯೋ ನೋಡಿ

ಇನ್ಫ್ರಾ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸೋದು ಹೇಗೆ..! ಇಲ್ಲಿದೆ ಮಾಹಿತಿ

Published On - 9:09 am, Thu, 31 March 22