Noida: ಸೋಶಿಯಲ್​ ಮೀಡಿಯಾಗಳಲ್ಲಿ ಫೇಮಸ್​​ ಆಗಲು ಟವರ್​​ ಏರಿ ಕುಳಿತ ಯುವಕ

|

Updated on: Jul 01, 2024 | 2:14 PM

ನೀಲೇಶ್ವರ್ ಎಂದು ಗುರುತಿಸಲ್ಪಟ್ಟಿರುವ ಈ ಯುವಕ ನೀಲೇಶ್ವರ22 ಎಂಬ ಹೆಸರಿನ ಯೂಟ್ಯೂಬ್​​​​​​ ಚಾನೆಲ್​​ ಹೊಂದಿದ್ದಾನೆ. ತನ್ನ ಯೂಟ್ಯೂಬ್​​​ನಲ್ಲಿ ಸಬ್ಸ್ಕ್ರೈಬರ್ ಹೆಚ್ಚಾಗಲು ಮತ್ತು ಮಿಲಿಯನ್​​​​ ವೀಕ್ಷಣೆ ಪಡೆಯಲು ಮೊಬೈಲ್​​​ ಟವರ್​​ ಹತ್ತಿ ಕುಳಿತ್ತಿದ್ದಾನೆ.

Noida: ಸೋಶಿಯಲ್​ ಮೀಡಿಯಾಗಳಲ್ಲಿ ಫೇಮಸ್​​ ಆಗಲು ಟವರ್​​ ಏರಿ ಕುಳಿತ ಯುವಕ
ಸೋಶಿಯಲ್​ ಮೀಡಿಯಾಗಳಲ್ಲಿ ಫೇಮಸ್​​ ಆಗಲು ಟವರ್​​ ಏರಿ ಕುಳಿತ ಯುವಕ
Follow us on

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಫೇಮಸ್ ಆಗಲು ಯುವಕಯೊಬ್ಬ ಮೊಬೈಲ್​​​ ಟವರ್​​ ಹತ್ತಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೀಲೇಶ್ವರ್ ಎಂದು ಗುರುತಿಸಲ್ಪಟ್ಟಿರುವ ಈ ಯುವಕ ನೀಲೇಶ್ವರ22 ಎಂಬ ಹೆಸರಿನ ಯೂಟ್ಯೂಬ್​​​​​​ ಚಾನೆಲ್​​ ಹೊಂದಿದ್ದ. ಆದರೆ ಎಷ್ಟೇ ಪ್ರಯತ್ನಿಸಿದರೂ ಸಬ್ಸ್ಕ್ರೈಬರ್ ಹೆಚ್ಚಾಗದೇ ಇರುವ ಕಾರಣ ಈ ಯುವಕ ಫೇಮಸ್​​ ಆಗಲು ಟವರ್​​ ಏರಿ ಕುಳಿತಿದ್ದಾನೆ.

ಯುವಕನ ಹುಚ್ಚು ಸಾಹಸ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕಾಗಮಿಸಿದ ಪೊಲೀಸರು ಸತತ ಐದು ಘಂಟೆಗಳ ಕಾಲ ಯುವಕನ ಮನವೊಳಿಸಿ, ಆತನನ್ನು ಟವರ್​​ನಿಂದ ಕೆಳಗೆ ಇಳಿಸಿದ್ದಾರೆ. ಆನ್‌ಲೈನ್ ಜನಪ್ರಿಯತೆಗಾಗಿ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಯುವಕನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. ಇದಲ್ಲದೇ ಆತನ ವಿರುದ್ಧ ಕ್ರಮ ಕೈಗೊಂಡಿದ್ದು, ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಸಹ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ; ರೀಲ್ಸ್​ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ

8.87 ಸಾವಿರ ಸಬ್ಸ್ಕ್ರೈಬರ್ ಹೊಂದಿರುವ ತನ್ನ ಯೂಟ್ಯೂಬ್ ಚಾನೆಲ್ ಅನ್ನು ನಿರ್ವಹಿಸುತ್ತಿರುವ ನೀಲೇಶ್ವರ್, ಹೆಚ್ಚಿನ ವೀಕ್ಷಣೆಗಳನ್ನು ಗಳಿಸಲು ಈ ಅಪಾಯಕಾರಿ ಸಾಹಸವನ್ನು ಕೈಗೊಳ್ಳಲು ನಿರ್ಧರಿಸಿದ್ದ. ಟವರ್​ ಏರುತ್ತಿರುವುದನ್ನು ವಿಡಿಯೋ ಮಾಡಿ ಲೈವ್​​ ಬಿಡುವಂತೆ ತನ್ನ ಸ್ನೇಹಿತನಿಗೆ ಹೇಳಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ