Rahul Gandhi: ರಾಹುಲ್ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ -ಪಾನ್ ಶಾಪ್‌ನಲ್ಲಿ ಹಾಕಿರುವ ಈ ಪೋಸ್ಟರ್ ರಾಹುಲ್ ಪರ ಇದೆಯೋ ಅಥವಾ ವಿರುದ್ಧವಾ?​

|

Updated on: Apr 19, 2023 | 12:35 PM

Rahul Gandhi -No Credit Poster: ಪೋಸ್ಟರ್​​ ಕಂಡ ಕೆಲವರು ನೋ ವೇ, ಛಾನ್ಸೇ ಇಲ್ಲ! ರಾಹುಲ್ ಪ್ರಧಾನಿ ಆಗುವುದಿಲ್ಲ; ಅಷ್ಟರಮಟ್ಟಿಗೆ ಅಂಗಡಿ ಮಾಲೀಕ ಸೇಫ್​ ಸೇಫ್​ ಎಂದು ಪ್ರತಿಕ್ರಿಯಿಸಿದ್ದಾರೆ.

Rahul Gandhi: ರಾಹುಲ್ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ -ಪಾನ್ ಶಾಪ್‌ನಲ್ಲಿ ಹಾಕಿರುವ ಈ ಪೋಸ್ಟರ್ ರಾಹುಲ್ ಪರ ಇದೆಯೋ ಅಥವಾ ವಿರುದ್ಧವಾ?​
ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲವಂತೆ!
Follow us on

ಬಹುತೇಕ ಅಂಗಡಿಗಳಲ್ಲಿ ‘ದಯವಿಟ್ಟು ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಪೋಸ್ಟರ್ ಹಾಕಿರುತ್ತಾರೆ. ಯಾರಿಗಾದರೂ ಅಂಗಡಿಯವ ಸಾಲ ಕೊಟ್ಟರೆ… ಹಣ ನಾಳೆ ವಾಪಸ್​ ಮಾಡುವೆ, ನಾಳಿದ್ದು ನೀಡುವೆ ಎಂದು ತಪ್ಪಿಸಿಕೊಳ್ಳುವವರ ಸಹವಾಸವೇ ಜಾಸ್ತಿಯಿರುತ್ತದೆ. ಆ ಭಯದಿಂದಲೇ ಶಾಪ್ ಮಾಲೀಕರು (Paan Shop) ಸಾಲದ ಕುರಿತಾದ ಮೇಲಿನ ಸಾಲನ್ನು (No Credit) ಪೋಸ್ಟರ್ ರೂಪದಲ್ಲಿ (Poster) ಹಾಕಿರುತ್ತಾರೆ. ಆದರೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಕರ್ಬಾಲಾ ಅಗ್ಗದ್‌ನ ಪಾನ್ ಅಂಗಡಿಯ ಮಾಲೀಕ ಮಹಮ್ಮದ್ ಹುಸೇನ್ ಮಾತ್ರ ವಿಭಿನ್ನವಾದ ಪೋಸ್ಟರ್ ಒಂದನ್ನು ಹಾಕಿದ್ದಾನೆ.

ರಾಹುಲ್ ಗಾಂಧಿ (Rahul Gandhi) ಪ್ರಧಾನ ಮಂತ್ರಿಯಾಗುವವರೆಗೆ ತನ್ನ ಅಂಗಡಿಯಲ್ಲಿ ಸಾಲ ಕೊಡುವುದಿಲ್ಲ – ಉದಾರಿ ಬಂದ್​​ ಎಂದು ಪೋಸ್ಟರ್ ಹಾಕಿದ್ದಾನೆ! ಇದು ನೋಡಿ ಅಲ್ಲಿಗೆ ಬಂದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಆ ಶಾಪ್‌ಗೆ ಬಂದ ಓ ವ್ಯಕ್ತಿ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದೀಗ ವೈರಲ್ ಆಗಿ ಮಾರ್ಪಟ್ಟಿದೆ. ಜೊತೆಗೆ ನಾನಾ ವ್ಯಾಖ್ಯಾನಗಳೂ ಬರುತ್ತಿವೆ.

ಸಾಲದ ಪ್ರಮಾಣಗಳು ಅಧಿಕವಾಗಿ, ಅವರಿಂದ ಸಾಲ ಪಾವತಿಗಳು ಆಗದೆ ತಾನು ತುಂಬಾ ತೊಂದರೆಗಳನ್ನು ಎದುರಿಸಿದ್ದೇನೆ. ಹಾಗಾಗಿ ಈ ವರ್ಷ ಜನವರಿ 1 ರಿಂದ ಸಾಲ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಆದರೆ ಅದಕ್ಕೊಂದು ಸೂಕ್ತ ಒಕ್ಕಣೆ ಹಾಕಿದ್ದೇನೆ. ಇದು ಈ ಪೋಸ್ಟರ್ ಹಾಕುವುದು ಹಿಂದಿರುವ ಉದ್ದೇಶ ಎಂದು ಅಂಗಡಿ ಮಾಲೀಕ ಹುಸೇನ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

ಪತ್ನಿಗೆ ಕಚ್ಚಿತು ಹಾವು: ಪತಿರಾಯ ಪತ್ನಿಗಿಂತ ಮೊದಲು ಹಾವನ್ನು ಆಸ್ಪತ್ರೆಗೆ ಹೊತ್ತು ತಂದ! ಯಾಕೆ ಗೊತ್ತಾ?

ರಾಹುಲ್ ಗಾಂಧಿ ಸದ್ಯಕ್ಕೆ ಪ್ರಧಾನ ಮಂತ್ರಿಯಾಗುವ ಅವಕಾಶವಿಲ್ಲ! ಆದ್ದರಿಂದ ಈ ಪೋಸ್ಟರ್ ಹಾಕಿರುವುದಾಗಿ ಆತ ಹುಳ್ಳಗೆ ನಕ್ಕು ಹೇಳಿದ್ದಾನೆ. ಹಾಗಂತ ರಾಹುಲ್ ಗಾಂಧಿ ಎಂದಿಗೂ ಪ್ರಧಾನಿ ಆಗುವುದಿಲ್ಲ ಎಂಬುದು ಅವರ ಉದ್ದೇಶವಲ್ಲ. ಪ್ರಸುತ ಸನ್ನಿವೇಶದಲ್ಲಿ ಅವರು ಪ್ರಧಾನಿ ಆಗಲಾರರು. ಅದರಿಂದ ತಾನು ತನ್ನ ಗ್ರಾಹಕರಿಗೆ ಸಾಲ ನೀಡುವುದು ತಪ್ಪುತ್ತದೆ ಎಂಬುದು ತಾವು ಪೋಸ್ಟರ್ ಹಾಕಿರುವುದರ ಒಳಾರ್ಥ ಎಂದು ಹುಸೇನ್​ ಸ್ಪಷ್ಟಪಡಿಸಿದ್ದಾರೆ.

ಪೋಸ್ಟರ್​​ ಕಂಡ ಕೆಲವರು ನೋ ವೇ, ಛಾನ್ಸೇ ಇಲ್ಲ! ರಾಹುಲ್ ಪ್ರಧಾನಿ ಆಗುವುದಿಲ್ಲ; ಅಷ್ಟರಮಟ್ಟಿಗೆ ಅಂಗಡಿ ಮಾಲೀಕ ಸೇಫ್​ ಸೇಫ್​ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 12:31 pm, Wed, 19 April 23