ಜಗತ್ತಿನ ಅತ್ಯಂತ ಕಿರಿಯ ಬಿಲಿಯನೆರ್​​ ಎನಿಸಿಕೊಂಡ 9 ವರ್ಷದ ಬಾಲಕ

ಜಗತ್ತಿನ ಅತ್ಯಂತ ಕಿರಿಯ ಬಿಲಿಯನೆರ್​​ ಎನಿಸಿಕೊಂಡ 9 ವರ್ಷದ ಬಾಲಕ
ಮೋಂಫಾ ಜೂನಿಯರ್​

ನೈಜೀರಿಯಾದ 9 ವರ್ಷದ ಬಾಲಕನೊಬ್ಬ ತನ್ನನ್ನು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೆರ್​ ಎಂದು ಹೇಳಿಕೊಂಡಿದ್ದಾನೆ. ಐಷಾರಾಮಿ, ಕಾರು, ದುಬಾರಿ ಬಟ್ಟೆಯನ್ನು ಧರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ

TV9kannada Web Team

| Edited By: Pavitra Bhat Jigalemane

Jan 29, 2022 | 9:40 AM

ನೈಜೀರಿಯಾದ (Nigeria) 9 ವರ್ಷದ ಬಾಲಕನೊಬ್ಬ ತನ್ನನ್ನು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೆರ್ (Worlds Youngest Billionair)​ ಎಂದು ಹೇಳಿಕೊಂಡಿದ್ದಾನೆ. ಐಷಾರಾಮಿ, ಕಾರು, ದುಬಾರಿ ಬಟ್ಟೆಯನ್ನು ಧರಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಈ 9 ವರ್ಷದ ಬಾಲಕನ ಹೆಸರು ಮೊಂಫಾ ಜೂನಿಯರ್ (Mompha Junior) ಎಂದಾಗಿದೆ. ಡೈಲಿ ಮೇಲ್​ ವರದಿಯ ಪ್ರಕಾರ ಈತನ ದಾಯ 15 ಮಿಲಿಯನ್​ ಡಾಲರ್​ ಆಗಿದೆ. ಮೊಂಫಾ ಜೂನಿಯರ್, ಇಂಟರ್​ನೆಟ್​​ ಸ್ಟಾರ್​​ ಎಂದೇ ಖ್ಯಾತಿ ಪಡೆದ ಇಸ್ಮಾಯಿಲಿಯಾ ಮುಸ್ತಫಾ ಅವರ ಮಗ. ಸದ್ಯ  ಮೋಂಫಾ ಬಿಲಿಯನರ್​ ಎಂದು ಹೇಳಿಕೊಂಡು ಇಂಟರ್​ನೆಟ್​ನಲ್ಲಿ ಹೊಸ ಸಂಚಲನ ಮೂಡಿಸಿದ್ದಾನೆ.

ಇನ್ಸ್ಟಾಗ್ರಾಮ್​ನಲ್ಲಿ ಮೋಂಫಾ ಮುಸ್ತಪಾ ಎಂದು ಹುಡುಕಿದರೆ ಬಾಲಕನೋರ್ವ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನ ಬಳಿ ನಿಂತು ಬ್ರ್ಯಾಂಡೆಡ್​ ಬಟ್ಟೆಗಳನ್ನು ಧರಿಸಿ ಪೋಸ್​ ನೀಡಿರುವುದನ್ನು ಕಾಣಬಹುದು. ಡಿಸೈನರ್​ಗಳು ತಯಾರಿಸಿದ ವಿಭಿನ್ನ ರೀತಿಯ ಉಡುಪುಗಳನ್ನು ತೊಟ್ಟ ನಿಂತ ಬಳಾಕ ಫೋಟೋಗಳನ್ನು ಆತನ ತಂದೆ ಹಂಚಿಕೊಂಡಿದ್ದಾರೆ. ಮೋಂಫಾ ಹೆಸರಿನಲ್ಲಿ ಒಂದು ಪ್ರೈವೆಟ್​​ ಜೆಟ್​ಕೂಡ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೋಂಫಾ ಹೆಸರಿನ ಇನ್ಸ್ಟಾಗ್ರಾಮ್​ ಖಾತೆಗೆ 30 ಸಾವಿರ ಮಂದಿ ಫಾಲೋವರ್ಸ್​ ಇದ್ದಾರೆ. ಮೋಂಫಾ ತನ್ನ ನಿಕ್​ ನೇಮ್​​ ಅನ್ನು world’s youngest billionaire ಎಂದು ಮಾಡಿಕೊಂಡಿದ್ದಾರೆ.

ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದ್ದು, ಕೇವಲ 15 ಮಿಲಿಯನ್​ ಡಾಲರ್​​ ಆದಾಯ ಇಟ್ಟುಕೊಂಡು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೇರ್​ ಎಂದು ಹೇಗೆ ಹೆಸರಿಟ್ಟ್ಉಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ. ಇದೀಗ ಸಂಆಜಿಕ ಜಾಳತಾಣದಲ್ಲಿ ವೈರಲ್​ ಆದ ಮೋಂಫಾ ಪೋಟೋಗಳು ಜಗತ್ತಿನಾದ್ಯಂತ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

Minnie Mouse: ಇದೇ ಮೊದಲ ಬಾರಿಗೆ ನೀಲಿ ಬಣ್ಣದ ಪ್ಯಾಂಟ್​ ಸೂಟ್​ ಧರಿಸಿ ಬರುತ್ತಿರುವ ‘ಮಿನ್ನಿ ಮೌಸ್’​

Follow us on

Related Stories

Most Read Stories

Click on your DTH Provider to Add TV9 Kannada