AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸ್ಫೋಟ ಪ್ರಕರಣ: ಖಾಸಗಿ ಸಂಸ್ಥೆಯಿಂದ ‘ವಿಧಾನಸೌಧದಲ್ಲಿ ಬಾಂಬ್ ಡಿಟೆಕ್ಷನ್ ಪ್ರಾತ್ಯಕ್ಷಿಕೆ’ ಸ್ವೀಕರಿಸಿದ ಸ್ಪೀಕರ್

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಿರುವುದರಿಂದ ಎಚ್ಚೆತ್ತಿರುವ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ವಿಧಾನಸೌಧದಲ್ಲಿ ಭದ್ರತೆ ಹೆಚ್ಚಿಸಲು ಮುಂದಾಗಿದ್ದಾರೆ. ಅದರಂತೆ, ಖಾಸಗಿ ಸಂಸ್ಥೆಯೊಂದು ವಿಧಾನಸೌಧದಲ್ಲಿ ಬಾಂಬ್ ಡಿಟೆಕ್ಷನ್ ಪ್ರಾತ್ಯಕ್ಷಿಕೆ ಸಲ್ಲಿಸಿದೆ. ಈ ಬಗ್ಗೆ ಸಿಎಂ ಮತ್ತು ಗೃಹ ಸಚಿವರನ್ನು ಚರ್ಚಿಸಲು ಯುಟಿ ಖಾದರ್ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಸ್ಫೋಟ ಪ್ರಕರಣ: ಖಾಸಗಿ ಸಂಸ್ಥೆಯಿಂದ 'ವಿಧಾನಸೌಧದಲ್ಲಿ ಬಾಂಬ್ ಡಿಟೆಕ್ಷನ್ ಪ್ರಾತ್ಯಕ್ಷಿಕೆ' ಸ್ವೀಕರಿಸಿದ ಸ್ಪೀಕರ್
ಬೆಂಗಳೂರಿನಲ್ಲಿ ಸ್ಫೋಟ ಪ್ರಕರಣ: ವಿಧಾನಸೌಧದಲ್ಲಿ ಬಾಂಬ್ ಡಿಟೆಕ್ಷನ್ ಪ್ರಾತ್ಯಕ್ಷಿಕೆ ನೀಡಿದ ಖಾಸಗಿ ಸಂಸ್ಥೆ
ಕಿರಣ್​ ಹನಿಯಡ್ಕ
| Updated By: Rakesh Nayak Manchi|

Updated on: Mar 05, 2024 | 9:47 PM

Share

ಬೆಂಗಳೂರು, ಮಾ.5: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬಾಂಬ್ ಸ್ಫೋಟ (Bomb Blast) ಪ್ರಕರಣಗಳು ನಡೆಯುತ್ತಿರುವುದರಿಂದ ಎಚ್ಚೆತ್ತಿರುವ ವಿಧಾನಸೌಧದಲ್ಲಿ (Vidhana Soudha) ಭದ್ರತೆ ಹೆಚ್ಚಿಸಲು ಚಿಂತಿಸಲಾಗಿದ್ದು, ಖಾಸಗಿ ಸಂಸ್ಥೆಯೊಂದು ವಿಧಾನಸೌಧದಲ್ಲಿ ಬಾಂಬ್ ಡಿಟೆಕ್ಷನ್ ಪ್ರಾತ್ಯಕ್ಷಿಕೆಯನ್ನು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಅವರಿಗೆ ಸಲ್ಲಿಕೆ ಮಾಡಿದೆ.

ತರಬೇತಿ ಹೊಂದಿರುವ ಶ್ವಾನ ಸ್ಫೋಟಕ ವಸ್ತು ಪತ್ತೆ ಹಚ್ಚುವ ಪ್ರಾತ್ಯಕ್ಷಿಕೆಯನ್ನು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಖಾಸಗಿ ಸಂಸ್ಥೆ ಸಲ್ಲಿಕೆ ಮಾಡಿದೆ. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಸಂಭವಿಸಿರುವ ಹಿನ್ನೆಲೆ ವಿಧಾನಸೌಧದಲ್ಲಿ ಭದ್ರತೆ ಹೆಚ್ಚಿಸಲು ಚಿಂತಿಸಿರುವ ಸ್ಪೀಕರ್ ಯುಟಿ ಖಾದರ್, ಖಾಸಗಿ ಸಂಸ್ಥೆಯಿಂದ ಬಾಂಬ್ ಡಿಟೆಕ್ಷನ್ ಪ್ರಾತ್ಯಕ್ಷಿಕೆ ಸ್ವೀಕರಿಸಿದರು. ಈ ಕುರಿತು ಯುಟಿ ಖಾದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ ಮಾತ್ರವಲ್ಲ, ವಿಧಾನಸೌಧದಲ್ಲಿ ಆಗಿತ್ತು ಭದ್ರತಾ ಲೋಪ: ತನಿಖೆ ವೇಳೆ ಬಯಲಿಗೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡ ಘಟನೆಗಳು ಈ ಹಿಂದೆ ನಡೆದಿದೆ. ಇತ್ತೀಚೆಗೆ (ಮಾರ್ಚ್ 1), ನಗರದ ವೈಟ್​ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಸಿಸಿ ಟಿವಿ ದೃಶ್ಯಗಳು ಸಿಗುತ್ತಿವೆಯೇ ಹೊರತು, ಶಂಕಿತ ಉಗ್ರ ಎಲ್ಲಿದ್ದಾನೆ ಎನ್ನುವ ಸುಳಿವು ಇದುವರೆಗೆ ಸಿಕ್ಕಿಲ್ಲ. ಒಂದೆಡೆ ಎಫ್​ಎಸ್​ಎಲ್ ತಂಡ, ಇನ್ನೊಂದೆಡೆ ಸಿಸಿಬಿ ಮತ್ತು ಎನ್​ಐಎ ಅಧಿಕಾರಿಗಳ ತಂಡ ತೀವ್ರ ತನಿಖೆ ನಡೆಸುತ್ತಿದೆ. ಈ ನಡುವೆ, ಬಾಂಬ್ ಬೆದರಿಕೆ ಇಮೇಲ್ ಬಂದಿದೆ.

ರಾಮೇಶ್ವರಂ ಕೆಫೆ ರೀತಿ ಬಸ್, ರೈಲ್ವೇ ಸ್ಟೇಷನ್​ಗಳಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಸಿಎಂ, ಗೃಹ ಸಚಿವ, ಡಿಸಿಎಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇಮೇಲ್​ ಸಂದೇಶ ರವಾನಿಸಲಾಗಿದೆ. ಬೆದರಿಕೆ ಸಂದೇಶ 10786progongmail.com ಎನ್ನುವ ಮೇಲ್ ಐಡಿಯಿಂದ ಬಂದಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರು ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶಗಳನ್ನು ಕಳುಹಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ