AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ನಿನ್ನೆ ಸಂಜೆ ಮುನಿಸಿಕೊಂಡು ಮನೆಯಿಂದ ಹೋಗಿದ್ದ ಸೋದರಿಯರ ಮೃತದೇಹಗಳು ಕಂದವಾರ ಕೆರೆಯಲ್ಲಿ ಪತ್ತೆ

ಕೆರೆಯಲ್ಲಿ ಅಶ್ವಿನಿ(16), ನಿಶ್ಚಿತಾ(14) ಮೃತದೇಹ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ನಿವಾಸಿಗಳಾದ ಅಶ್ವಿನಿ ಮತ್ತು ನಿಶ್ಚಿತಾ ನಿನ್ನೆ (ಮಾರ್ಚ್ 26) ಮನೆಯಿಂದ ಹೋಗಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಸದ್ಯ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ: ನಿನ್ನೆ ಸಂಜೆ ಮುನಿಸಿಕೊಂಡು ಮನೆಯಿಂದ ಹೋಗಿದ್ದ ಸೋದರಿಯರ ಮೃತದೇಹಗಳು ಕಂದವಾರ ಕೆರೆಯಲ್ಲಿ ಪತ್ತೆ
ಅಶ್ವಿನಿ(16), ನಿಶ್ಚಿತಾ(14)
TV9 Web
| Edited By: |

Updated on:Mar 27, 2022 | 7:59 PM

Share

ಚಿಕ್ಕಬಳ್ಳಾಪುರ: ನಿನ್ನೆ ಸಂಜೆ ಮುನಿಸಿಕೊಂಡು ಮನೆಯಿಂದ ಹೋಗಿದ್ದ ಸಹೋದರಿಯರ ಮೃತದೇಹಗಳು (dead body) ಇಂದು ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ(Lake) ಪತ್ತೆಯಾಗಿದೆ. ಕೆರೆಯಲ್ಲಿ ಅಶ್ವಿನಿ(16), ನಿಶ್ಚಿತಾ(14) ಮೃತದೇಹ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ನಿವಾಸಿಗಳಾದ ಅಶ್ವಿನಿ ಮತ್ತು ನಿಶ್ಚಿತಾ ನಿನ್ನೆ (ಮಾರ್ಚ್ 26) ಮನೆಯಿಂದ ಹೋಗಿದ್ದರು. ಆತ್ಮಹತ್ಯೆ( Suicide) ಮಾಡಿಕೊಂಡಿರುವ ಶಂಕೆ ಸದ್ಯ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮರಳು ಸಾಗಣೆ ಟಿಪ್ಪರ್​ ಡಿಕ್ಕಿ; 8 ವರ್ಷದ ಬಾಲಕ ಸಾವು

ಕಲಬುರಗಿ ನಗರದ ಹೈಕೋರ್ಟ್ ಬಳಿ ಮರಳು ಸಾಗಣೆ ಟಿಪ್ಪರ್​​ ಡಿಕ್ಕಿ ಹೊಡೆದು 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬಿದ್ದಾಪುರ ಕಾಲೋನಿಯ ಮನೀಶ್​​(8) ಮೃತ ದುರ್ದೈವಿ. ಘಟನೆ ಬಳಿಕ ಟಿಪ್ಪರ್​​​ಗೆ ಬೆಂಕಿ ಹಚ್ಚಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರಗಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಪತ್ನಿಯ ಅಗಲಿಕೆಯ ನೋವು ತಾಳಲಾರದೆ ಪತಿ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಹಂಚ್ಯಾ ಗ್ರಾಮದಲ್ಲಿ ಪತ್ನಿಯ ಅಗಲಿಕೆಯ ನೋವು ತಾಳಲಾರದೆ ಮಾತ್ರೆ ಸೇವಿಸಿ ಪತಿ ಮಹೇಶ್(45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಮಹೇಶ್ ಪತ್ನಿ ಗಾಯಿತ್ರಿ ಮೃತಪಟ್ಟಿದ್ದರು. ಪತ್ನಿ ಸಾವಿನ ನಂತರ ಮಾನಸಿಕವಾಗಿ ಮಹೇಶ್​ ನೊಂದಿದ್ದರು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಳಗಾವಿ: ಯಡೂರುವಾಡಿ ಬಳಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಹತ್ಯೆ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ಬಳಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿದ್ದಾರೆ. ಗದ್ದೆಯೊಂದರಲ್ಲಿ ಅನಿಲ್ ಬಾಳು ಸವಳೆಯನ್ನು(30) ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಂಕಲಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಹಾವೇರಿ: ಲಾರಿ ಡಿಕ್ಕಿ, ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರ ಸಾವು

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೀತಾ ದಾವಣಗೆರೆ (34) ಮತ್ತು ಮಂಜುಳಾ (36) ಮೃತರು. ದಾವಣಗೆರೆಯಿಂದ ಕಾರವಾರಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ರಾಣೆಬೆನ್ನೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿ ಸಾವು ಪ್ರಕರಣ; ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ಹಾಸನ: ಕೆರೆಯ ಏರಿ ಮೇಲೆ ಕಾರು ಭಸ್ಮ, ಹಿಂಬದಿ ಸೀಟ್ ಕೆಳಗೆ ಸುಟ್ಟು ಕರಕಲಾದ ಮೃತದೇಹ ಪತ್ತೆ

Published On - 7:39 pm, Sun, 27 March 22