ಚೆನ್ನೈ ಮನೆಗೆ ಹೊಯ್ತು, ಈ ಸಲ ಕಪ್ ನಮ್ದೆ: ಗ್ರಾಮದಲ್ಲಿ ಡಂಗೂರ ಸಾರಿದ ಅಭಿಮಾನಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಗೆಲುವು ಸಾಧಿಸಿ ಐಪಿಎಲ್ 2024ರ ಪ್ಲೇ ಆಫ್ಗೆ ಪ್ರವೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿಯ ಹೊಸ ಅಧ್ಯಾಯ ಶುರುವಾಗಿದ್ದು, ಆರ್ಸಿಬಿಯ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರುವ ಖುಷಿಯಲ್ಲಿ ಅಭಿಮಾನಿಯೋರ್ವ ಗ್ರಾಮದಲ್ಲಿ ಡಂಗೂರ ಸಾರಿ ಈ ಸಲ ಕಪ್ ನಮ್ದೆ ಎಂದು ಸ್ಪೇಷಲ್ ಸೆಲೆಬ್ರೆಷನ್ ಮಾಡಿದ್ದಾನೆ. ಆ ವಿಡಿಯೋ ಇಲ್ಲಿದೆ ನೋಡಿ.
ಕಲಬುರಗಿ, (ಮೇ 19): ಅಂತೂ ಇಂತೂ ಆರ್ಸಿಬಿ ಲೀಗ್ ಕೊನೆ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಐಪಿಎಲ್ನ ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮಧ್ಯರಾತ್ರಿಯಾಗಿದ್ರೂ ಅವ್ರ ಸಂತಸಕ್ಕೆ ಕುಂದುಟಾಗಿಲ್ಲ. ಆರ್ಸಿಬಿ ಜಯಘೋಷ.. ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮ.. ಮಧ್ಯರಾತ್ರಿಯೆಲ್ಲ ಸಡಗರವೋ ಸಡಗರ.. ಮುಗಿಲು ಮುಟ್ಟಿದ ಅಭಿಮಾನಿಗಳ ಹರ್ಷೋದ್ಘಾರ.. ನಿನ್ನೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತ್ತು. ಇನ್ನು ಆರ್ಸಿಬಿ ಗೆಲುವಿಗಾಗಿ ಅಭಿಮಾನಿಗಳು ಹೊತ್ತುಕೊಂಡಿದ್ದ ಹರಿಕೆಗಳನ್ನು ತೀರುಸುತ್ತಿದ್ದಾರೆ. ಇನ್ನು ಚೆನೈ ವಿರುದ್ದ ಗೆದ್ದು ಆರ್ ಸಿಬಿ ಗೆದ್ದು ಪ್ಲೇಆಫ್ ಪ್ರವೇಶಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಯುವಕನೋರ್ವ ಡಂಗೂರ ಸಾರಿದ್ದಾನೆ. ದೌಲಪ್ಪ ಅಲಿಯಾಸ್ ಮಲ್ಲು ಎನ್ನುವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಂಗೂರ ಹಾಕುತ್ತ,ಚೆನ್ನೈ ಮನೆಗೆ ಹೋಗಿದೆ. ಈ ಬಾರಿ ಕಪ್ ನಮ್ದೆ ಎಂದು ಹೇಳಿಕೊಂಡು ಸುತ್ತಾಡಿದ್ದಾನೆ.