Optical Illusion: ನಿಮ್ಮ ಕಣ್ಣಿಗೊಂದು ಸವಾಲ್‌; ಈ ಚಿತ್ರದಲ್ಲಿ ಮರೆಮಾಡಲಾಗಿರುವ ಕಪ್ ಕೇಕ್ ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಿ ಮೋಸಗೊಳಿಸುತ್ತವೆ. ಇಂತಹ ಟ್ರಿಕ್ಕಿ ಒಗಟನ್ನು ಬಿಡಿಸಲು ಎಲ್ಲರಿಗೂ ಸಾಧ್ಯವಾಗಲ್ಲ. ಆದರೆ ಇದೀಗ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಇದು ನಿಮ್ಮ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಈ ಚಿತ್ರದಲ್ಲಿ ಕಪ್ ಕೇಕ್ ಎಲ್ಲಿದೆ ಎಂದು ಕಂಡುಹಿಡಿಯುವ ಸವಾಲು ನೀಡಲಾಗಿದೆ. ನಿಮ್ಮ ಬುದ್ಧಿ ಉಪಯೋಗಿಸಿ ಒಗಟು ಬಿಡಿಸಿ.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್‌; ಈ ಚಿತ್ರದಲ್ಲಿ ಮರೆಮಾಡಲಾಗಿರುವ ಕಪ್ ಕೇಕ್ ಗುರುತಿಸಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Mar 10, 2026 | 4:11 PM

ಮನಸ್ಸು ಹಾಗೂ ಮೈಂಡ್ ರಿಲ್ಯಾಕ್ಸ್ ಆಗಬೇಕೆಂದರೆ ಟ್ರಿಕ್ಕಿ ಒಗಟುಗಳತ್ತ ಗಮನ ಹರಿಸುವುದು ಒಳ್ಳೆಯದು. ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಹೆಚ್ಚಿನವರು ಇಂತಹ ಒಗಟನ್ನು ಬಿಡಿಸಲು ಹೋಗಿ ವಿಫಲರಾಗುತ್ತಾರೆ. ಇದೀಗ ನೀವು ನಿಮ್ಮ ಮೆದುಳಿನ ತೀಕ್ಷ್ಣತೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ.  ಈ ಚಿತ್ರದಲ್ಲಿ ಕಾಡು ಪ್ರಾಣಿಗಳಿದ್ದು, ಇದರ ನಡುವೆ ಕಪ್ ಕೇಕನ್ನು ಮರೆ ಮಾಡಲಾಗಿದೆ. ಈ ಕಠಿಣ ಸವಾಲಿನ ಚಿತ್ರದಲ್ಲಿ ಮರೆಮಾಡಲಾಗಿರುವ  ಗುಪ್ತ ವಸ್ತುವನ್ನು 10 ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಚಿತ್ರದಲ್ಲಿ ಕಾಡಿನ ಸುಂದರವಾದ ಚಿತ್ರಣವಿದೆ. ಹಚ್ಚ ಹಸಿರಿನಿಂದ ಕೂಡಿದ ಸಣ್ಣ ಸಸ್ಯಗಳು, ಮರಗಳು ಹಾಗೂ ವಿವಿಧ ಪ್ರಾಣಿಗಳು ಇವೆ. ಇದೆಲ್ಲದರ ನಡುವೆ ಕಪ್ ಕೇಕ್ ಇದೆ. ನೀವು ಈ ವಸ್ತುವನ್ನು ಕಂಡು ಹಿಡಿಯಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಚುಕ್ಕೆಗಳಿಲ್ಲದ ಶ್ವಾನವನ್ನು ಜಸ್ಟ್ 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ

ಕಪ್ ಕೇಕ್ ನಿಮ್ಮ ಕಣ್ಣಿಗೆ ಕಾಣಿಸಿತೇ?

ಇಲ್ಯೂಷನ್ ಚಿತ್ರಗಳು ಭ್ರಮೆಯಲ್ಲಿ ಸಿಲುಕಿಸುವ ಕಾರಣ ಗುಪ್ತ ವಸ್ತುಗಳನ್ನು ಕಂಡು ಹಿಡಿಯುವುದು ಅಸಾಧ್ಯ.  ನೀವು ಕಣ್ಣು ಅಗಲಿಸಿ  ಈ ಚಿತ್ರ ನೋಡಿದರೂ ಕಪ್ ಕೇಕ್ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ಚಿಂತಿಸಬೇಡಿ. ಕೆಳಗಿನ ಚಿತ್ರದಲ್ಲಿ ಕಪ್ ಕೇಕ್‌ನ್ನು ನಾವೇ ಗುರುತಿಸಿದ್ದು, ನಿಮ್ಮ ಮೆದುಳಿಗೆ ಕೆಲಸ ನೀಡುವುದನ್ನು ಕಡಿಮೆ ಮಾಡಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us