
Nagaland: ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ಚಟುವಟಿಕೆಯಿಂದ ತಮ್ಮ ಫಾಲೋವರ್ಗಳ ಗಮನ ಸೆಳೆಯುತ್ತಿರುತ್ತಾರೆ. ವಿನೋದಮಯ ಪ್ರವೃತ್ತಿಯಿಂದ ಎಲ್ಲರೆಲ್ಲರೂ ಉತ್ಸಾಹದಿಂದ ತಮ್ಮ ಪೋಸ್ಟ್ನೆಡೆ ಪ್ರತಿಕ್ರಿಯಿಸುವಂತೆ ಮಾಡುತ್ತಿರುತ್ತಾರೆ. ಇದೀಗ ತೆಮ್ಜೆನ್ ವಡಾ ಪಾವ್ (Vada Pav) ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ವಿಡಿಯೋ ನೋಡಿದವರೆಲ್ಲರಿಗೂ ಖಂಡಿತ ಬಾಯಲ್ಲಿ ನೀರೂರುವುದು ಗ್ಯಾರಂಟೀ, ಅಷ್ಟೊಂದು ಅಚ್ಚುಕಟ್ಟಾಗಿ ವಡಾ ಪಾವ್ ತಯಾರಿಸಿದ್ದಾರೆ. Xನಲ್ಲಿ ಅ.9ರಂದು ಈ ವಿಡಿಯೋ ಹಂಚಿಕೊಂಡಿದ್ದಾರೆ. ನೀವು ಪ್ರತಿಭಾವಂತರು, ಸಕಲಕಲಾವಲ್ಲಭರು ಅಂತೆಲ್ಲ ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಇಂಡಿಯನ್ ಐಡಲ್; ಆಡಿಷನ್ನಲ್ಲಿ ಶ್ರೇಯಾ ಘೋಷಾಲ್ ಅತ್ತಿದ್ದು ಈ ಕಾರಣಕ್ಕೆ
ಸಚಿವರು ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ ಕತ್ತರಿಸುತ್ತಾರೆ. ಬೇಯಿಸಿದ ಆಲೂಗಡ್ಡೆಯನ್ನು ಹಿಸುಕುತ್ತಾರೆ. ನಂತರ ಕಡಲೆಹಿಟ್ಟಿನಲ್ಲಿ ಆಲೂಗಡ್ಡೆ ಉಂಡೆಯನ್ನು ಅದ್ದಿ ಕರಿಯುತ್ತಾರೆ. ಪಾವ್ನ ಮಧ್ಯೆ ಇಟ್ಟು ಸವಿಯುತ್ತಾರೆ ಮತ್ತು ಅಲ್ಲಿದ್ದವರಿಗೆ ಸವಿಯಲು ಹೇಳುತ್ತಾರೆ.
ಈತನಕ 37,000 ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 2,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 177 ಜನರು ರೀಪೊಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಒಳ್ಳೆಯ ಸ್ಟಾರ್ಟರ್, ಹಾಗಿದ್ದರೆ ಊಟಕ್ಕೇನು ನಮಗೆ? ಎಂದು ಕೇಳಿದ್ದಾರೆ ಒಬ್ಬರು. ನೀವು ಅತ್ಯಂತ ಪ್ರತಿಭಾವಂತರು, ಮುಂದಿನ ಸಲ ದಯವಿಟ್ಟು ಬಂಗಾಳಿ ಖಾದ್ಯ ತಯಾರಿಸಿದ್ದಾರೆ ಇನ್ನೊಬ್ಬರು. ಲವ್ ಫ್ರಂ ಮಹಾರಾಷ್ಟ್ರ, ಮಿಸಳ್ ಪಾವ್ ತಯಾರಿಸಿ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು
ಮಹಾರಾಷ್ಟ್ರದ ಈ ಖಾದ್ಯ ಆಹಾ, ಬಹಳ ರುಚಿಯಾಗಿರುವಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ಅದ್ಭುತ ಸರ್, ಬಾಯಿಯಲ್ಲಿ ನೀರೂರುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಸರ್ ನೀವು ರಾಜಕೀಯ ಬಿಟ್ಟು ಪೂರ್ಣಪ್ರಮಾಣದಲ್ಲಿ ಇದೇ ವೃತ್ತಿಯಲ್ಲಿ ತೊಡಗಿಕೊಳ್ಳಿ, ಇದು ನಿಮಗೆ ಸರಿಹೊಂದುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ