Viral: ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ ಟೈಮ್‌ ಸ್ಕ್ವೇರ್‌ ಬಳಿ ಅದ್ಧೂರಿ ದುರ್ಗಾ ಪೂಜೆ ಆಚರಿಸಿದ ಭಾರತೀಯರು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 9:45 AM

ಪ್ರಸ್ತುತ ದೇಶಾದ್ಯಂತ ಬಹಳ ಅದ್ಧೂರಿಯಾಗಿ ನವರಾತ್ರಿ ಉತ್ಸವ ನಡೆಯುತ್ತಿದೆ. ಅದೇ ರೀತಿ ಅಮೇರಿಕಾದಲ್ಲಿರುವ ಭಾರತೀಯರು ಕೂಡಾ ಇದೇ ಮೊಟ್ಟ ಮೊದಲ ಬಾರಿಗೆ ನವರಾತ್ರಿಯ ಪ್ರಯುಕ್ತ ನ್ಯೂಯಾರ್ಕ್‌ ಸಿಟಿಯ ಟೈಮ್‌ ಸ್ಕ್ವೇರ್‌ ಬಳಿ ದುರ್ಗಾ ಪೂಜೆಯನ್ನು ಆಚರಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ತಾಯಿ ಜಗನ್ಮಾತೆಯ ಆರಾಧನೆ ಜೋರಾಗಿ ನಡೆಯುತ್ತಿದೆ. ನವ ದುರ್ಗೆಯರ ಪೂಜೆಯ ಜೊತೆ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ನಡೆಯುತ್ತಿದೆ. ಭಕ್ತರು ಪ್ರತಿನಿತ್ಯ ಶ್ರದ್ಧಾಭಕ್ತಿಯಿಂದ ನವರಾತ್ರಿ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ದೂರದ ಅಮೇರಿಕಾದಲ್ಲೂ ಅಲ್ಲಿನ ಭಾರತ ಮೂಲದವರೆಲ್ಲಾ ಸೇರಿ ನವರಾತ್ರಿಯ ಪ್ರಯುಕ್ತ ಅದ್ಧೂರಿ ದುರ್ಗಾ ಪೂಜೆ ಉತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹೌದು ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ ಸಿಟಿಯ ಟೈಮ್‌ ಸ್ಕ್ವೇರ್‌ ಬಳಿ ನವರಾತ್ರಿ ಉತ್ಸವವನ್ನು ಆಚರಿಸಲಾಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಬಂಗಾಲಿ ಕ್ಲಬ್‌ ಯುಎಸ್‌ಎ ದುರ್ಗಾ ಪೂಜೆ ಉತ್ಸವವನ್ನು ಆಯೋಜಿಸಿದ್ದು, ಅಕ್ಟೋಬರ್‌ 5 ಮತ್ತು 6 ರಂದು ನಡೆದ ಈ ಪೂಜಾ ಕಾರ್ಯ, ಸಾಂಸ್ಕೃತಿಕ ಉತ್ಸವದಲ್ಲಿ ಸಾವಿರಾರು ಭಾರತೀಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಾಗಿಯಾಗಿದ್ದರು. ಈ ಹಬ್ಬದ ಸಂಭ್ರಮದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ರುಚಿತಾ ಜೈನ್‌ (fireflydo) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನ್ಯೂಯಾರ್ಕ್‌ ಟೈಮ್‌ ಸ್ಕ್ವೇರ್‌ ಬಳಿ ಮೊದಲ ಬಾರಿಗೆ ದುರ್ಗಾ ಪೂಜೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ನ್ಯೂಯಾರ್ಕ್‌ ಸಿಟಿಯ ಟೈಮ್‌ ಸ್ಕ್ವೇರ್‌ ಬಳಿ ನಡೆದ ಅದ್ಧೂರಿ ದುರ್ಗಾ ಪೂಜೆ ಉತ್ಸವದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರೆಲ್ಲರೂ ಸಂಭ್ರಮದಿಂದ ಭಾಗಿಯಾಗಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ; ಫಸ್ಟ್ ರ‍್ಯಾಂಕ್‌ ರಾಜು; ಪುಸ್ತಕ ಓದುತ್ತಲೇ ಗರ್ಬಾ ನೃತ್ಯ ಮಾಡಿದ ಯುವಕ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ಬಹಳ ಹೆಮ್ಮೆಯಾಗುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ