ವಧುವನ್ನು ಅಂಗೈಮೇಲೆ ನಡೆಸಿಕೊಂಡು ಮಂಟಪಕ್ಕೆ ಕರೆತಂದ ಸಹೋದರರು; ವಿಡಿಯೋ ವೈರಲ್​

ವಧುವನ್ನು ಅಂಗೈಮೇಲೆ ನಡೆಸಿಕೊಂಡು ಮಂಟಪಕ್ಕೆ ಕರೆತಂದ ಸಹೋದರರು; ವಿಡಿಯೋ ವೈರಲ್​
ವಧು

ಸಾಮಾಜಿಕ ಜಾಲತಾಣದಲ್ಲಿ ವಧುವನ್ನು ಸಹೋದರರು ಮಂಟಪಕ್ಕೆ ಅಂಗೈಮೇಲೆ ನಡೆಸಿಕೊಂಡು ಕರೆದುಕೊಂಡು ಬರುವ ವಿಡಿಯೋ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

TV9kannada Web Team

| Edited By: Pavitra Bhat Jigalemane

Jan 29, 2022 | 6:17 PM

ಮದುವೆಗಳಲ್ಲಿ ಕೆಲವೊಂದು ದೃಶ್ಯಗಳು ನೋಡುಗರನ್ನು ಭಾವುಕರನ್ನಾಗಿ ಮಾಡುತ್ತದೆ. ಹುಟ್ಟಿದ ಮನೆಯನ್ನು, ತನ್ನವರನ್ನು ತೊರೆದು ಹೊಸದೊಂದು ಕುಟುಂಬಕ್ಕೆ ಸೇರಿಕೊಳ್ಳುವ ಗಳಿಗೆ ಎಂತಹ ಹೆಣ್ಣನ್ನು ಒಂದು ಕ್ಷಣ ದಿಗಿಲುಗೊಳಿಸುತ್ತವೆ. ಜತೆಯಲ್ಲಿ ಬೆಳೆದ ಅಣ್ಣ ತಮ್ಮಂದಿರನ್ನು, ಅಕ್ಕ ತಂಗಿಯರಿಂದ ದೂರವಾಗಿ ಬದುಕುವುದು ಆಕೆಯಿಂದ ಮಾತ್ರ ಸಾಧ್ಯ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಧುವನ್ನು (Bride) ಸಹೋದರರು ಮಂಟಪಕ್ಕೆ ಅಂಗೈಮೇಲೆ ನಡೆಸಿಕೊಂಡು ಕರೆದುಕೊಂಡು ಬರುವ ವಿಡಿಯೋ ವೈರಲ್ (Viral Video)​ ಆಗಿದೆ. ಇನ್ಸ್ಟಾಗ್ರಾಮ್​ (Instagram) ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಧುವಿನ ಸಹೋದರರು ವಧು ಬರುವ ಹಾದಿಯಲ್ಲಿ ತಮ್ಮ ಅಂಗೈಗಳನ್ನು ಇಟ್ಟು ಆಕೆಯನ್ನು ಕೈಗಳ ಮೇಲೆ ನಡೆದುಕೊಂಡು ಹೋಗುವಂತೆ ಹೇಳುತ್ತಾರೆ. ಇದರಿಂದ  ಭಾವುಕಗೊಂಡ ವಧು ತನ್ನ ಪ್ರೀತಿಯ ಸಹೋದರರ ಅಂಗೈ ಮೇಲೆ ನಡೆದುಕೊಂಡು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರ ವಿಡಿಯೋವನ್ನು ‘witty_wedding’ ಎನ್ನುವ ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದೆ. ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಅದ್ದೂರಿಯಾಗಿ ತಯಾರಾದ ವಧು ಸಹೋದರರ ಅಂಗೈ ಮೇಲೆ ಬರುವುದನ್ನು ಕಂಡು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಪ್ರೀತಿಸುವ ಸಹೋದರರನ್ನು ಪಡೆದ ಆಕೆ ಅದೃಷ್ಟವಂತೆ ಎಂದಿದ್ದಾರೆ.

ಸದ್ಯ ವೈರಲ್​ ಆಗಿರುವ ವಿಡಿಯೋ 8 ಸಾವಿರಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ವಧು ಬರುವ ದಾರಿಗೆ ಹೂವನ್ನು ಹಾಕುತ್ತಾರೆ. ಅದೇ ಹೂವಿನ ಮೇಲೆ ಆಕೆಯ ಸಹೋದರರು ಮಂಡಿಯೂರಿ ಕುಳಿತು ಅಂಗೈಯನ್ನು ಚಾಚುತ್ತಾರೆ. ಅಗ ಆಕೆ ಹೆಜ್ಜೆಯನ್ನು ಅವರ ಕೈಮೇಲೆ ಇಟ್ಟುಕೊಂಡು ಮಂಟಪಕ್ಕೆ ನಡೆದುಕೊಂಡು ಬರುತ್ತಾಳೆ.

ಇದನ್ನೂ ಓದಿ;

Follow us on

Related Stories

Most Read Stories

Click on your DTH Provider to Add TV9 Kannada