Video: ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತ ಇಡ್ಲಿ; ಇದು ಇಡ್ಲಿಯ ದುರಂತ ಕಥೆ

ದಕ್ಷಿಣ ಭಾರತದ ನೆಚ್ಚಿನ ಉಪಾಹಾರಗಳಲ್ಲಿ ಇಡ್ಲಿ ಕೂಡ ಒಂದು. ಬಿಸಿ ಬಿಸಿಯಾದ ಮೃದುವಾದ ಇಡ್ಲಿಗೆ ಚಟ್ನಿ ಹಾಕಿ ಸವಿದರೆ ಹೊಟ್ಟೆ ಹಾಗೂ ಮನಸ್ಸಿಗೂ ತೃಪ್ತಿ. ಆದರೆ ಇದೀಗ ಉತ್ತರ ಭಾರತದಲ್ಲಿ ಇಡ್ಲಿಯಿಂದ ತಯಾರು ಮಾಡುವ ಖಾದ್ಯದ ವಿಡಿಯೋ ವೈರಲ್ ಆಗಿದೆ. ಈ ಖಾದ್ಯ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತ ಇಡ್ಲಿ; ಇದು ಇಡ್ಲಿಯ ದುರಂತ ಕಥೆ
ವೈರಲ್‌ ವಿಡಿಯೋ

Updated on: Nov 25, 2025 | 1:02 PM

ಇಡ್ಲಿ(Idli) ಎಲ್ಲರ ನೆಚ್ಚಿನ ತಿಂಡಿ. ದಕ್ಷಿಣ ಭಾರತದ ಪ್ರಮುಖ ತಿಂಡಿಯಾದ ಇದರಲ್ಲಿ ನಾನಾ ವೆರೈಂಟಿಗಳಿವೆ. ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಮೈಸೂರು ಇಡ್ಲಿ, ಮಸಾಲೆ ಇಡ್ಲಿ ಹೀಗೆ ನಾನಾ ತರಹದ ಇಡ್ಲಿಗಳ ರುಚಿ ಸವಿದಿದ್ದೀರಬಹುದು. ಆದರೆ ಇದೀಗ ಉತ್ತರ ಭಾರತೀಗರು (north Indians) ಇಡ್ಲಿ ಮೇಲೆ ಹೊಸ ಪ್ರಯೋಗ ಮಾಡಿದ್ದಾರೆ. ಇದು ಇಡ್ಲಿ ಪ್ರಿಯರನ್ನು ಕೆರಳಿಸಿದೆ. ಹೌದು ಉತ್ತರ ಭಾರತದಲ್ಲಿ ಇಡ್ಲಿ ಬೋಂಡಾ ತಯಾರಿಸುವ ವಿಡಿಯೋ ವೈರಲ್ ಆಗಿದೆ.

Adhavan ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಉತ್ತರ ಭಾರತದಲ್ಲಿ ತಯಾರಿಸಲಾದ ಇಡ್ಲಿಯ ವಿಭಿನ್ನ ಖಾದ್ಯದ್ದಾಗಿದೆ. ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತು ಹೋಗಿದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇಲ್ಲಿ ವ್ಯಕ್ತಿಯೊಬ್ಬ ಮೃದುವಾದ ಮಲ್ಲಿಗೆಯಂತಹ ಇಡ್ಲಿ ರುಚಿಕರ ಇಡ್ಲಿ ಬೋಂಡಾ ತಯಾರಿಸಿದ್ದಾನೆ. ಗರಿಗರಿಯಾದ ಇಡ್ಲಿ ಬೋಂಡಾವನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಅದಕ್ಕೆ ಸಾಂಬಾರ್ ಹಾಗೂ ಚಟ್ನಿ ಸೇರಿಸಿ ಗ್ರಾಹಕರಿಗೆ ಕೊಡುವುದನ್ನು ನೀವು ನೋಡಬಹುದು. ರಸ್ತೆ ಬದಿಯ ಸಣ್ಣ ಅಂಗಡಿಯೊಂದರ ವಿಡಿಯೋ ಇದಾಗಿದೆ.

ಇದನ್ನೂ ಓದಿ:ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ

ಈ ವಿಡಿಯೋ ಇದುವರೆಗೆ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ.. ಒಬ್ಬ ಬಳಕೆದಾರ ಇಡ್ಲಿ ಮರ್ಯಾದೆಯನ್ನು ಉತ್ತರ ಭಾರತದವರು ತೆಗೆದರು ಎಂದಿದ್ದಾರೆ. ಇನ್ನೊಬ್ಬರು, ಉದ್ದಿನ ವಡೆ ಬಗ್ಗೆಯಾದ್ರೂ ತಿಳಿದಿದೆ, ಆದರೆ ಇಡ್ಲಿಯನ್ನು ಕೆಂಪಾಗಿ ಕರಿದ ಈ ಖಾದ್ಯ ಯಾವುದು ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಇಡ್ಲಿಯ ಹತ್ಯೆಯಾಗಿದೆ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:01 pm, Tue, 25 November 25