ರೈಲು ಸಂಚಾರಕ್ಕೆಂದು ಚಿಕಾಗೋದಲ್ಲಿ ಹಳಿಗೆ ಬೆಂಕಿ ಹಚ್ಚಿದ್ದೇಕೆ? ಇಲ್ಲಿದೆ ಅಸಲಿ ಸ್ಟೋರಿ
ಚಿಕಾಗೋದಲ್ಲಿ ರೈಲು ಸಂಚಾರಕ್ಕೆ ಅನುಕೂಲವಾಗಲು ಹಳಿಗಳ ಬಳಿ ಬೆಂಕಿಯನ್ನು ಹಚ್ಚಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬೆಂಕಿ ಉರಿಯುತ್ತಿರುವ ರೈಲ್ವೇ ಹಳಿಯ ಮೇಲೆ ರೈಲು ಸಂಚರಿಸುತ್ತಿರುವುದನ್ನು ಕಾಣಬಹುದು.
ಜಗತ್ತಿನಾದ್ಯಂತ ಚಳಿಗಾಲ (Winter) ಜನರನ್ನು ಕಾಡುತ್ತಿದೆ. ಕೆಲವು ದೇಶಗಳಲ್ಲಿ ತಾಪಮಾನ ಮೈನಸ್ಗೆ ಇಳಿದಿದೆ. ಹೀಗಾಗಿ ಸಂಚಾರಕ್ಕೂ ಕಷ್ಟವಾಗುತ್ತಿದೆ. ಈ ನಡುವೆ ಯುಎಸ್ನ ಚಿಕಾಗೋ (Chicago) ದಲ್ಲಿ ರೈಲು ಸಂಚರಿಸಲು ರೈಲಿನ ಹಳಿಗಳಿಗೆ (Railway Track) ಬೆಂಕಿ ಹಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಳಿಗಾಲದಲ್ಲಿ ಯುಎಸ್ನಲ್ಲಿ ಮೈನಸ್ 1 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ಇಳಿಯುತ್ತದೆ. ಇದರಿಂದ ರೈಲ್ವೆ ಹಳಿಗಳು ಮಂಜಿನಿಂದ ಗಟ್ಟಿಯಾಗಿ ರೈಲು ಸಂಚಾರಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ರೈಲು ಸಂಚಾರಕ್ಕೆ ಅನುಕೂಲವಾಗಲು ಬೆಂಕಿಯನ್ನು ಹಚ್ಚಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬೆಂಕಿ ಉರಿಯುತ್ತಿರುವ ರೈಲ್ವೇ ಹಳಿಯ ಮೇಲೆ ರೈಲು ಸಂಚರಿಸುತ್ತಿರುವುದನ್ನು ಕಾಣಬಹುದು. ಆದರೆ ನಿಜವಾಗಿಯೂ ರೈಲಿನ ಹಳಿಗಳಿಗೆ ಬೆಂಕಿ ಹಚ್ಚಲಾಗಿಲ್ಲ ವರದಿಯ ಪ್ರಕಾರ ರೈಲು ಹಳಿಗಳ ಪಕ್ಕದಲ್ಲಿ ಗ್ಯಾಸ್ ಫೆಡ್ ಹೀಟರ್ (Gas-Fed Heater) ಗಳನ್ನು ಅಳವಡಿಸಲಾಗಿದ್ದು ಅವುಗಳಿಂದ ಬೆಂಕಿ ಹೊರಬರುವಂತೆ ಮಾಡಲಾಗಿದೆ.
There’s nothing like checking the @railstream camera at A2 and seeing Metra running seamlessly through this snowy weather on a Monday morning!
Beat the traffic, no matter the weather, by hopping on Metra. ? pic.twitter.com/QzPfQx3bxW
— Metra (@Metra) January 24, 2022
ಈ ಕ್ರಮವನ್ನು ಚಿಕಾಗೋದ ಸಾರಿಗೆ ಇಲಾಖೆ ಮೆಟ್ರಾ ವಿಪರೀತ ಚಳಿಯ ನಡುವೆಯೂ ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ತಡೆಯಲು ಹಳಿಗಳಿಗೆ ಪಕ್ಕದಲ್ಲಿ ಗ್ಯಾಸ್ ಫೆಡ್ ಹೀಟರ್ಗಳಿಂದ ಬೆಂಕಿ ಬರುವಂತೆ ವ್ಯವಸ್ಥೆ ಮಾಡಿದೆ. ಇದರಿಂದ ಕೋಲ್ಡ್ ಟ್ರಾಕ್ಗಳು ಬಿಸಿಯಾಗಿ ರೈಲಿನ ಚಕ್ರಗಳು ತಿರುಗಲು ಅನುಕೂಲವಾಗುತ್ತದೆ. ಆದರೆ ಇದು ರೈಲಿಗೆ ಯಾವುದೆ ಅಪಾಯವನ್ನು ಉಂಟು ಮಾಡುವುದಿಲ್ಲ ಎಂದೂ ತಿಳಿಸಿದೆ.
ವಿಪರೀತ ಚಳಿಯಿಂದ ಎರಡು ರೀತಿಯ ಸಮಸ್ಯೆ ಉಂಟಾಗುತ್ತದೆ ಒಂದು ಹಳಿಗಳು ಪೂರ್ತಿಯಾಗಿ ಮುಚ್ಚಿಹೋಗುವುದು ಮತ್ತು ಇನ್ನೊಂದು, ಪಾಯಿಂಟ್‌ಗಳು ಮುಚ್ಚು ಹೋಗುವುದು. ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಿ ರೈಲ್ವೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎನ್ನುವುದನ್ನು ಮೆಟ್ರಾ ಇನ್ಸ್ಟಾಗ್ರಾಮ್ ಮೂಲಕ ವಿವರಿಸಿದೆ. ಮೆಟ್ರಾ ಹೇಳಿಕೆಯ ಪ್ರಕಾರ, ಪೂರ್ತಿಯಾಗಿ ರೈಲ್ವೆ ಹಳಿಗಳು ಮುಚ್ಚಿಹೋದಾಗ ಹಳಿಗಳ ನಡುವೆ ಬಿರುಕು ಏರ್ಪಟ್ಟು ಅವು ಬೇರೆ ಬೇರೆಯಾಗುತ್ತವೆ. ಅಂತಹ ಸಂದರ್ಭಗಳಲ್ಲಿ ರೈಲು ಸಂಚರಿಸಲು ಸಾಧ್ಯವಿಲ್ಲ. ಹಳಿಗಳ ಲೋಹವು ಬಿಸಿಯಾಗಿ ಮತ್ತೆ ಕೂಡಿಕೊಳ್ಳಲು ಬಿಸಿ ಮಾಡಲಾಗುತ್ತದೆ. ಇನ್ನು ಮಂಜು ಮತ್ತು ಹಿಮದಿಂದ ಕೆಲವು ಭಾಗಗಳು ಗಟ್ಟಿಯಾಗುತ್ತವೆ ಅವುಗಳನ್ನು ಬಿಸಿ ಮಾಡಲು ಗ್ಯಾಸ್ ಫೇಡ್ಗಳ ಮೂಲಕ ಬೆಂಕಿಯನ್ನು ಹಾಕಲಾಗುತ್ತದೆ.
ಒಂದು ಬಾರಿ ಬೆಂಕಿಯನ್ನು ಹಚ್ಚಿದ ಮೇಲೆ ನಿರ್ವಾಹಕರು ಅದರ ಮೇಲೆ ನಿಗಾ ಇಡುತ್ತಾರೆ. ಎಷ್ಟು ಪ್ರಮಾಣದ ಶಾಖ ಬೇಕು ಎನ್ನುವುದರ ಆದಾರದ ಮೇಲೆ ಬೆಂಕಿಯನ್ನು ಉರಿಸಲಾಗುತ್ತದೆ. ಇದರಿಂದ ಹಳಿಯ ಮೇಲೆ ಸಂಚರಿಸುವ ರೈಲುಗಳಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಮೆಟ್ರಾ ತಿಳಿಸಿದೆ.
ಇದನ್ನೂ ಓದಿ:
PUBG: ಪಬ್ಜಿ ಪ್ರಭಾವ; ತನ್ನ ಕುಟುಂಬದ ಎಲ್ಲರನ್ನೂ ಶೂಟ್ ಮಾಡಿ ಕೊಂದ 14 ವರ್ಷದ ಬಾಲಕ
Published On - 3:27 pm, Sat, 29 January 22