ನೈಜೀರಿಯಾದ (Nigeria) 9 ವರ್ಷದ ಬಾಲಕನೊಬ್ಬ ತನ್ನನ್ನು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೆರ್ (Worlds Youngest Billionair) ಎಂದು ಹೇಳಿಕೊಂಡಿದ್ದಾನೆ. ಐಷಾರಾಮಿ, ಕಾರು, ದುಬಾರಿ ಬಟ್ಟೆಯನ್ನು ಧರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ 9 ವರ್ಷದ ಬಾಲಕನ ಹೆಸರು ಮೊಂಫಾ ಜೂನಿಯರ್ (Mompha Junior) ಎಂದಾಗಿದೆ. ಡೈಲಿ ಮೇಲ್ ವರದಿಯ ಪ್ರಕಾರ ಈತನ ದಾಯ 15 ಮಿಲಿಯನ್ ಡಾಲರ್ ಆಗಿದೆ. ಮೊಂಫಾ ಜೂನಿಯರ್, ಇಂಟರ್ನೆಟ್ ಸ್ಟಾರ್ ಎಂದೇ ಖ್ಯಾತಿ ಪಡೆದ ಇಸ್ಮಾಯಿಲಿಯಾ ಮುಸ್ತಫಾ ಅವರ ಮಗ. ಸದ್ಯ ಮೋಂಫಾ ಬಿಲಿಯನರ್ ಎಂದು ಹೇಳಿಕೊಂಡು ಇಂಟರ್ನೆಟ್ನಲ್ಲಿ ಹೊಸ ಸಂಚಲನ ಮೂಡಿಸಿದ್ದಾನೆ.
ಇನ್ಸ್ಟಾಗ್ರಾಮ್ನಲ್ಲಿ ಮೋಂಫಾ ಮುಸ್ತಪಾ ಎಂದು ಹುಡುಕಿದರೆ ಬಾಲಕನೋರ್ವ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನ ಬಳಿ ನಿಂತು ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸಿ ಪೋಸ್ ನೀಡಿರುವುದನ್ನು ಕಾಣಬಹುದು. ಡಿಸೈನರ್ಗಳು ತಯಾರಿಸಿದ ವಿಭಿನ್ನ ರೀತಿಯ ಉಡುಪುಗಳನ್ನು ತೊಟ್ಟ ನಿಂತ ಬಳಾಕ ಫೋಟೋಗಳನ್ನು ಆತನ ತಂದೆ ಹಂಚಿಕೊಂಡಿದ್ದಾರೆ. ಮೋಂಫಾ ಹೆಸರಿನಲ್ಲಿ ಒಂದು ಪ್ರೈವೆಟ್ ಜೆಟ್ಕೂಡ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೋಂಫಾ ಹೆಸರಿನ ಇನ್ಸ್ಟಾಗ್ರಾಮ್ ಖಾತೆಗೆ 30 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಮೋಂಫಾ ತನ್ನ ನಿಕ್ ನೇಮ್ ಅನ್ನು world’s youngest billionaire ಎಂದು ಮಾಡಿಕೊಂಡಿದ್ದಾರೆ.
ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದ್ದು, ಕೇವಲ 15 ಮಿಲಿಯನ್ ಡಾಲರ್ ಆದಾಯ ಇಟ್ಟುಕೊಂಡು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಹೇಗೆ ಹೆಸರಿಟ್ಟ್ಉಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ. ಇದೀಗ ಸಂಆಜಿಕ ಜಾಳತಾಣದಲ್ಲಿ ವೈರಲ್ ಆದ ಮೋಂಫಾ ಪೋಟೋಗಳು ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ.
ಇದನ್ನೂ ಓದಿ:
Minnie Mouse: ಇದೇ ಮೊದಲ ಬಾರಿಗೆ ನೀಲಿ ಬಣ್ಣದ ಪ್ಯಾಂಟ್ ಸೂಟ್ ಧರಿಸಿ ಬರುತ್ತಿರುವ ‘ಮಿನ್ನಿ ಮೌಸ್’