ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ (Corona) ಕಾಡುತ್ತಿದೆ, ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೆಲವರು ಮಾಸ್ಕ್ (Mask) ಹಾಕದೇ, ವ್ಯಾಕ್ಸಿನ್ ತೆಗೆದುಕೊಳ್ಳದೆ ಓಡಾಡುತ್ತಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಆ್ಯಂಕರ್ (Anchor) ಒಬ್ಬರು ಪ್ಯಾನಲ್ನಲ್ಲಿ ಚರ್ಚೆಗೆ ಕುಳಿತ ವ್ಯಾಕ್ಸಿನ್ ವಿರೋಧಿಗಳ ಬಳಿ ಮಾಸ್ಕ್ ಹಾಕಿಕೊಳ್ಳುವಂತೆ ಕೂಗಿದ್ದಾರೆ. ಮೆಕ್ಸಿಕೋದ ನ್ಯೂಸ್ ಚಾನೆಲ್ (News channel)ನ ನೇರಪ್ರಸಾರದ ಸಮಯದಲ್ಲಿ ಕ್ಯಾಮರಾ ಎದುರು ನ್ಯೂಸ್ ಆ್ಯಂಕರ್ ಕಿರುಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
?#VíaZoom Leonardo Schwebel (@LeoSchwebel), conductor de @TelediarioGDL, habla sobre su vídeo viral donde arremetió contra las personas que niegan a vacunarse.
“Pónganse el m#ldito cubrebocas”#TelediarioEnEl6 | #EnDirecto https://t.co/VqUPqVgacF pic.twitter.com/eA3dtHVj0i
— @telediario (@telediario) January 17, 2022
ಟೈಮ್ಸ್ ನೌ ವರದಿ ಪ್ರಕಾರ, ಮೆಕ್ಸಿಕೋದ ಟೆಲಿಡಿಯಾರಿಯೊ ಗ್ವಾಡಲಜರಾ ಚಾನೆಲ್ನ ಲಿಯೊನಾರ್ಡೊ ಶ್ವೆಬೆಲ್ ಎನ್ನುವ ಆ್ಯಂಕರ್ ಆ್ಯಂಟಿ ವ್ಯಾಕ್ಸರ್ಸ್ಗಳ ಬಳಿ ನೀವು ವ್ಯಾಕ್ಸಿನ್ ವಿರೋಧಿಗಳಾಗಿದ್ದರೆ ನೀವು ಮೂರ್ಖರು. ಮೊದಲು ಫೇಸ್ ಮಾಸ್ಕ್ ಹಾಕಿಕೊಳ್ಳಿ ಎಂದು ಕಿರುಚಾಡಿದ್ದಾರೆ. ಲಿಯೊನಾರ್ಡೊ ಶ್ವೆಬೆಲ್ ಈ ಹಿಂದೆ ಅವರ ಸಾಮಾಜಿಕ ಜಾಲತಾಣದಲ್ಲಿಯೂ ಕೊರೋನಾ ಹಾಗೂ ಮಾಸ್ಕ್ ಧರಿಸುವುದರ ಕುರಿತು ಅರಿವು ಮೂಡಿಸಲು ವಿಡಿಯೋ ಮಾಡಿ ಹಂಚಿಕೊಂಡದ್ದರು. ಈ ಬಾರಿ ಅವರು ನೇರಪ್ರಸಾರ ಕಾರ್ಯಕ್ರಮದಲ್ಲಿಯೇ ಕೂಗಾಡಿದ್ದು ವಿಡಿಯೋ ವೈರಲ್ ಅಗಿದೆ. ವಿಡಿಯೋದಲ್ಲಿ ಅವರು ನಾನು ನನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಕುರಿತು ಹೇಳಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೆಲವೊಮ್ಮೆ ಜನರನ್ನು ಮಾತು ಕೇಳಿಸಲು ಕೂಗಾಡಬೇಕು, ದಯವಿಟ್ಟು ಮಾಸ್ಕ್ ಧರಿಸಿ ಎಂದಿದ್ದಾರೆ.
ಜಗತ್ತಿನಲ್ಲಿ ಹಲವು ದೇಶಗಳು ಲಕ್ಷಾಂತರ ಜನರನ್ನು ಮಾರಕ ರೋಗದಿಂದ ಕಳೆದುಕೊಂಡಿದೆ. ಅನೇಕ ಕೆಟ್ಟ ದಿನಗಳನ್ನು ಅನುಭವಿಸುತ್ತಿದೆ. ಎಂದ ಅವರು ಮುಂದುವರೆದು ವ್ಯಾಕ್ಸಿನ್ ತೆಗದುಕೊಳ್ಳದೆ ರೋಗವನ್ನು ಹರಡಿ ಇನ್ನಷ್ಟು ಸಮಸ್ಯೆ ಉಂಟುಮಾಡುತ್ತಿದ್ದಾರೆ ಎಂದು ವ್ಯಾಕ್ಸಿನ್ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಮೆಕ್ಸಿಕೋದಲ್ಲಿ ಈವರೆಗೆ 4.39 ಮಿಲಿಯನ್ ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದು, 3,01,000 ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿರುವ 149 ಮಿಲಿಯನ್ ಜನರಲ್ಲಿ ಕೇವಲ 56 ಪ್ರತಿಶತದಷ್ಟು ಜನರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಟಿವಿ ಚಾನೆಲ್ನ ನೇರಪ್ರಸಾರದಲ್ಲಿ ವರದಿ ಮಾಡುತ್ತಿರುವಾಗ ವರದಿಗಾರ್ತಿಗೆ ಗುದ್ದಿದ ಕಾರು